Friday, 18th October 2024

ಅತಿಶಯವರ್ಧಿತ ಕಾಲಘಟ್ಟದಲ್ಲಿ ಚಿತ್ತ ಸ್ವಾಸ್ಥ್ಯವಾಗಬೇಕು

ಶ್ವೇತಪತ್ರ

shwethabc@gmail.com

ಜಗತ್ತು ನಮ್ಮ ಅಭಿಪ್ರಾಯಗಳನ್ನು ಒಪ್ಪಬೇಕಿಲ್ಲ ನಮ್ಮ ಯಶಸ್ಸನ್ನು ಸಂಭ್ರಮಿಸಲು ನಮಗೆ ನಮ್ಮ ಅಭಿಮಾನಿಗಳು ಬೇಕಿಲ್ಲ ಅಥವಾ ನಾವೆಷ್ಟು ಯೋಗ್ಯರೆಂದು ಸಾಬೀತು ಪಡಿಸಲು ಮಾಧ್ಯಮದ ಕವರೇಜ್ ನಮಗೆ ಬೇಕಿಲ್ಲ. ಇಲ್ಲಿ ಮೂಲ ಪ್ರಶ್ನೆ ಇರುವು ದಿಷ್ಟೇ, ನಮ್ಮನ್ನು ನಾವು ನಾವಿರುವಂತೆಯ ಒಪ್ಪಿಕೊಳ್ಳಬೇಕು. ಇದು ಯಶಸ್ಸನ್ನು ಆಕರ್ಷಿಸುವ ಮಂತ್ರ.

ಯಾವ ವ್ಯಕ್ತಿ ತನ್ನೊಳಗಿನ ನಿಲ್ಲದ ಆಸೆಗಳಿಂದ ವಿಚಲಿತನಾಗುವುದಿಲ್ಲವೋ ಆತನ ಮನಸ್ಸು ಸಾಗರವನ್ನು ಸೇರುವ ನದಿಯಂತೆ ಸದಾ ತುಂಬಿದ್ದರು ಶಾಂತಿಯನ್ನು ತನ್ನದಾ ಗಿಸಿಕೊಳ್ಳುತ್ತದೆ. ಆದರೆ ಆಸೆಗಳು ತುಂಬಿದ ಮನುಷ್ಯನ ಮನಸ್ಸು ಹಾಗಲ್ಲ ಹೀಗೆನ್ನು ತ್ತದೆ ಭಗವದ್ಗೀತೆಯ ಎರಡನೆಯ ಅಧ್ಯಾಯ. ಕೆಲ ವರ್ಷಗಳ ಹಿಂದೆ ತಿರುಪತಿಯ ಬೆಟ್ಟ ಹತ್ತಿ ದೇವರ ದರ್ಶನ ಪಡೆಯಲು ನಾವೆಲ್ಲ ಕಾಲೇಜಿನ ಸಹೋದ್ಯೋಗಿಗಳು ಹೋಗಿದ್ದೆವು.

ಬಹುಶಃ ಒಂದು ಕಿಲೋಮೀಟರ್ ನಷ್ಟು ಬೆಟ್ಟ ಹತ್ತಿದಿರಬೇಕು, ನಾನು ವಿಪರೀತ ಸುಸ್ತಾಗಿ ಬಿಟ್ಟೆ. ಆಗ ನನ್ನ ಹಿರಿಯ ಸಹೋ ದ್ಯೋಗಿಯು, ಸ್ನೇಹಿತರು ಆದ ಪ್ರೊಫೆಸರ್ ಶಾಲಿನಿ ಸತ್ಯ ಪ್ರಸಾದ್ ನನ್ನನ್ನು ಕೂಡಿಸಿಕೊಂಡು ಒಂದು ಸೂಕ್ಷ್ಮ ವಿವೇಚನೆಯುಳ್ಳ ಸಲಹೆ ನೀಡಿದರು. ಆ ಸಲಹೆ ಕೇವಲ ತಿರುಪತಿ ಬೆಟ್ಟ ಹತ್ತಲ್ಲಷ್ಟೇ ಅಲ್ಲ ಬೆಂಗಳೂರಿನ ಕಾಸ್ಮೋಪಾಲಿಟನ್ ಬದುಕಿಗೂ ಅಳವಡಿಸಿಕೊಳ್ಳಲು. ಅಷ್ಟೇ ಏಕೆ, ಓಟದ ಬದುಕಿನ ಒತ್ತಡಗಳಿಗೂ ಅನ್ವಯ ದಂತಿತ್ತು.

