Sunday, 23rd June 2024

322 ಹೊಸ ಕೋವಿಡ್ 19 ಪ್ರಕರಣ ಪತ್ತೆ

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 322 ಹೊಸ ಕೋವಿಡ್ 19 ಪ್ರಕರಣಗಳು ಮತ್ತು ಒಂದು ಸಾವು ದಾಖಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,742ಕ್ಕೆ ತಲುಪಿದ್ದು, ಕೇರಳದಲ್ಲಿ 128 ಪ್ರಕರಣಗಳು ವರದಿಯಾಗಿದೆ. ಇನ್ನು, ಕರ್ನಾಟಕದಲ್ಲಿ 96 ಪ್ರಕರಣಗಳು ಪತ್ತೆಯಾಗಿದ್ದಾರೆ, ಮಹಾರಾಷ್ಟ್ರದಲ್ಲಿ 35 ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ ದೆಹಲಿಯಲ್ಲಿ 16 ಹೊಸ ಪ್ರಕರಣಗಳು ದಾಖಲಾಗಿವೆ.
ದೇಶದಲ್ಲಿನ ಕೋವಿಡ್ ಅಂಕಿ ಅಂಶಗಳ ಪ್ರಕಾರ, ಈವರೆಗೂ 4.50 ಕೋಟಿ ಮಂದಿಗೆ ಸೋಂಕು ತಗುಲಿದ್ದು, ಅದರಲ್ಲಿ 4.44 ಕೋಟಿ ಮಂದಿ ಗುಣಮುಖ ರಾಗಿದ್ದಾರೆ. 5.33 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ, ಗುಣಮುಖರ ಪ್ರಮಾಣವು ಸೇ.97.81ರಷ್ಟು ಹಾಗೂ ಮರಣ ದರವು ಶೇ.1.19ರಷ್ಟು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!