Friday, 18th October 2024

ಮುಂಬೈನ ಕನಕಿಯಾ ಸಮರ್ಪಣ್ ಟವರ್‌ನಲ್ಲಿ ಅಗ್ನಿ ಅವಘಡ

ಮುಂಬೈ: ಬೋರಿವಾಲಿ ಪೂರ್ವದ ಮಗಥಾನೆ ಮೆಟ್ರೋ ನಿಲ್ದಾಣದ ಎದುರು ಇರುವ ಕನಕಿಯಾ ಸಮರ್ಪಣ್ ಟವರ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮುಂಬೈ ಅಗ್ನಿಶಾಮಕ ದಳ (MFB) ಬೆಂಕಿಯನ್ನ ವರದಿ ಮಾಡಿದೆ.

ಎಂಎಫ್ಬಿ, ಪೊಲೀಸ್, ಅದಾನಿ ಎಲೆಕ್ಟ್ರಿಸಿಟಿ, 108 ಆಂಬ್ಯುಲೆನ್ಸ್ ಮತ್ತು ವಾರ್ಡ್ ಸಿಬ್ಬಂದಿ ಸೇರಿದಂತೆ ವಿವಿಧ ಏಜೆನ್ಸಿಗಳನ್ನ ಘಟನಾ ಸ್ಥಳಕ್ಕೆ ಸಜ್ಜು ಗೊಳಿಸಲಾಯಿತು. 22 ಅಂತಸ್ತಿನ ವಸತಿ ಕಟ್ಟಡದ 1 ರಿಂದ 6 ನೇ ಮಹಡಿಯಿಂದ ವಿದ್ಯುತ್ ನಾಳದಲ್ಲಿನ ವಿದ್ಯುತ್ ವೈರಿಂಗ್ ಮತ್ತು ಕೇಬಲ್‌ಗಳಿಗೆ ಸೀಮಿತವಾಗಿದ್ದ ಬೆಂಕಿಯನ್ನ ನಂದಿಸಲಾಗಿದೆ.