ಅವರ ಮೂರು ಅಮೂಲ್ಯ ಸಲಹೆಗಳು ಇಂತಿವೆ. ಮೊದಲನೆಯದು ಶ್ವೇತಾ ಬೆಟ್ಟ ಹತ್ತುವಾ ಗಲಿ, ಬದುಕಿನ ಪಯಣದಲ್ಲಾಗಲಿ ನಿನ್ನ ಸಹಜ ನಡಿಗೆಯ ವೇಗ ಎಷ್ಟಿದೆಯೋ ಅದರ ಅನುಸಾರವಾಗಿ ಹೆಜ್ಜೆ ಇಡು ಅವಸರಿಸ ಬೇಡ. ಎರಡನೆಯದು ಬೇರೆಯವರ ನಡಿಗೆಯನ್ನು, ಪಯಣವನ್ನು ನಿನ್ನ ಪಯಣಕ್ಕೆ ಹೋಲಿಸಿಕೊಳ್ಳಬೇಡ. ನಿನ್ನ ಗಮನ ಕೇವಲ ನಿನ್ನ ಮೇಲಷ್ಟೇ ಇರಲಿ ಹಾಗೂ ಮೂರನೆಯದು ನಿಲ್ಲದೆ ನಡೆಯುತ್ತಿರು. ಇದಾಗಿ ವರ್ಷಗಳೇ ಕಳೆದಿರಬಹುದು ಈ ಪುಟ್ಟ ನಿಯಮಗಳು ನನ್ನ ಅನೇಕ ಬದುಕಿನ ಒತ್ತಡ ಕಾರಕ ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿವೆ.

ಈ ನಿಯಮಗಳನ್ನು ಪ್ರತಿ ಬಾರಿಯೂ ಉಲ್ಲಂಘಿಸಿಯೇ ನಾನು ಮಾನಸಿಕವಾಗಿ ಆಯಾಸಗೊಂಡಿದ್ದೇ (ಬೆಟ್ಟ ಹತ್ತುವಾಗಲೂ, ಬದುಕಲ್ಲೂ). ಹೀಗೆ ಯೋಚಿಸಿದ ನಂತರ ನನ್ನ ಸಹಜ ನಡಿಗೆಯಲ್ಲಿ ಬೆಟ್ಟ ಹತ್ತಲು ಮರುಶುರು ಮಾಡಿದೆ. ಮರು ಶುರುವಿಟ್ಟು ಕೊಂಡ ನನ್ನ ನಡಿಗೆಯಲ್ಲಿ ಯಾವುದೇ ಅವಸರವಿರಲಿಲ್ಲ. ನನ್ನ ಮಿತಿಯನ್ನು ನನಗೆ ನಾನೇ ಹೇಳಿಕೊಂಡು ಸಮಾಧಾನ ಚಿತ್ತವಾಗಿದ್ದೆ. ಇದೇ ಸಹಜತೆ, ಸಮಾಧಾನತೆ ಮಧ್ಯ ಮಧ್ಯ ನನ್ನನ್ನು ಹೆಚ್ಚಾಗಿ ದಣಿಸಲಿಲ್ಲ. ಮೂರು ಗಂಟೆ ಕಳೆದಿರಬಹುದು ನಾನು ತಿರುಪತಿ ಬೆಟ್ಟ ಹತ್ತಿ ಮುಗಿಸಿದೆ ನನಗೆ ಆಶ್ಚರ್ಯ!

