Saturday, 27th July 2024

ಡೆಂಘೀ: ಜಿಲ್ಲೆಯಲ್ಲಿ ಮೊದಲ ಬಲಿ

ತುಮಕೂರು:  ಡೆಂಘೀಗೆ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದ್ದು, ಗುಣಶ್ರೀ(19) ಡೆಂಗ್ಯೂವಿನಿಂದಾಗಿ ಮೃತಪಟ್ಟಿದ್ದಾಳೆ. ಶಾಂತಿನಗರ ಕುಂಟಯ್ಯನ ತೋಟ ಬಡಾವಣೆಯ ನಿವಾಸಿ ರಾಜು ಎಂಬುವರ ಪುತ್ರಿ ಗುಣಶ್ರೀಗೆ ಜುಲೈ 12ರಂದು ಜ್ವರ ಕಾಣಿಸಿಕೊಂಡಿತ್ತು. ಪೋಷಕರು ಈಕೆಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿದ್ದರು. ಗುಣವಾಗದ ಹಿನ್ನೆಲೆಯಲ್ಲಿ ಜು.17ಕ್ಕೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಜುಲೈ 18ರಂದು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ  ಗುಣಶ್ರೀ ಕೊನೆಯುಸಿರೆಳೆದಿದ್ದಾಳೆ. ಆರೋಗ್ಯ ಇಲಾಖೆಯು ಡೆಂಘೀನಿಂದ ಮೃತಪಟ್ಟಿರುವ ಬಗ್ಗೆ  ದೃಢಪಡಿಸಿದೆ.

ಮುಂದೆ ಓದಿ

ಕುಲಪತಿ ಹುದ್ದೆ ಅಧಿಕಾರವಲ್ಲ, ಜವಾಬ್ದಾರಿ: ಕುಲಪತಿ

ತುಮಕೂರು: ಕುಲಪತಿ ಹುದ್ದೆ ಅಧಿಕಾರವಾಲ್ಲ, ವಾಸ್ತವವಾಗಿ ಅದೊಂದು ಜವಾಬ್ದಾರಿ ಎಂದು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು. ತುಮಕೂರು ವಿವಿ ಕುಲಪತಿಯಾಗಿ ಅಧಿಕಾರ ಅವಧಿಯ ಎರಡು...

ಮುಂದೆ ಓದಿ

ಸಿದ್ಧಗಂಗಾ ಮೆಡಿಕಲ್‌ ಕಾಲೇಜಿನಲ್ಲಿ ಉಚಿತ ಮೂಳೆ ಶಸ್ತ್ರಚಿಕಿತ್ಸೆ

ತುಮಕೂರು: ಸಿದ್ಧಗಂಗಾ ಮೆಡಿಕಲ್‌ ಕಾಲೇಜು ವತಿಯಿಂದ ದಿ ಇಂಡಿಯನ್‌ ಆರ್ಥೋಪೆಡಿಕ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಆಗಸ್ಟ್‌ 5 ರಿಂದ 10 ರವರೆಗೆ ಉಚಿತ ಮೂಳೆ ರೋಗ ಶಸ್ತ್ರಚಿಕಿತ್ಸಾ ಶಿಬಿರ...

ಮುಂದೆ ಓದಿ

ಮುಂಗಾರು ಬೆಳೆ ಸಮೀಕ್ಷೆಗೆ ಮನವಿ 

ತುಮಕೂರು: ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆದ ತಮ್ಮ ಜಮೀನಿನ ಬೆಳೆ ವಿವರವನ್ನು “ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್”ನಲ್ಲಿ ದಾಖಲಿಸ ಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಗುಬ್ಬಿ...

ಮುಂದೆ ಓದಿ

ಸಿದ್ಧಗಂಗಾ ಮೆಡಿಕಲ್‌ ಕಾಲೇಜಿನಲ್ಲಿ ಉಚಿತ ಮೂಳೆ ಶಸ್ತ್ರಚಿಕಿತ್ಸೆ

ತುಮಕೂರು: ಸಿದ್ಧಗಂಗಾ ಮೆಡಿಕಲ್‌ ಕಾಲೇಜು ವತಿಯಿಂದ ದಿ ಇಂಡಿಯನ್‌ ಆರ್ಥೋಪೆಡಿಕ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಆಗಸ್ಟ್‌ 5 ರಿಂದ 10 ರವರೆಗೆ ಉಚಿತ ಮೂಳೆ ರೋಗ ಶಸ್ತ್ರಚಿಕಿತ್ಸಾ ಶಿಬಿರ...

ಮುಂದೆ ಓದಿ

42 ಕಡೆ ಜ್ವರ ಚಿಕಿತ್ಸಾ ಕೇಂದ್ರ ಆರಂಭ 

ತುಮಕೂರು: ನಗರ ಸೇರಿದಂತೆ ಜಿಲ್ಲೆಯಲ್ಲಿ ಡೆಂಘೀ ಜ್ವರ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿ.ಪಂ. ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ...

ಮುಂದೆ ಓದಿ

ಬಾಲ್ಯ ವಿವಾಹಗಳು ನಡೆಯದಂತೆ ಕಟ್ಟೆಚ್ಚರ ವಹಿಸಲು ಸೂಚನೆ 

ತುಮಕೂರು: ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ನಡೆಯದಂತೆ ಕಟ್ಟೆಚ್ಚರವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು...

ಮುಂದೆ ಓದಿ

ರೈತರಿಗೆ ಆಧುನಿಕ ಕೃಷಿ ಚಟುವಟಿಕೆ ಮತ್ತು ಜ್ಞಾನ ಅಗತ್ಯ -ಡಾ.ನಾಗಭೂಷಣ್

 ಚಿಕ್ಕನಾಯಕನಹಳ್ಳಿ : ಇಂದಿನ ಪ್ರಸ್ತುತ ಅಗತ್ಯ ಸನ್ನಿವೇಶದಲ್ಲಿ  ರೈತರು ಆಧುನಿಕ  ಕೃಷಿ ಚಟುವಟಿಕೆಗಳನ್ನು ಉಳಿಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು   ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ...

ಮುಂದೆ ಓದಿ

1 ಕೋಟಿಗೂ ಅಧಿಕ ಮೌಲ್ಯದ ರಕ್ತಚಂದನ ವಶ

ತುಮಕೂರು: ಅಕ್ರಮವಾಗಿ ರಕ್ತ ಚಂದನದ ತುಂಡುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿ ಲಾರಿ ಚಾಲಕನನ್ನು ಬಂಧಿಸಿ 1 ಕೋಟಿಗೂ ಅಧಿಕ ಮೌಲ್ಯದ ರಕ್ತಚಂದನದ...

ಮುಂದೆ ಓದಿ

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ : ಜು.27ರಿಂದ ವಾಹನ ಸಂಚಾರ ಕಾರ್ಯಾಚರಣೆ 

ತುಮಕೂರು:  ನಗರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ದೇವರಾಜ ಅರಸು ಬಸ್ ನಿಲ್ದಾಣದಿಂದ ಜು.27 ರಿಂದ ವಾಹನಗಳ ಕಾರ್ಯಾಚರಣೆ ಪ್ರಾರಂಭವಾಗಲಿದೆ ಎಂದು ಕರ್ನಾಟಕ ರಾಜ್ಯ...

ಮುಂದೆ ಓದಿ

error: Content is protected !!