Saturday, 30th November 2024

Hindu Religion: ಹಿಂದೂ ಧರ್ಮಕ್ಕೆ ಹಿಂದೂಗಳಿಂದ ಅಪಾಯ

ತುಮಕೂರು: ಹಿಂದೂ ಧರ್ಮಕ್ಕೆ ಮುಸ್ಲಿಂ, ಕ್ರೈಸ್ತರಿಗಿಂತ ಹಿಂದೂ ಧರ್ಮ ವಿರೋಧಿಸುವ ಹಿಂದೂಗಳಿಂದಲೇ ಹೆಚ್ಚು ಅಪಾಯವಿದೆ. ಅಂತಹ ಹಿಂದೂಗಳಲ್ಲಿ ಧರ್ಮ ಜಾಗೃತಿ ಮೂಡಿಸಿ ಹಿಂದೂ ಧರ್ಮ, ಭಾರತ ದೇಶವನ್ನು ರಕ್ಷಿಸಬೇಕಾದ ಅಗತ್ಯವಿದೆ ಎಂದು ಸಾಂಸ್ಕೃತಿಕ ಚಿಂತಕಿ ಹಾರಿಕಾ ಮಂಜುನಾಥ್ ಹೇಳಿದರು.

ನಗರದ ಕೆ.ಆರ್.ಬಡಾವಣೆಯ ಶ್ರೀ ರಾಮ ಮಂದಿರದಲ್ಲಿ ತುಮಕೂರು ದಸರಾ ಸಮಿತಿ ಹಮ್ಮಿಕೊಂಡಿರುವ ನವರಾತ್ರಿ ಉತ್ಸವದಲ್ಲಿ ಬುಧವಾರ ಸಂಜೆ ಮಾತನಾಡಿದ ಅವರು, ನಾವು ಪಾಕಿಸ್ತಾನ, ಬಾಂಗ್ಲಾ, ಜಮ್ಮು ಕಾಶ್ಮೀರ ಬಿಟ್ಟುಕೊಟ್ಟಿದ್ದೇವೆ, ಮುಂದೆ ಕೇರಳ, ಒರಿಸ್ಸಾ ರಾಜ್ಯ ಬಿಟ್ಟು ಬರುವ ಕಾಲ ಸನ್ನಿಹಿತವಾಗಿದೆ. ಮುಂದೆ ನಾವು ನಮ್ಮ ಊರು, ಮನೆಯನ್ನು ಬಿಟ್ಟು ಹೊರಡುವ ಕಾಲ ಬರಬಹುದು. ದೇಶದ ೯ ರಾಜ್ಯಗಳಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾಗಿದ್ದಾರೆ. ಇಲ್ಲಿ ಕೆಲವು ಕಡೆ ಹಿಂದೂಗಳ ಸಂಖ್ಯೆ ಶೇ. ೮ ಕ್ಕಿಂತಲೂ ಕಡಿಮೆ ಇದೆ ಎಂದರು.

ನಿರ್ಲಕ್ಷತನ, ಸ್ವಾರ್ಥತನದಿಂದಾಗಿ ಹಿಂದೂ ಧರ್ಮ ಪೆಟ್ಟು ತಿನ್ನುತ್ತಲೇ ಇದೆ. ನಾವು ಯಾವುದೇ ಜಾತಿಗೆ ಸೇರಿದವ ರಾಗಿರಲಿ ನಾವು ಹಿಂದೂಗಳಾಗಿರಬೇಕು. ಮನೆ ಒಳಗೆ ನಮ್ಮ ಜಾತಿ ಹೊಸಿಲು ದಾಟಿ ಹೊರ ಬಂದ ನಂತರ ನಾವು ಜಾತಿ, ಉಪಜಾತಿ, ಪಂಗಡಗಳನ್ನು ಮರೆತು ಹಿಂದೂಗಳಾಗಬೇಕು ಆಗ ಮಾತ್ರ ಹಿಂದೂ ಧರ್ಮದ ರಕ್ಷಣೆ ಸಾಧ್ಯ. ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆ ಮೂಲಕ ನೀಡಿದ ಧರ್ಮ ಸಂದೇಶ ಸದಾ ನಮ್ಮ ಕಿವಿಯಲ್ಲಿ ಗುಂಯಿಗುಡು ತ್ತಿರಬೇಕು ಎಂದು ಹಾರಿಕಾ ಮಂಜುನಾಥ್ ಹೇಳಿದರು.