ಹತ್ತಾರು ಜನ ಸಹೋದ್ಯೋಗಿಗಳ ಗುಂಪಿನಲ್ಲಿ ನಾನು ಎರಡನೆಯವಳಾಗಿದ್ದೆ. ಇದಾದ ನಂತರ ನನಗರ್ಥವಾಗಿದ್ದು ಬೇರೆ
ಯವರ ನಡಿಗೆಯನ್ನು ಹೋಲಿಸಿ ನೋಡುವುದನ್ನು ನಾನು ಬಿಟ್ಟಿದ್ದೆ ಕೇವಲ ನನ್ನ ದೇಹದ ಮಾತಿಗಷ್ಟೇ ಕಿವಿಯಾಗಿದ್ದೆ ಈ ನಂಬಿಕೆ ಯಾವುದೇ ದಣಿವು ಆಯಾಸವಿಲ್ಲದೇ ಬೆಟ್ಟ ಹತ್ತು ವುದನ್ನು ಸಾಧ್ಯವಾಗಿಸಿತ್ತು. ಮೇಲೆ ಹೇಳಿದ ಮೂರು ಅಭ್ಯಾಸಗಳನ್ನು ನಾವೆಲ್ಲ ನಮ್ಮದಾಗಿಸಿಕೊಳ್ಳಬೇಕು.

ನಾವೆಲ್ಲ ಬದುಕಲ್ಲಿ ಸತತವಾಗಿ ಸೋಲುವುದು ಇದೇ ಕಾರಣಕ್ಕೆ ಒಂದೇ ಗುಕ್ಕಿಗೆ ಎಲ್ಲಾ ಸಾಧನೆಗಳನ್ನು ನಮ್ಮದಾಗಿಸಿಕೊಳ್ಳುವ
ಹಪಹಪಿ ನಮ್ಮದು ಮೇಲ್ನೋಟಕ್ಕೆ ಬೇರೆಯವರು ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲವೇ. ಆದರೂ ಆಳದಲ್ಲಿ ನಾವೆಲ್ಲ ನಮ್ಮನ್ನು ನಮ್ಮ ಕೆಲಸಗಳನ್ನು ಬೇರೆಯವರೊಂದಿಗೆ ಹೋಲಿಸಿ ನೋಡುತ್ತಿರುತ್ತೇವೆ. ಅದು ನಮ್ಮ ಬದುಕನ್ನು ಮತ್ತಷ್ಟು ಸಂಕಟಕ್ಕೆ ಈಡು ಮಾಡುತ್ತದೆ. ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ನಾವೆಲ್ಲ ಪ್ರಸಿದ್ಧರಾಗಿ ಬಿಡಬೇಕು, ಚಾಂಪಿಯನ್ನರಾಗಿ ಬಿಡಬೇಕು. ಈ ಚಡಪಡಿಕೆ ಪೂರ್ಣ ಆಸ್ವಾದತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

ಬರಿ ಇಷ್ಟೇ ಅಲ್ಲ ಈ ಮನಸ್ಥಿತಿ ನಮ್ಮ ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ಕೂಡ ಕಳೆದುಬಿಡುತ್ತದೆ. ಮೇಲಿನ ಮೂರು ಸೂತ್ರಗಳು ಬದುಕಿನಲ್ಲಿ ಅಳವಡಿಸಿಕೊಂಡಾಗ ನಿಧಾನಸ್ಥ, ಸಾವಧಾನಸ್ಥ ಮನಸ್ಥಿತಿ ನಮ್ಮದಾಗುತ್ತದೆ. ಬೇರೆಯವರ ಕೆಲಸಗಳು ನಮ್ಮ ಮನಸ್ಸನ್ನು ಕಾಡುವುದಿಲ್ಲ. ಜಿಮ್ಮಿನಲ್ಲಿ ಬೇರೆಯವರು ಎದುಸಿರು ಬಿಟ್ಟು ಮಾಡುವ ವರ್ಕ್‌ಔಟ್ ನಮ್ಮನ್ನು ಬಾಧಿಸುವುದಿಲ್ಲ. ಬೇರೆಯವರು ಎಷ್ಟೊಂದು ಪುಸ್ತಕ ಬರೆದು ಬಿಟ್ಟರಲ್ಲ ಎನ್ನುವುದಷ್ಟೇ ನಮ್ಮನ್ನು ಕಾಡಬಾರದು. ಅದಕ್ಕೆ ಪ್ರತಿದಿನ ನಮ್ಮ ಆಲೋಚನೆಗಳಿಗೆ ನಾವು ಅಕ್ಷರ ರೂಪ ಕೊಡುತ್ತಾ ಬರಬೇಕು.

