ಅಳಿವು, ಉಳಿವಿನ ಅಂಚಿನಲ್ಲಿ ೪ ಲಕ್ಷ ವಿದ್ಯಾರ್ಥಿಗಳು, ಸಂಸದರ ಕೈಯಲ್ಲಿ ಭವಿಷ್ಯ
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ರಾಜ್ಯ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ೪ ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಬಾವಿಗೆ ಬಿದ್ದಿದ್ದು ಕಾಪಾಡಬೇಕಾದ ರಾಜಕೀಯ ನಾಯಕರು ಕೈ ಚಲ್ಲಿzರೆ.
ಅಂದಿನ ದುರಾಡಳಿತದ ಪರಿಣಾಮ ವಿಶ್ವವಿದ್ಯಾಲಯದ ಮಾನ್ಯತೆ ರದ್ದುಗೊಂಡು ವಿದ್ಯಾರ್ಥಿಗಳ ಭವಿಷ್ಯ ಮಣ್ಣು ಪಾಲಾಗಿ ೧೦ ವರ್ಷಗಳೇ ಕಳೆದಿವೆ.
ಈ ಮಕ್ಕಳ ಭವಿಷ್ಯ ರಕ್ಷಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ವಿಶ್ವವಿದ್ಯಾಲಯ ಕುಲಪತಿ ಮತ್ತು ಕುಲಾಧಿಪತಿಗಳ ಪ್ರಯತ್ನಗಳೆಲ್ಲ ವಿಫಲ ವಾಗಿದ್ದು ಇದೀಗ ಸಂಸದರ ಸರದಿ ಬಂದಿದೆ.
ಅಂದರೆ ರಾಜ್ಯದ ಸಂಸದರೆಲ್ಲ ಸಂಸತ್ತಿನಲ್ಲಿ ಒಕ್ಕೋರಲಿನಿಂದ ಮುಕ್ತ ವಿವಿ ವಿದ್ಯಾರ್ಥಿಗಳ ಪರ ದನಿಯೆತ್ತಬೇಕಿದೆ. ಈ ಮೂಲಕ ಕೇಂದ್ರ ಸರ್ಕಾರದ
ಮೇಲೆ ಒತ್ತಡ ತಂದು ( ವಿಶ್ವವಿದ್ಯಾ ಲಯ ಅನುದಾನ ಆಯೋಗ) ಯುಜಿಸಿ ಮೂಲಕ ಮುಕ್ತ ವಿಶ್ವವಿದ್ಯಾಲಯಕ್ಕೆ ೧೦ ವರ್ಷಗಳ ಹಿಂದೆ ಕೈ ತಪ್ಪಿ ಹೋಗಿದ್ದ ಮಾನ್ಯತೆಯನ್ನು ಕೊಡಿಸಿ ಕೊಡಬೇಕಿದೆ. ಆಗ ೪ ಲಕ್ಷ ವಿದ್ಯಾರ್ಥಿಗಳು ವಿವಿಧ ಕೋರ್ಸ್ ಗಳನ್ನು ಕಲಿತು ಪಡೆದಿರುವ ಪ್ರಮಾಣಪತ್ರಗಳಿಗೆ ಮತ್ತೆ ಜೀವ ಬರುತ್ತದೆ. ಅಷ್ಟಕ್ಕೂ ವಿದ್ಯಾರ್ಥಿಗಳ ಭವಿಷ್ಯ ಕಾಪಾಡಲು ನಮ್ಮ ಸಂಸದರಿಗೆ ಇದು ಕೊನೆಯ ಅವಕಾಶವೇ ಸರಿ.
