Saturday, 25th May 2024

ಶಿಲಾ ಹಂದರದಲ್ಲಿ ಪ್ರವಾಸ

ನಿರ್ಮಾತೃಗಳಾದ ಎಸ್. ಎನ್. ರಮೇಶ್ ಮತ್ತು ಸಿ.ಹೆಚ್. ರಮೇಶ್ ಜೊತೆಗೂಡಿ ನಿಸರ್ಗದ ಮಡಿಲಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿದರು. ತಮಗಿದ್ದ ಸೌಂದರ್ಯ ಪ್ರಜ್ಞೆ ಮತ್ತು ಪರಿಸರ ಪ್ರೇಮವನ್ನು ಒಗ್ಗೂಡಿಸಿಕೊಂಡು ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ.

ಕಳೆದ ಮೂರು ದಶಕಗಳಿಂದಲೂ ಕಾಸ್ಮೊಪಾಲಿಟನ್ ನಗರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಹೆಗ್ಗಳಿಕೆ ಇವರದ್ದು. ಎಕೊ ಟೂರಿಸಂ, ಥೀಮ್ಡ್ ಹಾಸ್ಪೆಟಾಲಿಟಿ ಮತ್ತು ಸೌಂದರ್ಯೋಪಾಸಕ ಕಟ್ಟಡಗಳನ್ನೊಳಗೊಂಡಂತೆ ಭಿನ್ನ ಮಾದರಿಯ ರೆಸಾರ್ಟ್ ಗಳನ್ನು ಕರ್ನಾಟಕದ ವಿವಿದೆಡೆಗಳಲ್ಲಿ ರೂಪಿಸು ವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿ ಸಕಲೇಶಪುರದ ಬಳಿ -ಕೃಷಿಕ ಕಮ್ಯೂನಿಟಿ -ಮಿಂಗ್ ಬೆಳಕಿಗೆ ಬಂದಿದೆ. ಆಧುನಿಕ ಸಮಾಜದ ಸಮಸ್ಯೆಗಳಿಗೆ ಪರಿಹಾರಾತ್ಮಕವಾಗಿ ದೂರದೃಷ್ಟಿಯ ಕೂಸು ಇದಾಗಿದೆ.

‘ಯಶಸ್ಸು ಒಂದು ಪಯಣ, ಅದು ತಲುಪುವ ತಾಣವಲ್ಲ’ ಎಂಬ ಮಾತಿನಲ್ಲಿ ನಂಬಿಕೆ ಇಟ್ಟಿರುವ ಕನಸುಗಾರ ರಮೇಶ್ ಮೂಲತಃ ಓರ್ವ ಆರ್ಕಿಟೆಕ್ಟ್. ಮೊಟ್ಟಮೊದಲನೆಯದಾಗಿ ಗುಹಾಂತರವನ್ನು ತಮ್ಮ ಕಲ್ಪನೆಗನುಗುಣವಾಗಿ ಮನಸ್ಸಿಟ್ಟು ರೂಪಿಸಿ ಯಶಸ್ವಿ ಯಾದರು. ನಂತರದಲ್ಲಿ ಉದ್ಯಮಿಯಾಗಿ ಬೆಳೆದರು. ಶ್ರೀಯುತ ಎಸ್‌ಎನ್ ರಮೇಶ್ ಮತ್ತು ಸಿ.ಎಚ್. ರಮೇಶ್ ಈ ಇಬ್ಬರೂ ಸಾಧಕರು ಮೂಲತಃ ಚಿಕ್ಕಮಗಳೂರಿನವರು. ೧೯೮೮ರಲ್ಲಿ ಈ ಇಬ್ಬರು ನಿರ್ಮಾತೃಗಳು ಬೆಂಗಳೂರಿನಲ್ಲಿ ತಮ್ಮ ಪಯಣವನ್ನು ಒಟ್ಟಾಗಿ ಪ್ರಾರಂಭಿಸಿದರು.

೧೯೯೪ರಲ್ಲಿ ಇದುವರೆಗೆ ಪಡೆದ ಅನುಭವಗಳ ಆಧಾರದ ಮೇಲೆ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ಆರ್-ಸ್ಕೆ ರ್ ಡಿಸೈನ್ಸ್ ಅನ್ನು ಹುಟ್ಟುಹಾಕಿದರು.