ಸಾಧನೆ ಎಂದಿಗೂ ಸಾವಯವವಾಗಿರಬೇಕು. ನಾವೆಷ್ಟು ಸಿರಿವಂತರೂ ಎಂಬುದನ್ನು ನಮ್ಮ ಆರೋಗ್ಯ ಹಾಗೂ ಜ್ಞಾನದ
ಆಧಾರದಲ್ಲಿ ನೋಡಬೇಕು. ನಮ್ಮ ಗಮನ ಗುರಿ ಮುಟ್ಟುವುದರ ಜೊತೆಗೆ ಪಯಣದ ಖುಷಿಯನ್ನು ನಮ್ಮದಾಗಿಸಿಕೊಳ್ಳುವತ್ತ ಸಾಗಬೇಕು. ಹಾಗಾದರೆ ನಮ್ಮ ಬದುಕಿನ ಹೊಸ ಖುಷಿ ಮೂಡುತ್ತದೆ. ಆ ಖುಷಿ ಕೇವಲ ಕೆಲಸ ಮುಗಿಸುವುದಲ್ಲ ಆ ಕೆಲಸ ಮಾಡುವುದರಲ್ಲಿಯೂ ಅಡಗಿರಬೇಕು. ಇದು ಸಾಧ್ಯವಾಗುವುದು ನಮ್ಮೊಳಗೆ ನಾವು ಬದುಕಿದಾಗ ಮಾತ್ರ. ಬೇರೆಯವರು ತಮ್ಮ ಆಲೋಚನೆಗಳನ್ನು ನಮ್ಮ ಮೇಲೆ ಹೇರದಂತೆ ನೋಡಿಕೊಳ್ಳಬೇಕು.

ನೀವು ಕಷ್ಟಪಟ್ಟು ಕೆಲಸ ಮಾಡಿದಾಗಷ್ಟೇ ಯಶಸ್ಸು ನಮ್ಮದಾಗುತ್ತದೆ ಎನ್ನುವ ಪ್ರೇರಣಾತ್ಮಕ ಮಾತುಗಳನ್ನು ನಾವು ಕೇಳಿಯೇ ಇದ್ದೇವೆ ಆದರೆ ನಾನಂತೂ ಇದನ್ನು ಒಪ್ಪುವುದಿಲ್ಲ. ಕಷ್ಟಪಟ್ಟು ಮಾಡುವುದಕ್ಕಿಂತ ಮೇಲಾಗಿ ಇಷ್ಟಪಟ್ಟು ಮಾಡಬೇಕು. ಆಗಲೇ ಅಲ್ಲೊಂದು ಪರಿಪೂರ್ಣ ನೆಮ್ಮದಿ ಸಾಧ್ಯ. ಬದುಕು ಅದನ್ನು ನಾವು ನೋಡುವುದರಲ್ಲಿದೆ. ಬದುಕು ಬೇರೆಯಲ್ಲ ನಾವು ಬೇರೆಯಲ್ಲ. ಏನೋ ಆಗಿ ಬಿಡಬೇಕು ಇನ್ನಾರದ್ದೋ ಜೀವನ ಬದುಕಿ ಬಿಡಬೇಕು ಎನ್ನುವುದಕ್ಕಿಂತ ನಮ್ಮೊಳಗೆ ನಾವು ಹೆಚ್ಚು ಇಳಿಯುತ್ತಾ ಹೋಗಬೇಕು.

