Thursday, 19th September 2024

ತಮಿಳುನಾಡು ರಾಜಕೀಯ ಹೊಸ ಹುರುಪು

ದೇಶದ ರಾಜಕೀಯ ಚಟುವಟಿಕೆಯಲ್ಲಿ ಅಚ್ಚರಿಯ ಕ್ಷೇತ್ರ ತಮಿಳುನಾಡು. ಪ್ರಾದೇಶಿಕ ಪಕ್ಷಗಳಿಂದಲೇ ತನ್ನ ಶಕ್ತಿ ಸಾಮರ್ಥ್ಯ
ವನ್ನು ಪ್ರದರ್ಶಿಸುತ್ತಾ ಕೇಂದ್ರ ಸರಕಾರವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ಸು ಸಾಧಿಸಿರುವ ರಾಜ್ಯ.

ಆದರೆ ಈ ರಾಜ್ಯದ ರಾಜಕಾರಣಕ್ಕೆ ಜಯಲಲಿತಾರ ಸಾವು ದೊಡ್ಡ ಆಘಾತವನ್ನು ನೀಡಿತ್ತು. 1996ರಿಂದ ಇದುವರೆಗೆ ಇಲ್ಲಿನ ರಾಜಕೀಯ ಚಟುವಟಿಕೆ ಕಳೆಗುಂದಿದಂತೆ ಕಂಡುಬಂದಿದ್ದು, ಇದೀಗ ಮತ್ತೆ ಚೇತರಿಕೆ ಕಾಣುವ ಬೆಳವಣಿಗೆ ನಿರ್ಮಾಣವಾಗಿದೆ. ತೊಂಬತ್ತರ ದಶಕದ ಇಲ್ಲಿನ ರಾಜಕೀಯವನ್ನು ಗಮನಿಸಿದರೆ ಪ್ರಮುಖವಾಗಿ ಪೈಪೋಟಿ ನೀಡಿರುವುದು ಎರಡು ಪಕ್ಷಗಳು ಹಾಗೂ ಮೂವರು ವ್ಯಕ್ತಿಗಳು ಮಾತ್ರವೆ.

ಬಹಳಷ್ಟು ಬಾರಿ ರಾಷ್ಟ್ರಪತಿ ಆಡಳಿತದ ಕಂಡಿರುವುದು ಇಲ್ಲಿನ ಮತ್ತೊಂದು ಅಚ್ಚರಿ. ಮೊದಲಿನಿಂದಲೂ ಕಾಂಗ್ರೆಸ್ ಪಾಬಲ್ಯ ವಿದ್ದ ತಮಿಳು ನಾಡಿನಲ್ಲಿ 1969ರಲ್ಲಿ ಡಿಎಂಕೆ ಪಕ್ಷದಿಂದ ಸಿ.ಎನ್. ಅಣ್ಣಾದೊರೈ ಪ್ರಾದೇಶಿಕ ಪಕ್ಷಗಳ ಆಡಳಿತಕ್ಕೆ ಬಂದರು. ಅಂದಿನಿಂದ ಇಂದಿಗೂ ಕೂಡ ಪ್ರಾದೇಶಿಕ ಪಕ್ಷಗಳ ಆಡಳಿತವೇ ಮುಂದುವರಿದಿರುವುದು ವಿಶೇಷ.

1969ರಿಂದ ಇಂದಿನವರೆಗೆ 51ವರ್ಷಗಳ ರಾಜಕೀಯ ತಿಹಾಸದಲ್ಲಿ ಪ್ರಬಲ ಪೈಟೋಟಿ ಸಾಧಿಸಿರುವುದು ಡಿಎಂಕೆ ಮತ್ತು
ಎಐಎಡಿಎಂಕೆ ಪಕ್ಷಗಳು ಮಾತ್ರ. ಡಿಎಂಕೆ ಪಕ್ಷದ ಕರುಣಾನಿಧಿ ಹಾಗೂ ಎಐಎಡಿಎಂಕೆ ಪಕ್ಷದ ಎಂ.ಜಿ.ರಾಮಚಂದ್ರನ್ ನಡುವೆಯೇ ಪ್ರಬಲ ಪೈಪೋಟಿ ಸಾಧಿಸಿಕೊಂಡುಬಂದಿದ್ದ ತಮಿಳುನಾಡಿನಲ್ಲಿ 1991ರಿಂದ ಜಯಲಲಿತಾರ ಯುಗ ಆರಂಭ ಗೊಂಡಿತು.

ಎಐಎಡಿಎಂಕೆ ಪಕ್ಷದಿಂದ ಜಯಲಲಿತಾ ಮುಖ್ಯಮಂತ್ರಿಯಾಗುವ ಮೊದಲೇ ಇದೇ ಪಕ್ಷದಿಂದ ವಿ.ಎನ್.ಜಾನಕಿ ರಾಮಚಂದ್ರನ್ ಮುಖ್ಯಮಂತ್ರಿ ಸ್ಥಾನ ಗಳಿಸಿದರೂ, ಅಧಿಕಾರ ನಡೆಸಿದ್ದು ಕೇವಲ 23ದಿನಗಳು ಮಾತ್ರ. ಎಐಎಡಿಎಂಕೆಯಿಂದ ಎಂ.ಜಿ.ರಾಮ ಚಂದ್ರನ್ ನಂತರ ಮಹತ್ವದ ಮನ್ನಣೆಗಳಿಸಿ ಜನತೆಯಲ್ಲಿ ವಿಶ್ವಾಸವನ್ನು ಮೂಡಿಸಿದ ನಾಯಕಿ ಜಯಲಲಿತಾ. ಇವರ ನಿಧನ ದಿಂದ ತಮಿಳುನಾಡಿನ ರಾಜಕೀಯದಲ್ಲಿ ಒಂದು ರೀತಿಯ ಮೌನ ಆವರಿಸಿತ್ತು.

ಇದೀಗ ಖ್ಯಾತ ನಟ ರಜನಿಕಾಂತ್ ರಾಜಕೀಯ ಪ್ರವೇಶಿಸುವ ಸೂಚನೆ ನೀಡಿದ್ದು, ಹೊಸ ಪಕ್ಷ ಸ್ಥಾಪಿಸುವುದಾಗಿ ಹೇಳಿಕೆ ನೀಡಿ ದ್ದಾರೆ. ಈ ಬೆಳವಣಿಗೆ ತಮಿಳುನಾಡಿನ ರಾಜಕೀಯ ಚಟುವಟಿಕೆಯಲ್ಲಿ ಹೊಸ ಚೈತನ್ಯ ಮೂಡುವ ಲಕ್ಷಣಗಳು ಕಂಡು ಬಂದಂತಾಗಿದೆ.