Sunday, 8th September 2024

ಸಂತಸದ ಸಂದರ್ಭದಲ್ಲಿ ಆಘಾತಕಾರಿ ಅಂಶ

ಕರೋನಾ ಸಂಕಷ್ಟದ ಸಂದರ್ಭದಲ್ಲಿ 150ಕ್ಕೂ ಹೆಚ್ಚಿನ ರಾಷ್ಟ್ರಗಳಿಗೆ ಭಾರತವು ಆರೋಗ್ಯ ನೆರವು ನೀಡಿತ್ತು ಎಂಬುದು ಶ್ಲಾಘನಾರ್ಹ ಸಂಗತಿ.

ಇದೀಗ ನಾನಾ ದೇಶಗಳಿಗೆ ಲಸಿಕೆ ಪೂರೈಸುವಂತೆ ಬೇಡಿಕೆ ಹೆಚ್ಚುತ್ತಿದೆ. 20ಕ್ಕೂ ಅಧಿಕ ರಾಷ್ಟ್ರಗಳಿಗೆ ಲಸಿಕೆ ವಿತರಿಸಿರುವ ಭಾರತಕ್ಕೀಗ ಕೆನಡಾ ದೇಶಕ್ಕೂ ಲಸಿಕೆ ಪೂರೈಸುವಂತೆ ಕೋರಲಾಗಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಕರೆಗೆ ಪ್ರಧಾನಿ ಮೋದಿಯವರೂ ಒಪ್ಪಿಗೆ ಸೂಚಿಸಿದ್ದಾರೆ.

ಮೆಕ್ಸಿಕೋಗೆ 1 ದಶಲಕ್ಷ ಡೋಸ್ ಲಸಿಕೆಯನ್ನು ಭಾರತದಿಂದ ಕಳುಹಿಸಲಾಗಿದೆ. ಈ ಬೆಳವಣಿಗೆಯಿಂದ ಭಾರತದ ಸಾಧನೆ, ಇತರ
ರಾಷ್ಟ್ರಗಳಿಗೆ ನೆರವಾಗುವ ಮನೋಭಾವ ಗುರುತಿಸಬಹುದು. ಕರೋನಾ ನಿಯಂತ್ರಣ, ನಿವಾರಣೆ ಹಾಗೂ ಲಸಿಕೆ ವಿಚಾರದಲ್ಲಿ ಮಹತ್ವದನ್ನು ಸಾಧಿಸಿದ ಭಾರತಕ್ಕೆ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಹಲವು ದೇಶಗಳಲ್ಲಿ ಕರೋನಾದಿಂದ ಮೃತಪಟ್ಟಿರುವ ಭಾರತೀಯರ ಸಂಖ್ಯೆ 2 ಸಾವಿರವನ್ನೂ ಮೀರಿದೆ.

ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ರಾಷ್ಟ್ರವೊಂದರಲ್ಲಿಯೇ 375 ಭಾರತೀಯರು ಮೃತಪಟ್ಟಿದ್ದಾರೆ. ಪಶ್ಚಿಮ ಏಷ್ಯ ದೇಶಗಳಲ್ಲಿಯೇ ಹೆಚ್ಚಿನ ಭಾರತೀಯರು ಮೃತಪಟ್ಟಿದ್ದು, ಕುವೈತ್ ನಲ್ಲಿ 369, ಒಮಾನ್‌ನಲ್ಲಿ 166, ಬಹ್ರೈನ್‌ನಲ್ಲಿ 48 ಭಾರತೀಯರು ಮೃತಪಟ್ಟಿದ್ದಾರೆ.

ಹಲವು ರಾಷ್ಟ್ರಗಳಿಗೆ ಆಸರೆಯಾಗಿ ನಿಂತಿರುವ ಭಾರತವು ಇದೀಗ ಕರೋನಾದಿಂದಾಗಿ ಎರಡು ಸಾವಿರಕ್ಕೂ ಅಕ ಭಾರತೀಯ ರನ್ನು ಕಳೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ.

Leave a Reply

Your email address will not be published. Required fields are marked *

error: Content is protected !!