ಇತ್ತೀಚೆಗೆ ಸ್ನೇಹಿತರೊಬ್ಬರು ಮಾತನಾಡುತ್ತಾ ಹೇಳುತ್ತಿದ್ದರು-ನಾವು ಏನೇ ಮಾಡಿದರೂ ಉತ್ಕೃಷ್ಟತೆಯಿಂದ ಮಾಡಬೇಕೆಂದು. ಅದು ಮಲ್ಟಿ ನ್ಯಾಷನಲ್ ಕಂಪನಿಯ ಸಿಇಓ ಕೆಲಸವೇ ಆಗಿರಬಹುದು, ಕಸಗುಡಿಸುವ ಕೆಲಸವೇ ಆಗಿರಬಹುದು, ಅದರೊಳಗೊಂದು ತೀವ್ರತೆ ಇರಬೇಕೆಂಬುದು ಸ್ನೇಹಿತರ ವಾದ. ನಿಜವೇ ಹೌದಾದರೂ ನನ್ನ ಅನಿಸಿಕೆಯಲ್ಲಿ ನಾವೇಕೆ ಒಂದು ವಿಷಯದ ಬಗ್ಗೆ ಅಷ್ಟೊಂದು ಭ್ರಮೆ ಮತ್ತು ಗೀಳನ್ನು ಅಂಟಿಸಿಕೊಳ್ಳಬೇಕೆಂಬುದು? ನಾವು ಮಾಡುವ ಕೆಲಸದ ಬಗ್ಗೆ ನಮಗೆ ಖುಷಿ
ಮತ್ತು ನೆಮ್ಮದಿ ಇದ್ದಾಗ ಅಲ್ಲೊಂದು ಆತ್ಮದ ಅನುಸಂಧಾನ ಸಾಧ್ಯ.

ಇದು ನನ್ನ ವಾದ. ಆದರೆ ಸ್ನೇಹಿತರು ತಮ್ಮ ಮಾತನ್ನು ಮುಂದುವರಿಸುತ್ತಾ ಇಡೀ ಪ್ರಪಂಚವೇ ಒಂದು ಯುದ್ಧ ಭೂಮಿ. ಅಲ್ಲಿ ತೀವ್ರವಾಗಿ ಕೆಲಸ ಮಾಡುವವರಷ್ಟೇ ಎಲ್ಲವನ್ನು ಬಾಚಿಕೊಳ್ಳುತ್ತಾರೆ. ನಾವು ಯಾವಾಗಲೂ ತುದಿಗಾಲಲ್ಲಿ ನಿಂತಿರಬೇಕು. ನಮ್ಮೊಳಗಿನ ಹಾಗೂ ಹೊರಗಿನ ಶತ್ರುಗಳನ್ನು ಸೋಲಿಸಲು ಎಂದರು. ಇದಕ್ಕೆ ಪ್ರತಿಯಾಗಿ ನಾನು ಹೇಳಿದೆ ಯುದ್ಧವೆಂಬುದು ಎಲ್ಲೂ ಇಲ್ಲ, ಅದನ್ನು ನಾವಷ್ಟೇ ಸೃಷ್ಟಿಸಿದ್ದೇವೆ.

ಎಲ್ಲರ ಅವಶ್ಯಕತೆಗಳನ್ನು ಅಗತ್ಯತೆಗಳನ್ನು ಪೂರೈಸಿಕೊಳ್ಳುವಷ್ಟು ಶಕ್ತಿ ಸಾಮರ್ಥ್ಯ ನಮ್ಮೆಲ್ಲರಲ್ಲೂ ಇದೆ. ಔಛಿಠಿo ಜಿqಛಿ;ಔಛಿಠಿ ಜಿqಛಿ. ನಿಜ ತಾನೇ ತೀವ್ರತೆ ಅತಿಹೆಚ್ಚಿನ ಬೇಡಿಕೆಯನ್ನು ನಮ್ಮ ಮೇಲೆ ತಂದೊಡುತ್ತದೆ. ನಾವೆಲ್ಲ ವಿಶ್ರಾಂತಿಸುವುದನ್ನು
ಕಲಿಯಬೇಕಿದೆ. ಮಾಡುವ ಕೆಲಸಗಳಲ್ಲಿ ಖುಷಿಯ ತಾತ್ಪರ್ಯವನ್ನು ಬರೆಯಬೇಕಿದೆ. ನಾವು ಸಿಇಒಗಳಾಗದೇ ಇರಬಹುದು, ಮಾಡುವ ಕೆಲಸವನ್ನು ಉತ್ತಮವಾಗಿ ಮಾಡಿದರಷ್ಟೇ ಸಾಕು. ಎಲ್ಲಾ ಒಳ್ಳೆಯ ವಿಚಾರಗಳು ನಮ್ಮ ಜೊತೆಗೆ ಬರುತ್ತವೆ. ನಮ್ಮ ದೇಹ ಹಾಗೂ ಮನಸ್ಸಿಗೆ ಎಂತಹುದೇ ಏರುಪೇರುಗಳ ನಡುವೆಯೂ ತಮ್ಮನ್ನು ತಾವು ನಿಭಾಯಿಸಿಕೊಳ್ಳುವ ಸಾಮರ್ಥ್ಯವಿದೆ.

