Friday, 20th September 2024

ನಿಜವಾಗಿ ಕೊಲ್ಲುತ್ತಿರುವುದು ಕರೋನಾ ನಾ…?

ಪ್ರಸ್ತುತ
ಸುರಭಿ ಮುರಳೀಧರ

ಎಲ್ಲೆೆಡೆ ಈಗ ಕಾಡುತ್ತಿರುವುದು ಕರೋನಾ ಯಾವ ಪತ್ರಿಕೆಯನ್ನು ನೋಡಿದರು ಮಾಧ್ಯಮವನ್ನು ನೋಡಿದರೂ ಬರೀ ಕರೋನಾ…. ಕರೋನಾ…

ಆದರೆ ನಾ ಹೇಳಲು ಹೊರಟಿರುವುದು ಕರೋನಾ ಬಗ್ಗೆ ಅಲ್ಲ. ಒಂದು ತಾಯಿಯ ಸಂಕಷ್ಟದ ಬಗ್ಗೆ. ಒಬ್ಬ ತಂದೆ ಮುಚ್ಚಿಟ್ಟಿರುವ ನೋವಿನ ಬಗ್ಗೆ. ಒಬ್ಬಳು ಸಹೋದರಿಗೆ ಹೆದರುತ್ತಿರುವ ಮಾನದ ಬಗ್ಗೆ ನಾವು ಕಂಡಂತೆ ತಿಳಿದಂತೆ ಬೇರೆ ದೇಶಗಳೆಲ್ಲ ಊಟ ಮಾಡುವಾಗ ಒಂದು ಬಾರಿ ಬಡಿಸಿದ ಮೇಲೆ ನಂತರ ಥ್ಯಾಾಂಕ್ಯೂ ಹೇಳದೆ ಇದ್ದರೆ ಬೇರೆ ತಿಂಡಿಯನ್ನು ಹಾಕುವುದಿಲ್ಲ.

ಆದರೆ ನಮ್ಮ ದೇಶದಲ್ಲಿ ತಾಯಿಯ ಭಾವನೆ – ತನ್ನ ಮಗು ಹೊಟ್ಟೆ ತುಂಬಾ ತಿಂದರೆ ಸಾಕು ಎಂದು ಭಾವಿಸುತ್ತಾಳೆ. ಇದೇ
ಅಲ್ಲವೇ ಕರುಳು ಸಂಬಂಧ ಅನ್ನೋದು. ಒಬ್ಬಳು ತಾಯಿ ಒಂದು ಮಗುವನ್ನು 9 ತಿಂಗಳು ತಾನು ಸತ್ತು ಮತ್ತೆ ಹುಟ್ಟುತ್ತಾಳೆ. ಆದರೆ ಒಬ್ಬ ತಂದೆ ಜೀವನಪೂರ್ತಿ ಗದರು ಮಾತಿನಿಂದಲೇ ನೋವನ್ನು ಗತ್ತಿನಲ್ಲಿ ಇರಿಸುತ್ತಾನೆ. ಒಬ್ಬ ಸಹೋದರನಲ್ಲಿ ನನಗೆ ಆಟವಾಡಲು ಇದುವರೆಗೆ ಒಂದು ಗೊಂಬೆ ಇತ್ತು. ಆದರೆ ಈವಾಗ ನನಗೆ ಜೀವವಾದ ಗೊಂಬೆ ಇದೆ ಎಂದು ಸಂತೋಷ. ಇದು ಯಾವುದೇ ಒಂದು ಸಿನಿಮಾದ ಕಥೆಯಲ್ಲ.

ನಿತ್ಯಜೀವನದಲ್ಲಿ ನಡೆಯುತ್ತಿರುವ ಒಂದು ನೈಜ ಕಥೆ. ಭಾರತದ ಸಂಪ್ರದಾಯದ ಪ್ರಕಾರ ಮಗ ಎಂದರೆ ಮುಪ್ಪಿನ ಕಾಲದಲ್ಲಿ ನೆರವಾಗುತ್ತಾನೆ ಎಂಬ ನಂಬಿಕೆ. ಆದರೆ ಆತನಿಗೆ ಏನೂ ಗೊತ್ತಿದೆ ಹೇಳಿ, ವೃದ್ದಾಪ್ಯ ಎಂದರೆ ಆತನದ್ದು ಇನ್ನೂ ಯೌವನ
ಅನ್ನುವುದು ಒಂದು ಬಿಸಿರಕ್ತ ತುಂಬಿದ ಬದುಕು. ಇದರಲ್ಲಿ ಬರೀ ಆಕರ್ಷಣೆ ತುಂಬಿದೆ ಹೊರತು ಅದರಲ್ಲಿ ಬೆಲೆ ಇಲ್ಲ. ಅಪ್ಪ ನನ್ನ ಮಗ ಎಲ್ಲರಂತೆ ಖುಷಿಯಾಗಿರಲಿ ಎಂದು ಕಷ್ಟಪಟ್ಟು ಸಾಕುತ್ತಾನೆ.