? ೨೦೦೬ರಲ್ಲಿ ಗುಹಾಂತರ ಎಂಬ ಕನಸು ಆರ್-ಸ್ಕೈಯರ್ ಡಿಸೈನ್ಸ್ ನಿಂದ ಪ್ರಾರಂಭವಾಗಿ ೨೦೦೮ರಲ್ಲಿ ಪೂರ್ಣಗೊಂಡಿತು.
? ೨೦೦೮ರಲ್ಲಿ ಗುಹಾಂತರ ಬೆಂಗಳೂರಿನಲ್ಲಿ ಅತ್ಯುತ್ತಮ ಪ್ರಾಜೆಕ್ಟ್-೨೦೦೮ ಎಂದು ಅಕಾಮಡೇಶನ್ ಟೈಮ್ಸ್ ನಿಂದ ಪ್ರಶಸ್ತಿ ಪಡೆದುಕೊಂಡಿತು.

? ೨೦೦೯ರಲ್ಲಿ ರಾಶಿ ಎಕೊ ಟೂರಿಸಂ ಲಿ. ಸ್ಥಾಪಿಸಲಾಗಿದ್ದು ಇದು ಥೀಮ್ಡ್ ರೆಸಾರ್ಟ್ ಗಳ ಹಾಸ್ಪೆಟಾಲಿಟಿ ನಿರ್ವಹಣೆ ಮಾಡುತ್ತಿದೆ.

? ೨೦೧೫ರಲ್ಲಿ ರಾಮನಗರದ ಬಳಿ ಶಿಲ್ಹಾಂದರ ಸುಂದರವಾಗಿ ರೂಪುಗೊಂಡಿ ತು. ಇದೀಗ ಇಬ್ಬರು ನಿರ್ಮಾತೃಗಳು ಸಹ ಕಬಿನಿ, ಸಕಲೇಶಪುರ ಮತ್ತು ದೇಶದ ಇತರ ಭಾಗಗಳಲ್ಲಿ ಹೊಸ ತಾಣಗಳನ್ನು ಅನ್ವೇಶಿಸುತ್ತಿದ್ದಾರೆ.

ಗುಹಾಂತರ
ಗುಹಾಂತರ ಎಂಬ ಹೆಸರು ನಮ್ಮ ಪೂರ್ವಿಕರು ವಾಸಿಸುತ್ತಿದ್ದ ಗುಹೆಗಳ ಮುಕ್ತ, ನಿಸರ್ಗಮಯ ಬದುಕನ್ನು ನೆನಪಿಸುತ್ತದೆ. ಕನಕಪುರ ರಸ್ತೆಯಲ್ಲಿರುವ ಕಗ್ಗಲಿ ಪುರ ಬಳಿ ಗುಹಾಂತರ ಸ್ಥಾಪಿಸಲಾಗಿದೆ. ಬೆಂಗಳೂರಿನ ಸಮೀಪವಿರುವ ಈ ಗುಹಾಂತರ ನಾಗರಿಕತೆ ಹುಟ್ಟುವ ಮೊದಲಿದ್ದ ಮಾನವನ ಬದುಕಿನ ತದ್ರೂಪಿ ನಂತೆ ಅನಿಸಿದರೆ ಅಚ್ಚರಿಯಿಲ್ಲ. ಭಾರತದಲ್ಲೇ ಅತ್ಯಂತ ವಿಶಿಷ್ಠ ವಿನ್ಯಾಸ ವಿರುವ ಈ ರೆಸಾರ್ಟ್‌ನಲ್ಲಿ ಆಧುನಿಕ ಸೌಲಭ್ಯಗಳನ್ನು ಸಹ ಒಳಗೊಂಡಿದೆ.

