Saturday, 27th July 2024

ಕದನ ವಿರಾಮ ಅಂತ್ಯ: ಇಸ್ರೇಲ್‌ ಪಡೆ ದಾಳಿ ಆರಂಭ

ಗಾಜಾ: ಇಸ್ರೇಲ್ ಭೂ ಪ್ರದೇಶದ ಕಡೆಗೆ ಗುಂಡು ಹಾರಿಸುವ ಮೂಲಕ ಪ್ಯಾಲೆಸ್ಟೀನ್‌ ಬಂಡುಕೋರರ ಗುಂಪು ತಾತ್ಕಾಲಿಕ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಇಸ್ರೇಲ್‌ ಸೇನೆ ಹಮಾಸ್ ವಿರುದ್ಧ ಗಾಜಾದಲ್ಲಿ ಯುದ್ಧ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ.

ಏಳು ದಿನಗಳ ಕದನ ವಿರಾಮ ಮುಗಿಯುವ ಒಂದು ಗಂಟೆಯ ಮೊದಲು, ಗಾಜಾದಿಂದ ಹಾರಿಸಲಾದ ರಾಕೆಟ್ ಅನ್ನು ತಡೆಯಲಾಗಿದೆ ಎಂದು ಇಸ್ರೇಲ್ ಹೇಳಿದೆ. ಗಾಜಾ ಬಳಿಯ ಇಸ್ರೇಲಿ ಪ್ರದೇಶದಲ್ಲಿ ರಾಕೆಟ್‌ ದಾಳಿಯ ಎಚ್ಚರಿಕೆಯ ಸೈರನ್‌ಗಳು ಸದ್ದು ಮಾಡಿವೆ ಎಂದು ಇಸ್ರೇಲ್‌ ಮಿಲಿಟರಿ ಪಡೆ ಹೇಳಿದೆ.

ಆದರೆ ದಾಳಿಯ ಬಗ್ಗೆ ಹಮಾಸ್‌ ಹೊಣೆ ಹೊತ್ತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇತ್ತ, ಪ್ಯಾಲೆಸ್ಟೀನ್‌ ಮಾಧ್ಯಮಗಳು ಕದನ ವಿರಾಮದ ನಂತರ ಈಜಿಪ್ಟ್‌ನ ಗಡಿಯ ಸಮೀಪವಿರುವ ರಫಾ ಗಡಿ ಸೇರಿದಂತೆ ಹಲವೆಡೆ ಇಸ್ರೇಲ್‌ ಸೇನೆ ವಾಯು ಮತ್ತು ಫಿರಂಗಿ ದಾಳಿ ನಡೆಸಿದೆ ಎಂದು ವರದಿ ಮಾಡಿದೆ.

ಮೊದಲು 4 ದಿನ ಕದನ ವಿರಾಮಕ್ಕೆ ಅನುಮತಿ ನೀಡಲಾಗಿತ್ತು. ಬಳಿಕ ರಾಜತಾಂತ್ರಿಕ ಸಲಹೆಯ ಮೇಲೆ ಹಮಾಸ್‌ ಮತ್ತು ಇಸ್ರೇಲ್‌ 3 ದಿನಗಳ ಯುದ್ಧ ವಿರಾಮ ಘೋಷಣೆ ಮಾಡಿತ್ತು. ಅದು ಇಂದಿಗೆಮುಕ್ತಾಯವಾಗಿದೆ. ಈವರೆಗೆ 110ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಹಮಾಸ್‌ ಬಿಡುಗಡೆ ಮಾಡಿದೆ.

Leave a Reply

Your email address will not be published. Required fields are marked *

error: Content is protected !!