ಏಕೆಂದರೆ ಲೋಕಸಭೆಯ ೫ ವರ್ಷಗಳ ಅವಧಿ ಅಂತ್ಯ ಗೊಳ್ಳುತ್ತಿದ್ದು, ಬಹುತೇಕ ಇದು ಕೊನೆಯ ಅಧಿವೇಶನವೇ ಆಗಲಿದೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಸಂಸದರು ಪ್ರಯತ್ನಗಳನ್ನು ಮಾಡಿದಂತೆ ಕಾಣುತ್ತಿಲ್ಲ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಏನಿದು ಮುಕ್ತ ಮುಕ್ತ ಸಮಸ್ಯೆ?: ಮುಕ್ತ ವಿಶ್ವವಿದ್ಯಾಲಯ ಯೋಜಿಸಿಯಲ್ಲಿ ಮಾನ್ಯತೆ ನವೀಕರಿಸಿದ ಕಾರಣ ೨೦೧೫ರಲ್ಲಿ ಮಾನ್ಯತೆ ಕಳೆದು ಕೊಂಡಿತ್ತು. ಇದರಿಂದ ೨೦೧೩ ಹಾಗೂ ೨೦೧೪ ಮತ್ತು ೨೦೧೮ನೇ ಸಾಲಿನಲ್ಲಿ ಕಲಿತಿದ್ದ ವಿದ್ಯಾರ್ಥಿಗಳಿಗೆ ದೊಡ್ಡ ಗಂಡಾಂತರವನ್ನು ತಂದಿಟ್ಟಿತ್ತು. ಅಂದರೆ ಪ್ರಮಾಣಪತ್ರ ಗಳು ಮೌಲ್ಯ ಕಳೆದು ಕೊಂಡು ರದ್ದಿಯಂತಾಗಿದೆ.
ಅಂದರೆ ಪದವಿ, ಸ್ನಾತಕೋತ್ತರ ಪದವಿ, ಬಿ ಟೆಕ್ ಮತ್ತು ಎಮ್ ಟೆಕ್ ಪದವಿಗಳನ್ನು ಪೂರೈಸಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಕಮರಿ ಹೋಗಿತ್ತು. ಏಕೆಂದರೆ ಕೆಲವರು ಸರ್ಕಾರಿ, ಅರೆ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೌಕರಿ ಪಡೆದಿದ್ದರು. ಕೋರ್ಸುಗಳ ಪ್ರಮಾಣ ಪತ್ರ ಮಾನ್ಯತೆ ರzಗಿದ್ದ ಪರಿಣಾಮ ಬಹುತೇಕರು ನೌಕರಿ ಕಳೆದುಕೊಳ್ಳಬೇಕಾಯಿತು.
ಎಡವಟ್ಟಾಗಿದ್ದು ಎಲ್ಲಿ ?
ವಿಶ್ವವಿದ್ಯಾಲಯ ನವೀಕರಣಕ್ಕೆ ಸಂಬಂಧಿಸಿದಂತೆ ಯುಜಿಸಿ ೨೦೦೫ರಲ್ಲಿ ಅಽಸೂಚನೆ ಹೊರಡಿಸಿತು. ಆದರೆ ಮುಕ್ತ ವಿಶ್ವವಿದ್ಯಾಲಯ ಅಂದಿನ ಆಡಳಿತ
ಈ ಬಗ್ಗೆ ಗಮನ ಹರಿಸಲಿಲ್ಲ. ೨೦೦೯ರಲ್ಲಿ ಮತ್ತೆ ಯುಜಿಸಿಯಿಂದ ಎಚ್ಚರಿಕೆ ಬಂದಿತ್ತು. ಆದರೂ ವಿವಿ ಆಡಳಿತ ಲಕ್ಷ್ಯ ಕೊಡಲಿಲ್ಲ. ಪರಿಣಾಮ ೨೦೧೫ ರಲ್ಲಿ ಮಾನ್ಯತೆಯನ್ನು ಯುಜಿಸಿ ರದ್ದುಗೊಳಿಸಿತು. ನಂತರ ಬದಲಾದ ವಿವಿ ಆಡಳಿತ ೨೦೧೭ರಲ್ಲಿ ಮಾನ್ಯತೆ ಪಡೆಯಿತಾದರೂ ಪ್ರಮುಖ ನೆಚ್ಚಿನ ಕೋರ್ಸ್ ಮಾಡುವಂತಿರಲಿಲ್ಲ.