ಆದರೆ ಮಗನಿಗೆ ತಿಳಿದಿರುವುದು ಅದು ಅವನ ಕರ್ತವ್ಯ ಎಂದು ಮಾತ್ರ. ಆ ತಾಯಿ ನನ್ನ ಮಗ ಊಟದ ಡಬ್ಬಿ ಕೊಂಡೊಯ್ಯಲು ನಾಚುತ್ತಾನೆ ಎಂದು ಮನೆಯಲ್ಲಿ ಇರುವವರ ಕಣ್ಣುತಪ್ಪಿಸಿ ಎಲ್ಲರಂತೆ ನೀ ಇರು ಎಂದು ಹಣ ಕೊಡುತ್ತಾಳೆ. ಆದರೆ ಆತನ ಕಣ್ಣಿಿಗೆ ಆ ಪ್ರೀತಿ ಕಾಣುವುದೇ ಇಲ್ಲ. ಇವರ ಪ್ರೀತಿ ಬಗ್ಗೆೆ ಬಿಡಿ ಮುಂದಿನ ಕಥೆ ನೋಡೋಣ.

ಈ ಬಾಲ್ಯದಲ್ಲಿ ನಾವೆಲ್ಲ ಮಾಡಿದ ತುಂಟಾಟಗಳು ತಪ್ಪುಗಳು ಯಾರಿಗೂ ದೊಡ್ಡದೆನಿಸುವುದಿಲ್ಲ. ಕಾರಣ ಮಕ್ಕಳು ಎಂದರೆ ಕ್ಷಮೆ ಇರುತ್ತದೆ. ಅದೇ ಯೌವನದಲ್ಲಿ ನಾವು ಮಾಡುವ ತಪ್ಪುಗಳು ಅಲ್ಲಿ ಅಲ್ಲ. ನಾವು ತೆಗೆದುಕೊಳ್ಳುವ ನಿರ್ಧಾರಗಳು ಅದೆಂತಹ ತಿರುವು ಉಂಟಾಗುವುದು ಎಂದು ಭಾವಿಸಲು ಸಾಧ್ಯವಿಲ್ಲ. ಚಿಕ್ಕವರಲ್ಲಿ ಇದ್ದಾಗ ನಾವು ಡಾಕ್ಟರ್, ಇಂಜಿನಿಯರ್, ಸಿಂಗರ್, ಹೀರೋ ಹೀಗೆ ಆಸೆಗಳನ್ನು ಇಟ್ಟುಕೊಂಡು ಬರುತ್ತೇವೆ. ಆದರೆ ಬರಬರುತ್ತಾ ನಮ್ಮನ್ನು ನಾವು ಯಾವುದೇ ಒಂದು ಆಕರ್ಷಣೆಗೆ
ಬಲಿಯಾಗಿ ನಾವು ಏನು ಎಂಬುದನ್ನು ಮರೆತು ಬಿಡುತ್ತೇವೆ.

ಬಳ್ಳಿ ಹಾಗೆ ಬೆಳೆಯಬಾರದು ನಮ್ಮ ಪೂರ್ವಜರು ಸುಮ್ಮನೆ ಹೇಳಿಲ್ಲ ಬಿಡಿ. ‘‘ಸಹವಾಸದಿಂದ ಸನ್ಯಾಸಿ ಕೆಟ್ಟ ಅಂತ’’. ಹಾಗೆ ಅವನು ಸಹ ತನ್ನವರ ಸಹವಾಸದಿಂದ ತನ್ನ ಬದುಕಿಗೆ ಅವನೇ ಮುಳ್ಳನ್ನು ತಂದು ಹಾಕ್ಕೊೊಂಡ. ಆದರೆ ಆ ಮಟ್ಟಿಗಿನ ನೋವು ಅವನಿಗಿಂತ ಅವನ ಮನೆಯವರು ನೋವು ಅನುಭವಿಸಿದರು. ಏನಪ್ಪಾ ಬರಿ ಹೇಳೋದೇ ಅಯಿತು ಅದು ಏನಾಯ್ತು ಅಂತ ಹೇಳಿಲ್ಲ ಅಂತ ಯೋಚಿಸುತ್ತಿದ್ದೀರಾ ಅಲ್ಲಾ? ಅದು ನಾ ಇಡುತ್ತಿರುವ ವಿಷಯನೇ ‘‘ಗಾಂಜಾ’’. ಒಬ್ಬ ಮನುಷ್ಯ ಕಾಯಿಲೆ ಬಿದ್ದು ಸತ್ತರೆ ಅಪಘಾತದಿಂದ ಸತ್ತರೆ ಅಷ್ಟು ಯಾರಿಗೂ ನೋವು ಉಂಟಾಗುವುದಿಲ್ಲ. ಆದರೆ ತಾನು ನರಳಿ ತನ್ನವರನ್ನು ನರಳಿಸಿ ನೆಮ್ಮದಿ ಕೊಡದೆ ಕಾಡುವುದು. ಇದನ್ನು ಯಾರು ಅನುಭವಿಸಲು ಇಷ್ಟಪಡುತ್ತಾರೆ ಹೇಳಿ? ಅವನ ಕೂಗಾಟ, ಅವನ ಕಿರುಚಾಟ, ಆತ ಏನು ಮಾಡುತ್ತಿದ್ದಾನೆ ಎಂಬುದೇ ಅರಿವಿಲ್ಲದಾಗ ಆತನ ಹೆತ್ತವರಿಗೆ ಎಷ್ಟು ನೋವು ಉಂಟಾಗುವುದು.