ಇದೊಂದು ಸಹಜ ಲಯ. ನಾವು ನೆಮ್ಮದಿ ಯಿಂದ ತಿಂದು ಉಂಡು ಮಲಗಿದರೆ ಆಂತರಿಕ ಸಮ ತೋಲನ ಸ್ವಸ್ತಿತಿಯಲ್ಲಿರುತ್ತದೆ.
ಆದರೆ ನಮ್ಮ ವಾಸ್ತವಿಕ ಆಸೆಗಳು ಆಕಾಂಕ್ಷೆಗಳಿಂದಾಗಿ ಈ ಸಮತೋಲನದಲ್ಲಿ ಏರುಪೇರು ಉಂಟಾಗುತ್ತದೆ. ಈ ಅಸಮತೋಲ ನವೇ ಅನೇಕ ಒತ್ತಡಕಾರಕ ಅನಾರೋಗ್ಯಗಳಿಗೂ, ಅಭ್ಯಾಸಗಳಿಗೂ ಕಾರಣ ಈ ದುಃಖಕ್ಕೆ ನಾವು ಇನ್ನೊಬ್ಬರನ್ನು ದೂಷಿಸು ವಂತಿಲ್ಲ.

ಇದಕ್ಕೆ ಕಾರಣವೂ ನಾವೇ ಅದಕ್ಕೆ ಬದುಕನ್ನು ಅದಿರುವಂತೆ ಒಪ್ಪಿಕೊಂಡು ಆಕರ್ಷಕವಾಗಿಸಬೇಕು. ಆಗ ದೇಹ ಮನಸ್ಸುಗಳ ಸ್ವಾಸ್ಥ್ಯ ಸಮತೋಲನ ಸಾಧ್ಯ. ಈ ತೆರನಾದ ಸ್ವಯಂ ಒಪ್ಪಿಗೆ ನಮ್ಮದಾದರೆ ಬದುಕು ಸಂತುಷ್ಟ ಈ ಸ್ಥಿತಿಯಲ್ಲಿ ಸದಾ ನಾವು ಉತ್ತಮವಾದದ್ದನ್ನೇ ಕೊಡಲು ಪ್ರಯತ್ನಿಸುತ್ತೇವೆ. ಆಗ ನಾವು ಮಾಡುವ ಉದ್ಯೋಗವು ಆಧ್ಯಾತ್ಮಿಕ ಅನುಭವವನ್ನೇ ನೀಡುತ್ತದೆ. ನಾವು ಗೆಲುವಿನಲ್ಲಿ ಕೃತಜ್ಞರಾಗಿರಬೇಕು, ಸೋಲಿನಲ್ಲಿ ಸೌಜನ್ಯರಾಗಿರಬೇಕು. ಯಾವುದೇ ಭಯಗಳು ನಮ್ಮನ್ನು ಕಾಡದಿದ್ದರಷ್ಟೇ ನಾವು ಪರಿಪೂರ್ಣರು.

ಜಗತ್ತು ನಮ್ಮ ಅಭಿಪ್ರಾಯಗಳನ್ನು ಒಪ್ಪಬೇಕಿಲ್ಲ ನಮ್ಮ ಯಶಸ್ಸನ್ನು ಸಂಭ್ರಮಿಸಲು ನಮಗೆ ನಮ್ಮ ಅಭಿಮಾನಿಗಳು ಬೇಕಿಲ್ಲ ಅಥವಾ ನಾವೆಷ್ಟು ಯೋಗ್ಯರೆಂದು ಸಾಬೀತು ಪಡಿಸಲು ಮಾಧ್ಯಮದ ಕವರೇಜ್ ನಮಗೆ ಬೇಕಿಲ್ಲ. ಇಲ್ಲಿ ಮೂಲ ಪ್ರಶ್ನೆ ಇರುವುದಿಷ್ಟೇ, ನಮ್ಮನ್ನು ನಾವು ನಾವಿರುವಂತೆಯ ಒಪ್ಪಿಕೊಳ್ಳಬೇಕು. ಇದು ಯಶಸ್ಸನ್ನು ಆಕರ್ಷಿಸುವ ಮಂತ್ರ. ನಮ್ಮನ್ನು ನಾವಲ್ಲದೆ ಬೇರೆಯವರು ಒಪ್ಪಬೇಕೆನ್ನುವ ಸಿದ್ಧಾಂತವಿದೆಯಲ್ಲ ಅದು ಅಪಾಯಕಾರಿಯಾದದ್ದು.