ವಿ.ಸಿ ಶರಣಪ್ಪ ಮಾಡಿದ್ದೇನು?
ವಿವಿಯ ಕುಲಪತಿಯಾಗಿ ಡಾ ಶರಣಪ್ಪ ಹಲ್ಸೆ ಅವರು ಬಂದಾಗ ಪರಿಸ್ಥಿತಿ ಆಯೋಮಯ ಎನ್ನುವಂತಿತ್ತು ಹೊಸ ಕೋರ್ಸ್ ಮಾಡುವಂತಿರಲಿಲ್ಲ ನೌಕರರಿಗೆ ಭದ್ರತೆ ಇರಲಿಲ್ಲ. ಶರಣಪ್ಪ ಮೊದಲು ವಿವಿಯ ಮಾನ್ಯತೆಯನ್ನು ೨೦೨೮ ರವರೆಗೂ ಪಡೆದುಕೊಂಡರು. ನಂತರ ಸುಮಾರು ೪೩ ಕೋರ್ಸ್ ಗಳು, ೧೦ ಆನ್ ಲೈನ್ ಕೋರ್ಸ್ ಗಳನ್ನು ಆರಂಭಿಸಿ ವರ್ಷಕ್ಕೆ ಸುಮಾರು ೪೩,೦೦೦ ವಿದ್ಯಾರ್ಥಿಗಳು ಪ್ರವೇಶ ಪಡೆಯುವಂತೆ ಮಾಡಿದರು. ಅಷ್ಟೇ ಅಲ್ಲದೆ
ವಿಶ್ವವಿದ್ಯಾಲಯಕ್ಕೆ ನ್ಯಾಕ್ ಸಂಸ್ಥೆಯ ೨ ಪ್ಲಸ್ ಮಾನ್ಯತೆ ಸಿಗುವಂತೆ ಮಾಡಿ ದೇಶದ ಎರಡನೇ ಅತಿ ದೊಡ್ಡ ವಿಶ್ವವಿದ್ಯಾಲಯ ಎನಿಸಿಕೊಳ್ಳುವಂತೆ
ಮಾಡಿದರು. ಇದರೊಂದಿಗೆ ಶೈಕ್ಷಣಿಕ ಮಾನ್ಯತೆ ಕಳೆದುಕೊಂಡ ೪ ಲಕ್ಷ ವಿದ್ಯಾರ್ಥಿಗಳ ಉಳಿವಿಗಾಗಿ ಎರಡು ಬಾರಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಪರಿಹಾರ ಕೋರಿದರು. ಕೇಂದ್ರ ಮಾನವ ಸಂಪನ್ಮೂಲ ಸಚಿವ ಧರ್ಮೇಂದ ಪ್ರಧಾನ್ ಅವರನ್ನು ಒತ್ತಾಯಿಸಿದರು. ಆದರೆ ಇದ್ಯಾವುದನ್ನು ಯುಜಿಸಿ ಒಪ್ಪುತ್ತಿಲ್ಲ.
*
ರಾಜ್ಯದ ಎಲ್ಲಾ ಸಂಸದರು ಸಂಸತ್ತಿನಲ್ಲಿ ನಿರ್ಣಯವಾಗುವಂತೆ ಮಾಡಿ ಯುಜಿಸಿಯಿಂದ ಮಾನ್ಯತೆ ಕೊಡಿಸಬೇಕಾಗಿದೆ. ಇದನ್ನು ಬಿಟ್ಟರೆ ನಮ್ಮ ಮಕ್ಕಳು ಭವಿಷ್ಯ ರಕ್ಷಣೆಗೆ ಬೇರೆ ದಾರಿ ಇಲ್ಲ.
-ಡಾ. ಶರಣಪ್ಪ ಹಲ್ಸೆ ಕುಲಪತಿಗಳು, ರಾಜ್ಯ
ಮುಕ್ತ ವಿಶ್ವವಿದ್ಯಾಲಯ