ಗುಹಾಂತರ ರಚನೆಯಲ್ಲಿ ಬಳಸಲಾದ ತಂತಜ್ಞಾನ ಹೊಸತೇ ಆದರೂ ಅಲ್ಲಿ ನಿಂತಾಗ ಯಾವುದೋ ಪುರಾತನ ಗುಹೆಯನ್ನು ಹೊಕ್ಕ ಅನುಭವ ವೇದ್ಯವಾಗುತ್ತದೆ. ೩.೫ ಎಕರೆಗಳಲ್ಲಿ ಹರಡಿಕೊಂಡಿರುವ ಗುಹಾಂತರ ನಿಸರ್ಗದೊಂದಿಗೆ ಸೇರಿಹೋಗಿದೆ. ಮೋಜು-ಸಾಹಸಮಯ ಚಟುವಟಿಕೆಗಳಿಗೂ ಸಹ ಉತ್ತಮ ಅವಕಾಶ ಒದಗಿಸಲಾಗಿದೆ. ೩೦ ಅಡಿ ಆಳದಲ್ಲಿ ಈ ರೆಸಾರ್ಟ್ ರೂಪಿಸಿರುವುದು ವಿಶೇಷ ಅಂಶ. ಏರ್ ಕೂಲ್ ವ್ಯವಸ್ಥೆ ಹೊಂದಿರುವ ಸುಸಜ್ಜಿತ ೨೦ ಸೂಟ್‌ಗಳನ್ನು ನೆಲಮಾಳಿಗೆಯಲ್ಲಿ ರೂಪಿಸಲಾಗಿದೆ. ಇದರ ಜೊತೆಗೆ ಮಲ್ಟಿ ಕುಸಿನ್ ರೆಸ್ಟೋರೆಂಟ್, ಕಾಫಿ ಲಾಂಜ್, ನೈಸರ್ಗಿಕ ಕೆರೆಯಿರುವ ಈಜು ಕೊಳ ಇನ್ನಿತರ ಎರಡು ಈಜುಕೊಳಗಳು, ವಿಶಾಲವಾದ ಝರಿ ಸಹ ರೂಪುಗೊಂಡಿದೆ. ಸ್ಥಳೀಯ ರೈತರಿಗೂ ಉದ್ಯೋಗ ಕಲ್ಪಿಸಿರುವುದು ಇಲ್ಲಿಯ ವಿಶೇಷ.

ಇಲ್ಲಿಯ ಕೋಣೆಗಳು ಗುಹೆಯೊಂದಿಗೆ ಬದುಕುವಂತೆ ಅನುಭವ ಒದಗಿಸುವ ಸಲುವಾಗಿ ಮಣ್ಣಿನ ಹೊದಿಕೆಯನ್ನು ಹೊದ್ದ
ಗೋಡೆಗಳನ್ನು ರೂಪಿಸಲಾಗಿದೆ. ಗೋಡೆಗಳ ಮೇಲೆ ಬುಡಕಟ್ಟು ಜನಾಂಗದವರನ್ನು ನಿರೂಪಿಸುವ ಕಲಾಕುಸುರಿ ಎದ್ದು ಕಾಣುತ್ತದೆ. ಇದರ ಜೊತೆಗೆ ಪ್ರವಾಸಿಗರು ರೆಸಾರ್ಟ್‌ಗಳಲ್ಲಿ ಬಯಸುವ ಎಲ್ಲಾ ರೀತಿಯ ಲಕ್ಸುರಿಯನ್ನು ಸಹ ಒಳಗೊಂಡಿದೆ.
ಇನ್ನಿತರ ಸೌಲಭ್ಯಗಳೆಂದರೆ ವೈಫೈ, ಟೆಲಿವಿಶನ್, ಏರ್ ಕಂಡೀಶನ್ ಹೊಂದಿರುವ ಕೋಣೆಗಳು, ಕ್ಲಾಸಿ ಬಾತ್ ರೂಮ್ಸ್, ಸೆಕ್ಯುರಿಟಿ ಜೊತೆಗೆ ನಿಸರ್ಗದ ಸ್ಪರ್ಶ. ಇಲ್ಲಿನ ೨೦ ಕೋಣೆಗಳನ್ನು ಪ್ರಿಮಿಟಿವ್-ಡಬಲ್, ಲಿಥಿಕ್ ರೂಮ್, ಲಿಥಿಕ್ ಸೂಟ್ ಮತ್ತು ಕೇವ್ ಸೂಟ್ ಮೊದಲಾದವುಗಳಿವೆ. ಗುಹಾಂತರ ಪ್ರಿವಿಲೈಜ್ ಒಳಗೊಂಡಂತಹ ಒಂದು ದಿನದ ಪ್ಯಾಕೇಜ್, ಡೇ-ಔಟ್ ಪ್ಯಾಕೇಜ್, ಹೈ ಟಿ, ಡಿನ್ನರ್, ಡಾನ್ಸ್ ಮೊದಲಾದ ಸವಲತ್ತುಗಳಾಗಿವೆ.