ಅವನ ನೋವಿಗಿಂತಲೂ ಹೆತ್ತವರ ಸಂಕಟ ಯಾರು ತಾನೇ ಬಯಸುತ್ತಾರೆ. ಅವನ ವರ್ತನೆಯಿಂದ ಎಲ್ಲಾ ಎಲ್ಲೆೆಡೆ ಮಾನ ಹಾಳಾಯಿತು. ಅವನಿಂದ ಅವಮಾನಿತರಾದ ತಂದೆ-ತಾಯಿ ಇತ್ತ ಬದುಕಲೂ ಆಗದೆ, ಸಾಯಲೂ ಆಗದೇ, ನರಳಿದ ದೃಶ್ಯ ನಮ್ಮ ಕಲ್ಪನೆಗೂ ಮೀರಿದ್ದು, ಓ ದೇವರೇ ಯಾರಿಗೂ ಈ ಕಷ್ಟ ಬೇಡ. ಇಂತಹ ಶಾಪವು ಬೇಡ. ತಂದೆ-ತಾಯಿ ಮಕ್ಕಳಿಗೆ ಪ್ರೀತಿ ಕೊಡುತ್ತಾರೆ. ಜೀವನವನ್ನು ರೂಪಿಸಿಕೊಡುತ್ತಾರೆ. ಆದರೆ ಆ ಸಂದರ್ಭದಲ್ಲಿ ಜೀವನವು ಹಾಳಾದರೆ ಅವರು ಮಾಡಿದ ಕಷ್ಟ ಪ್ರಯತ್ನ ಎಲ್ಲಾ ವ್ಯರ್ಥ. ನಾವು ಯಾವಾಗಲೂ ಸಮಾಜವನ್ನು ಮಾತ್ರ ಬೈಯುತ್ತೇವೆ. ‘‘ಕೆಟ್ಟ ಸಮಾಜ’’ ಎಂದು.
ಆದರೆ ಸಮಾಜ ಕೆಟ್ಟದ್ದಲ್ಲ ಬದಲಿಗೆ ಸಮಾಜವನ್ನು ನಾವು ಕೆಡುವುತ್ತಿದ್ದವ ನಮ್ಮ ತಪ್ಪನ್ನು ಮುಚ್ಚಿಡಲು ಸಮಾಜದ ಮುಖಕ್ಕೆ ಮಸಿ ಬಳಿಯುತ್ತಿದ್ದೇವೆ.

ನಾ ಹೇಳುವುದು ಇಷ್ಟೇ ಕರೋನಾಗಿಂತ ಮಾರಕವಾಗಿರುವ ನಮ್ಮನ್ನು ನಮ್ಮ ಮನೆಯವರನ್ನು ಕಿತ್ತು ತಿನ್ನುತ್ತಿರುವ ಅದೆಷ್ಟು ವಸ್ತುಗಳು ನಮ್ಮ ಪ್ರಪಂಚದಲ್ಲಿ ನಮ್ಮ ಸುತ್ತಮುತ್ತಲಿನಲ್ಲಿ ಮೊದಲಿನಿಂದಲೂ ಇದೆ. ಕರೋನಾ ಒಂದೇ ಬಾರಿ ಪ್ರಾಣವನ್ನು ಕೊಂಡೊಯ್ಯುತ್ತದೆ. ಆದರೆ ಇಂಥ ಚಟಗಳು ಪ್ರತಿದಿನ ಪ್ರತಿಕ್ಷಣ ನಮ್ಮ ತಲೆಯಲ್ಲಿ ಚಿಂತೆಯಾಗಿ ಬರುತ್ತದೆ. ಸಾಧ್ಯವಾದರೆ ತಪ್ಪು ಮಾಡಿರುವವರು ತಿದ್ದುಕೊಳ್ಳಲು ತಯಾರಾಗಿ ಎಂದು ಹೇಳಲು ಇಚ್ಛಿಸುತ್ತೇನೆ.