ಬಾಗಲಕೋಟೆ: ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ 39 ಕೈದಿಗಳು ಹಾಗೂ ಸಿಬ್ಬಂದಿಯೊಬ್ಬರಿಗೆ ಸೋಮವಾರ ಕೋವಿಡ್ ಸೋಂಕು ದೃಢಪಟ್ಟಿದೆ.
ಕಾರಾಗೃಹದಲ್ಲಿ 9 ಮಹಿಳೆಯರು ಸೇರಿದಂತೆ, 164 ಮಂದಿ ಕೈದಿಗಳು ಇದ್ದಾರೆ. ಅವರಲ್ಲಿ ಪುರುಷರ ಬ್ಯಾರಕ್ನಲ್ಲಿ ಇರುವವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.
‘ಕಾರಾಗೃಹದಲ್ಲಿ ಇದ್ದ ಕೈದಿಯೊಬ್ಬರನ್ನು ಏ.19ರಂದು ಅಮೀನಗಡ ಪೊಲೀಸರು ಕಸ್ಟಡಿಗೆ ಪಡೆದಿದ್ದರು. ವಿಚಾರಣೆ ನಂತರ ಏ.24ರಂದು ವಾಪಸ್ ಜೈಲಿಗೆ ಕರೆತಂದು ಬಿಟ್ಟಿದ್ದರು. ಈ ವೇಳೆ ಕೋವಿಡ್ ರ್ಯಾಪಿಡ್ ಪರೀಕ್ಷೆ ಮಾಡಿಸಲಾಗಿದ್ದು, ವರದಿ ನೆಗೆಟಿವ್ ಬಂದಿತ್ತು. ಆದರೆ ಆರ್ಟಿಪಿಸಿಆರ್ ವರದಿಯಲ್ಲಿ ಪಾಸಿಟಿವ್ ಬಂದಿದೆ. ಹೀಗಾಗಿ ಕಾರಾಗೃಹದಲ್ಲಿದ್ದ ಎಲ್ಲ ಕೈದಿಗಳು ಹಾಗೂ ಸಿಬ್ಬಂದಿಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಯಿತು. ಈ ವೇಳೆ ಇನ್ನಷ್ಟು ಮಂದಿಗೆ ಸೋಂಕು ದೃಢಪಟ್ಟಿದೆ’ ಎಂದು ವರದಿಯಾಗಿದೆ.