Saturday, 14th December 2024

ನೈಸರ್ಗಿಕ ಅನಿಲ ಬಳಕೆ ಭಾರತದ ಪಾಲಿಗೆ ವರದಾನ

ಅಧ್ಯಯನವೊಂದರ ಪ್ರಕಾರ ಪ್ರಸ್ತುತ ವಾತಾವರಣದಲ್ಲಿನ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ 30 ಲಕ್ಷ ವರ್ಷಗಳಲ್ಲಿಯೇ ಅತ್ಯ ಧಿಕ ಎನ್ನಲಾಗುತ್ತದೆ.

ಭಾರತವು ಇಂಗಾಲ ಹೊರಸೂಸುವಿಕೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಂಥ ಸಂದರ್ಭದಲ್ಲಿ ಪ್ರಧಾನಿಯವರಿಂದ ನೈಸರ್ಗಿಕ ಅನಿಲ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಉತ್ತಮ ಪ್ರಯತ್ನವೊಂದು ಆರಂಭಗೊಂಡಿದೆ. ದೇಶದಲ್ಲಿ ನೈಸರ್ಗಿಕ ಇಂಧನ ಬಳಕೆ ಹೆಚ್ಚಿಸಿ, ಇಂಗಾಲದ ಪ್ರಮಾಣ ಕಡಿಮೆಗೊಳಿಸುವುದು ಈ ಪ್ರಯತ್ನದ ಪ್ರಮುಖ ಆಶಯ. ಶೇ.30ರಿಂದ 35ರಷ್ಟು ಇಂಗಾಲ ಹೊರಸೂಸುವಿಕೆ ತಡೆಯುವುದು ಹಾಗೂ ಮುಂದಿನ ಐದು ವರ್ಷಗಳಲ್ಲಿ ತೈಲ ಸಂಸ್ಕರಣಾ ಸಾಮರ್ಥ್ಯ ದ್ವಿಗುಣ ಗೊಳಿಸುವುದು ಮುಖ್ಯ ಉದ್ದೇಶ.

ಜಾಗತಿಕ ತಾಪಮಾನ ಏರಿಕೆ ಕಾಣುತ್ತಿರುವ ಇಂದಿನ ದಿನಗಳಲ್ಲಿ ಇಂಗಾಲ ಡೈ ಆಕ್ಸೈಡ್ ಪ್ರಮಾಣ ತಗ್ಗಿಸುವುದು ಬಹುಮುಖ್ಯ ಅವಶ್ಯ. ಜಾಗತಿಕ ತಾಪಮಾನವು ೨ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದ್ದು, ಈ ಪ್ರಮಾಣ ಮುಂದಿನ 50 ವರ್ಷಗಳಲ್ಲಿ ಮತ್ತೂ ೨ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನಲಾಗುತ್ತದೆ. ಈ ಅಪಾಯಮಟ್ಟದಿಂದ ಹೊರಬರಲು ಇಂಗಾಲದ ಪ್ರಮಾಣವನ್ನು ತಗ್ಗಿಸುವುದು ಭಾರತದ ಮಟ್ಟಿಗೆ ಬಹುಮುಖ್ಯ ಅನಿವಾರ್ಯತೆ.

ಭಾರತ ಇದೀಗ 2.44 ಮೆಟ್ರಿಕ್ ಟನ್ ಗಿಂತಲೂ ಅಧಿಕ ಪ್ರಮಾಣದ ಇಂಗಾಲವನ್ನು ಹೊರಸೂಸುತ್ತಿದೆ. ವಾಯು ಮಾಲಿನ್ಯ ದಿಂದ ಉಂಟಾಗುತ್ತಿರುವ ಅಕಾಲಿಕ ಸಾವುಗಳ ಸಂಖ್ಯೆಯಲ್ಲಿಯೂ ಎರಡನೆ ಸ್ಥಾನದಲ್ಲಿರುವ ಭಾರತ 2030ರೊಳಗೆ ಅಭಿವೃದ್ಧಿ ಹೊಂದಿದ ಎಲ್ಲ ದೇಶಗಳಿಗಿಂತಲೂ ಅಧಿಕ ಇಂಗಾಲ ಹೊರಸೂಸಲಿದೆ. ಇಂಥದೊಂದು ಅಪಾಯಕಾರಿ ಬೆಳವಣಿಗೆಯನ್ನು ತಡೆ ಯುವ ನಿಟ್ಟಿನಲ್ಲಿ ಪ್ರಧಾನಿಯವರ ಪ್ರಯತ್ನ ಉತ್ತಮವಾಗಿದೆ.

ಜೈವಿಕ ಅನಿಲ ಬಳಕೆ, ಸೌರ ವಿದ್ಯುತ್ ಉತ್ಪಾದನೆ ಹೆಚ್ಚಿಸಿ, ಇಂಗಾಲ ಡೈ ಆಕ್ಸೈಡ್ ಪ್ರಮಾಣ ತಗ್ಗಿಸುವ ಈ ಬೆಳವಣಿಗೆ ಭಾರತದ ಪಾಲಿಗೆ ವರದಾನ ಆಗಲಿದೆ.