ನಮ್ಮಲ್ಲನೇಕರಿಗೆ ಇದೊಂದು ಗೀಳು ಹಾಗೂ ಭ್ರಮೆ ಹೊರಗಿನ ಯಶಸ್ಸು ಒಳಗಿನ ಸಂತೃಪ್ತಿಯನ್ನು ತಂದು ಕೊಡುತ್ತದೆಂದು. ಆತ್ಮದ ಮೌಲ್ಯ ಯಾವುದೋ ಗೋಲ್ಡ್ ಮೆಡಲ್‌ನಲ್ಲಿ ಇರುವುದಿಲ್ಲ. ಅದು ಇರುವುದು ಒಳ್ಳೆಯತನದಲ್ಲಿ. ೧೯೨೨ ರಲ್ಲಿ ಟೋಕಿಯೋದ ಇಂಪಿರಿಯಲ್ ಹೋಟೆಲ್‌ನಲ್ಲಿ ತಂಗಿದ್ದ ಐನ್‌ಸ್ಟೀನ್‌ಗೆ ನೆನಪಾಗುತ್ತದೆ-ರೂಂ ಬಾಯಿಗೆ ಕೊಡಲು ತನ್ನಲ್ಲಿ ಚಿಲ್ಲರೆ ಇಲ್ಲವೆಂದು. ಬದಲಾಗಿ ಐನ್‌ಸ್ಟೀನ್ ಆ ಹುಡುಗನಿಗೆ ಖುಷಿಯ, ಸಂತೋಷದ ಸಿದ್ಧಾಂತವನ್ನು ಒಂದು ಪುಟ್ಟ ಕಾಗದದಲ್ಲಿ ಬರೆದುಕೊಡುತ್ತಾರೆ.

ಮುಂದೆ ೨೦೧೮ ರಲ್ಲಿ ಅದು ಒಂದು ಪಾಯಿಂಟ್ ಐದು ಮಿಲಿಯನ್ ಡಾಲರ್ ಗಳಿಗೆ ಮಾರಾಟವಾಗುತ್ತದೆ. ಆ ಪುಟ್ಟ ಕಾಗದ ದಲ್ಲಿದ್ದ ಖುಷಿಯ ಸಂದೇಶವೆಂದರೆ ‘ಅ Zಞ Zb ಞಟbಛಿoಠಿ ಜ್ಛಿಛಿ ಚ್ಟಿಜ್ಞಿಜo ಞಟ್ಟಛಿ eZmmಜ್ಞಿಛಿoo ಠಿeZ ಠಿeಛಿ moಜಿಠಿ
ಟ್ಛ oಛಿoo ಟಞಚಿಜ್ಞಿಛಿb ಡಿಜಿಠಿe ಟ್ಞoಠಿZಠಿ ಛಿoಠ್ಝಿಛಿooಛಿoo‘ ಯಶಸ್ಸಿನ ನಿರಂತರ ಹುಡುಕಾಟ ಸದಾ ಚಡಪಡಿಕೆಯನ್ನಷ್ಟೇ ತಂದು ಕೊಡುತ್ತದೆ. ಶಾಂತ ಹಾಗೂ ನಮ್ರತೆಯ ಬದುಕು ಹೆಚ್ಚಿನ ಖುಷಿ ನೀಡುತ್ತದೆ. ಅತಿಶಯವಽತ ಕಾಲಘಟ್ಟದಲ್ಲಿ ನಮ್ಮೆಲ್ಲರ ಚಿತ್ತ ಸ್ವಾಸ್ಥ್ಯಕ್ಕಾಗಿ ಐನ್‌ಸ್ಟೀನ್ ಅವರ ಈ ಮಂತ್ರ ನಮ್ಮೆಲ್ಲರದಾಗಲಿ!