ಅತಿಥಿಗಳ ಮನೋರಂಜನೆಗೆ, ಆಟೋಪಗಳು, ದೈಹಿಕ-ಮಾನಸಿಕ ಕ್ರಿಡೆಗಳು- ಹೊರಾಂಗಣ, ಒಳಾಂಗಣ ಕ್ರಿಡೆಗಳು ಸಹ ಇದೆ. ಆಧ್ಯಾತ್ಮಿಕ ಧ್ಯಾನಕ್ಕೂ ಸೂಕ್ತವಾದ ಸ್ಥಳ ಇದಾಗಿದ್ದು, ಗುಹೇಶ್ವರ ಸ್ವಾಮಿಯ ಸನ್ನಿಧಿ ಇಲ್ಲಿದೆ.

ಶಿಲ್ಹಾಂದರ
ಶಿಲ್ಹಾಂದರ – ರಾಮನಗರದಲ್ಲಿ ೨೦೧೫ರಲ್ಲಿ ಸ್ಥಾಪಿಸಲಾದ ‘ಶಿಲ್ಹಾಂದರ ರಾಶಿ ಎಕೊಟೂರಿಸಂ’ನ ಯಶಸ್ವಿ ಯೋಜನೆಯಾಗಿದೆ.
ಶಿಲೆಯ ಹಂದರವೇ ಶಿಲಾಂದರವೆಂಬಂತೆ ಬಂಡೆಗಳ ನಡುವೆ ಅರಳಿಕೊಂಡಿದೆ. ಈ ಹಿಂದೆ ಆಗಿಹೋದ ಸಾಮ್ರಾಜ್ಯಗಳ
ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ ಶಿಲಾಂದರ. ಶಿಲ್ಪಕಲೆಯಿಂದ ಸಾಗುತ್ತಾ ಕಲ್ಲಿನಲ್ಲಿ ಕಲೆ ಅರಳಿರುವುದನ್ನು ಕಾಣಬಹುದಾಗಿದೆ. ಚೋಳರಿಂದ ಚಾಳುಕ್ಯರಾದಿಯಾಗಿ, ಹೊಯ್ಸಳರಿಂದ ವಿಜಯನಗರ ಸಾಮ್ರಾಜ್ಯದಾದಿಯಾಗಿ ಎಲ್ಲದರ
ಅನುಭವ ಇಲ್ಲಿ ಉಂಟಾದರೆ ಅಚ್ಚರಿಯಿಲ್ಲ.

೮೦೦ ಅಡಿ ಏಕಶಿಲೆಯಲ್ಲಿ ಇಲ್ಲಿನ ಪ್ರಾಪರ್ಟಿ ಹೌಸ್ ಸೃಷ್ಟಿಸಲಾಗಿದೆ. ಅತಿಹೆಚ್ಚು ಸಾಹಸಿ ಕ್ರೀಡೆಗಳಿಗೆ ಇಲ್ಲಿ ಅವಕಾಶ ಒದಗಿಸಲಾಗಿದೆ. ಇಲ್ಲಿಯೇ ಆಯುರ್ವೇದಿಕ್ ಸ್ಪಾ ಸೇವೆಗಳನ್ನು ಒದಗಿಸಲಾಗುತ್ತಿದೆ. ಶಿಲ್ಹಾಂದರದ ಬಂಡೆಕಲ್ಲುಗಳ ನಡುವೆ ಒಂದೂವರೆ ಲಕ್ಷ ಮರಗಳನ್ನು ನೆಟ್ಟು ಬೆಳೆಸಿದ ಕೀರ್ತಿ ರಮೇಶ್ ಅವರದ್ದಾಗಿದೆ. ೩.೫ ಎಕರೆಗಳಲ್ಲಿ ಹರಡಿಕೊಂಡಿರುವ ರೆಸಾರ್ಟ್ ಜೊತೆಯಲ್ಲೇ ೧೦ ಎಕರೆ ಮ್ಯಾಂಗೋ ಪ್ಲಾಂಟೇಶನ್ ಇದೆ.

