Sunday, 8th September 2024

ಸಂಭ್ರಮದ ಕ್ಷಣದಲ್ಲಿ ಸಂಕಷ್ಟ

ಕನ್ನಡ ಚಿತ್ರರಂಗದ ಪಾಲಿಗೆ ಪ್ರಸ್ತುತ ಮಹತ್ವದ ಕ್ಷಣ. ಕಾರಣ, ಕನ್ನಡದ ಮೊದಲ ವಾಕ್ಚಿತ್ರ 87 ವರ್ಷಗಳನ್ನು ಪೂರೈಸಿರು ವುದು. ಈ ಸಂಭ್ರಮದ ಕ್ಷಣದಲ್ಲಿ ಕನ್ನಡ ಚಿತ್ರರಂಗ ಇಂದಿಗೂ ಸಂಪೂರ್ಣವಾಗಿ ಚೇತರಿಕೆ ಕಾಣದೆ ಸಂಕಷ್ಟದ ಸ್ಥಿತಿಯಲ್ಲಿದೆ. ಇತ್ತೀಚೆಗೆ ನಟರಿಬ್ಬರ ಕುರಿತು ಉಂಟಾದ ವಿವಾದಗಳು ಮಹತ್ವ ಪಡೆದು ಕೆಲದಿನಗಳ ಕಾಲ ಸಂಚಲನ ಸೃಷ್ಟಿಸಿದವು.

ಆದರೆ ನಟ – ನಟಿಯರ ವಿವಾದಗಳ ಸಂಗತಿಗೆ ದೊರೆಯುತ್ತಿರುವಷ್ಟು ಮಾನ್ಯತೆಯೂ ಚಿತ್ರರಂಗದ ಸಮಸ್ಯೆಗಳಿಗೆ ದೊರೆಯು ತ್ತಿಲ್ಲ ಎಂಬುದು ವಿಷಾದನೀಯ. ಪ್ರಸ್ತುತ ವಿಶ್ವಮಟ್ಟದಲ್ಲಿ ಕನ್ನಡ ಚಿತ್ರರಂಗ ಬೆರಗು ಮೂಡಿಸುವಷ್ಟು ಪ್ರಭಾವ ಮೂಡಿಸಿವೆ ಎಂಬುದು ಸಂತಸದ ಸಂಗತಿಯಾದರೆ, ಮತ್ತೊಂದೆಡೆ ಕನ್ನಡ ಚಿತ್ರರಂಗದ ಸಮಸ್ಯೆಗಳು ಭರವಸೆಯಲ್ಲಿ ಸಾಗುತ್ತಿವೆ.

ಮಾರ್ಚ್ 3ಕ್ಕೆ ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ ತೆರೆಕಂಡ 88ನೇ ವರ್ಷದ ಸಂಭ್ರಮದ ದಿನ. 1934ರ ಮಾರ್ಚ್ 3 ರಂದು ಕನ್ನಡದ ಮೊದಲ ವಾಕ್ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸುಮಾರು ಆರು ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಚಿತ್ರಕ್ಕೀಗ 88ನೇ ವರ್ಷದ ಸಂಭ್ರಮ. ವಾಕ್ಚಿತ್ರ ಯುಗ ಆರಂಭಗೊಂಡು ಎಂಟು ದಶಕಗಳನ್ನು ಪೂರೈಸಿರುವ ಕನ್ನಡ ಚಿತ್ರರಂಗವು ಶ್ರೇಷ್ಠ ಚಿತ್ರಗಳು – ಉತ್ತಮ ನಟರು – ನಿರ್ದೇಶಕರನ್ನು ಒಳಗೊಂಡು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ.

ಆದರೂ ಚಿತ್ರರಂಗದ ಆಂತರಿಕ ಸಮಸ್ಯೆಗಳು ಇಂದಿಗೂ ಹಲವು. ಥಿಯೇಟರ್ ಸಮಸ್ಯೆ, ಚಿತ್ರನಗರಿ ಸ್ಥಾಪನೆ, ಕಲಾವಿದರು – ತಂತ್ರಜ್ಞರು – ನಿರ್ದೇಶಕರಿಗೆ ಮಾಸಾಶನ, ಅಶಕ್ತ ಕಲಾವಿದರಿಗೆ ನೆರವು, ಚಿತ್ರರಂಗಕ್ಕೆ ಕೈಗಾರಿಕಾ ಸ್ಥಾನಮಾನ, ಪೈರಸಿ ಹಾವಳಿ ನಿರ್ಮೂಲನೆ, ಜನತಾ ಥಿಯೇಟರ್‌ಗಳ ಸ್ಥಾಪನೆ, ಹೊಸ ಚಲನಚಿತ್ರನೀತಿ ರಚನೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಈ ಎಲ್ಲ
ಸಮಸ್ಯೆಗಳು ಸಭೆ, ಚರ್ಚೆ, ಭರವಸೆ ಗಳಲ್ಲಿಯೇ ದಿನಗಳನ್ನು ಕಳೆಯುತ್ತಿರುವುದು ಕನ್ನಡ ಚಿತ್ರರಂಗದ ಅಭಿವೃದ್ಧಿಯ ಕಡೆಗಣನೆಗೆ
ದೊರೆಯುವ ಸಾಕ್ಷಿ.

Leave a Reply

Your email address will not be published. Required fields are marked *

error: Content is protected !!