ಸಂಸ್ಕಾರವAತರಾಗಿ ಬಾಳಲು ನಮ್ಮ ಹಿರಿಯರು ಮೌಲ್ಯಯುತ ಧರ್ಮ, ಸಂಸ್ಕೃತಿಯನ್ನು ಬಿಟ್ಟು ಹೋಗಿದ್ದಾರೆ. ಅದನ್ನು ಅನುಸರಿಸಿಕೊಂಡು ನಮ್ಮ ಮಕ್ಕಳಿಗೆ ನಮ್ಮ ಧರ್ಮ, ಸಂಸ್ಕಾರವನ್ನು ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.

ದಸರಾ ಸಮಿತಿ ಕಾರ್ಯಾಧ್ಯಕ್ಷ ಡಾ.ಎಸ್.ಪರಮೇಶ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಮಹೇಶ್, ಖಜಾಂಚಿ ಜಿ.ಎಸ್.ಬಸವರಾಜು, ಕಾರ್ಯದರ್ಶಿಗಳಾದ ಹನುಮಂತರಾಜು, ಕೆ.ಶಂಕರ್, ಸಂಯೋಜಕ ಕೆ.ಎನ್.ಗೋವಿಂದರಾವ್, ಸಹಕಾರ್ಯದರ್ಶಿ ಕೆ.ಪರಶುರಾಮಯ್ಯ, ಮುಖಂಡರಾದ ಟಿ.ಆರ್.ರೇವಣ್ಣಸಿದ್ದಪ್ಪ, ರಾಜಣ್ಣ, ಎಸ್.ಎಂ.ರಮೇಶ್, ನಿಸರ್ಗ ರಮೇಶ್, ಬಟವಾಡಿ ರಘು, ಬಿ.ಸಿದ್ದರಾಮಣ್ಣ ಮೊದಲಾದವರು ಭಾಗವಹಿಸಿದ್ದರು.

ಇದಕ್ಕೂ ಮೊದಲು ರಂಗಗೀತೆಗಳ ಸ್ಪರ್ಧೆ ನಡೆಯಿತು. ವಿವಿಧ ಜಿಲ್ಲೆಗಳಿಂದ 70ಕ್ಕೂ ಹೆಚ್ಚು ಮಂದಿ ರಂಗಭೂಮಿ ಕಲಾವಿದರು ಗೀತೆಗಳನ್ನು ಹಾಡಿ ರಂಜಿಸಿದರು. ಹಿರಿಯ ರಂಗಭೂಮಿ ಕಲಾವಿದರಾದ ಡಾ.ಲಕ್ಷö್ಮಣ ದಾಸ್, ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಶಿವಣ್ಣ, ಹಿರಿಯ ಕಲಾವಿದ ಪುಟ್ಟಸ್ವಾಮಿ ತೀರ್ಪುಗಾರರಾಗಿ ಭಾಗ ವಹಿಸಿದ್ದರು.

ಹಿಂದಿನ ದಿನ ನಡೆದ ವೇಷಭೂಷಣ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ಹಾಗೂ ಪಾರಿತೋಷಕ ವಿತರಿಸ ಲಾಯಿತು. ಶ್ರೀನಿವಾಸ್ ಪ್ರಥಮ, ಕೆ.ಹರಿ ದ್ವಿತೀಯ, ಚತುರ್ವೇದ್ ತೃತೀಯ ಬಹುಮಾನ ಹಾಗೂ ತನುಷಾ, ಗನ್ಯಾ, ನಿಹಾರಿಕಾ ಅವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ಇದನ್ನೂ ಓದಿ: Tumkur News: ಶಾಲೆ ಮುಂದೆ ಜೆಲಿಟಿನ್ ಕಡ್ಡಿ ಸ್ಫೋಟ : ತುಂಡಾದ ಶಾಲಾ ಬಾಲಕನ ಕೈ ಬೆರಳುಗಳು