ಶಿಲ್ಹಾಂದರವು ಕಾರ್ಪೊರೇಟ್ ಡೆಸ್ಟಿನೇಷನ್ ಆಗಿದೆ. ಅತಿಥಿಗಳಿಗೆ ಹೊರಗಿನ ಈಜುಕೊಳಗಳು, ಪುರಾತನ ಬಾತ್ ಮಂಟಪಗಳು ಕಣ್ಸೆಳೆಯುತ್ತದೆ. ಐಟಿ ಹಬ್‌ನಿಂದ ಬಂದವರ ಒತ್ತಡದ ನಿವಾರಣೆಗಾಗಿ ಹಸಿರು ಕಣ್ಸೆಳೆಯುವಂತೆ ನಿರ್ಮಿಸಲಾಗಿದ್ದು, ತಂಡಗಳ ಜೊತೆಗೆ ಸಹ ಬರಬಹುದಾಗಿದೆ, ಕಾರ್ಪೊರೇಟ್ ಲಂಚ್ ಮತ್ತು ಡೇ-ಔಟ್‌ಗಾಗಿ ಸಹ ಆಗಮಿಸಬಹುದಾಗಿದೆ.

ಶಿಲ್ಹಾಂದರದ ರೂಮ್‌ಗಳನ್ನು ‘ಸೌಮಿತ್ರೇ’ ಮತ್ತು ‘ಸೌಗಂಧಿಕ’ ಎಂದು ವಿಭಾಗಿಸಲಾಗಿದೆ. ಇದು ಹಿಂದೆ ಇದ್ದಂತಹ ಸಾಮ್ರಾಜ್ಯ ಗಳ ಪ್ರತಿಷ್ಠೆಯನ್ನು ವಿರಾಜಿಸುತ್ತದೆ. ಇದು ಖಂಡಿತವಾಗಿ ಗೊಲ್ಡನ್ ಎರಾಗೆ ನಿಮ್ಮನ್ನು ಕೊಂಡೊಯ್ಯುತ್ತದೆ. ವಿಸ್ತಾರವಾದ ಈಜುಕೊಳ, ‘ಜಕುಝಿ ಬಾತ್’ ಸಹ ಇಲ್ಲಿನ ಕೋಣೆಗಳ ವಿಶೇಷವಾಗಿದೆ.

? ೨೦೦೬ರಲ್ಲಿ ಗುಹಾಂತರ ಎಂಬ ಕನಸು ಆರ್-ಸ್ಕೈಯರ್ ಡಿಸೈನ್ಸ್ ನಿಂದ ಪ್ರಾರಂಭವಾಗಿ ೨೦೦೮ರಲ್ಲಿ ಪೂರ್ಣಗೊಂಡಿತು.
? ೨೦೦೮ರಲ್ಲಿ ಗುಹಾಂತರ ಬೆಂಗಳೂರಿನಲ್ಲಿ ಅತ್ಯುತ್ತಮ ಪ್ರಾಜೆಕ್ಟ್-೨೦೦೮ ಎಂದು ಅಕಾಮಡೇಶನ್ ಟೈಮ್ಸ್ ನಿಂದ ಪ್ರಶಸ್ತಿ ಪಡೆದುಕೊಂಡಿತು.

? ೨೦೦೯ರಲ್ಲಿ ರಾಶಿ ಎಕೊ ಟೂರಿಸಂ ಲಿ. ಸ್ಥಾಪಿಸಲಾಗಿದ್ದು ಇದು ಥೀಮ್ಡ್ ರೆಸಾರ್ಟ್ ಗಳ ಹಾಸ್ಪೆಟಾಲಿಟಿ ನಿರ್ವಹಣೆ ಮಾಡುತ್ತಿದೆ.

? ೨೦೧೫ರಲ್ಲಿ ರಾಮನಗರದ ಬಳಿ ಶಿಲ್ಹಾಂದರ ಸುಂದರವಾಗಿ ರೂಪುಗೊಂಡಿತು.

Leave a Reply

Your email address will not be published. Required fields are marked *

error: Content is protected !!