ಯುಬಿಎಸ್ ಮತ್ತು ಕ್ರೆಡಿಟ್ ಸ್ವೀಸ್ ಭಾರತದಲ್ಲಿ ತಂತ್ರಜ್ಞಾನ ಆಧಾರಿತ ಬ್ಯಾಕ್ ಆಫೀಸ್‌ಗಳನ್ನು ಹೊಂದಿದ್ದು, ಈ ಕಚೇರಿಗಳಲ್ಲಿ 7,000ಕ್ಕೂ ಹೆಚ್ಚು ಉದ್ಯೋಗಿಗಳು ಇದ್ದಾರೆ. ಯುಬಿಎಸ್‌ನಲ್ಲಿ ಕ್ರೆಡಿಟ್ ಸ್ವೀಸ್ ವಿಲೀನವಾಗುತ್ತಿರುವುದರಿಂದ ವೆಚ್ಚ ನಿಯಂತ್ರಣದ ಭಾಗವಾಗಿ ಉದ್ಯೋಗ ಕಡಿತ ವಾಗುವ ಸಾಧ್ಯತೆ ಇದೆ.
ಯುಬಿಎಸ್ ಮತ್ತು ಕ್ರೆಡಿಟ್ ಸ್ವೀಸ್ ತಮ್ಮ ತಂತ್ರಜ್ಞಾನ ಕೇಂದ್ರಗಳಲ್ಲಿ 14,000 ಉದ್ಯೋಗಿ ಗಳನ್ನು ಹೊಂದಿದೆ. ಈ ಪೈಕಿ 7,000 ಮಂದಿ ಭಾರತದ ನಾನಾ ನಗರಗಳಲ್ಲಿನ ಟೆಕ್ ಸೆಂಟರ್‌ಗಳಲ್ಲಿ ಇದ್ದಾರೆ.
ಸ್ವಿಜರ್ಲೆಂಡ್‌ನ ಬ್ಯಾಂಕಿಂಗ್ ದಿಗ್ಗಜ ಯುಬಿಎಸ್ (UBS) ದಿವಾಳಿಯಾಗುವ ಅಪಾಯದಲ್ಲಿರುವ ಮತ್ತೊಂದು ಸ್ವಿಸ್ ಬ್ಯಾಂಕ್ ಕ್ರೆಡಿಟ್ ಸ್ವೀಸ್ ಅನ್ನು 26,800 ಕೋಟಿ ರೂ.ಗಳ ಮೆಗಾ ಡೀಲ್‌ನಲ್ಲಿ (3.25 ಶತಕೋಟಿ ಡಾಲರ್) ಇತ್ತೀಚೆಗೆ ಖರೀದಿಸಿದೆ. ಒಂದು ವೇಳೆ ಕ್ರೆಡಿಟ್ ಸ್ವೀಸ್ ದಿವಾಳಿ ಯಾದರೆ ಜಾಗತಿಕ ಆರ್ಥಿಕತೆಗೆ, ಮುಖ್ಯವಾಗಿ ಪಾಶ್ಚಿಮಾತ್ಯ ದೇಶಗಳ ಬ್ಯಾಂಕಿಂಗ್ ಅಲ್ಲೋಲಕಲ್ಲೋಲವಾಗುವ ಸಾಧ್ಯತೆ ಇತ್ತು.
ಈ ಸ್ವಿಸ್ ಡೀಲ್ ಬಳಿಕ ವಿಶ್ವದ ಸೆಂಟ್ರಲ್ ಬ್ಯಾಂಕ್‌ಗಳು ಮುಂಬರುವ ವಾರಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ಥಿರಗೊಳಿಸಲು ಸಂಘಟಿತ ಕ್ರಮವನ್ನು ಕೈಗೊಳ್ಳಲು ಮುಂದಾಗಿವೆ. ಪ್ರತಿ ದಿನ ಬ್ಯಾಂಕ್‌ಗಳಿಗೆ ಅಗತ್ಯ ಇದ್ದರೆ ಡಾಲರ್ ಸಾಲ ನೀಡಲು ವ್ಯವಸ್ಥೆ ಕಲ್ಪಿಸಲಿವೆ.