Sunday, 19th May 2024

ಟೀಂ ಇಂಡಿಯಾ ಆಟಗಾರರಿಗೆ 7 ದಿನಗಳ ಕ್ವಾರಂಟೈನ್

ಮುಂಬೈ: ಆಸ್ಟ್ರೇಲಿಯಾ ಪ್ರವಾಸದಿಂದ ಭಾರತಕ್ಕೆ ಮರಳಿರುವ ಟೀಂ ಇಂಡಿಯಾದ ಐವರು ಸದಸ್ಯರಿಗೆ 7 ದಿನಗಳ ಕಡ್ಡಾಯ ಕ್ವಾರಂಟೈನ್​ನಲ್ಲಿ ಇಡಲಾಗಿದೆ ಎಂದು ವರದಿಯಾಗಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಕ್ರಿಕೆಟ್​ ತಂಡದ ಸದಸ್ಯರು ಕಡ್ಡಾಯ ಆರ್​ಟಿ – ಪಿಸಿಆರ್​ ಪರೀಕ್ಷೆಗೆ ಒಳಗಾಗಬೇಕು ಎಂದು ಬಿಎಂಸಿ ಕಮಿಷನರ್​ ಇಕ್ಬಾಲ್​ ಸಿಂಗ್​ ಚಾಹಲ್​ ಹೇಳಿದ್ದಾರೆ. ಮುಂದಿನ 7 ದಿನಗಳವರೆಗೂ ಆಟಗಾರರಿಗೆ ಹೋಂ ಕ್ವಾರಂಟೈನ್​​ನಲ್ಲಿ ಇರಬೇಕಾಗುತ್ತದೆ ಎಂದು ಹೇಳಿದರು.

ಬಿಎಂಸಿ ಸೂಚನೆಯಂತೆ, ಟೀಂ ಇಂಡಿಯಾ ಹಂಗಾಮಿ ನಾಯಕ ಅಜಿಂಕ್ಯ ರಹಾನೆ, ಆಟಗಾರರಾದ ರೋಹಿತ್ ಶರ್ಮಾ, ಶಾರ್ದೂಲ್​ ಠಾಕೂರ್​ ಹಾಗೂ ಪ್ರಥ್ವಿ ಶಾ ಹೋಂ ಮತ್ತು ಕೋಚ್​ ರವಿ ಶಾಸ್ತ್ರಿ ಕೂಡ ಮುಂಬೈಗೆ ಬಂದಿಳಿದಿದ್ದು ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!