Saturday, 23rd November 2024

Self Harming: ಗಂಡ, ಅತ್ತೆಯ ಕಾಟಕ್ಕೆ ಬೇಸತ್ತು ಮಗನೊಂದಿಗೆ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

ಬೆಳಗಾವಿ: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬರು ಮಗನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವುದು ಬೆಳಗಾವಿ ಜಿಲ್ಲೆಯ ಹಿಂಡಲಗಾ ಗಣಪತಿ ದೇವಸ್ಥಾನದ ಬಳಿ ನಡೆದಿದೆ. ಗಂಡ ಹಾಗೂ ಅತ್ತೆ ಕಾಟದಿದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್‌ನಲ್ಲಿ ಮಹಿಳೆ ಉಲ್ಲೇಖಿಸಿರುವುದು ಕಂಡುಬಂದಿದೆ.

ಕವಿತಾ ಬಸಂತ್ ಜುನೆ (40) ಹಾಗೂ ಮಗ ಸಮರ್ಥ ಜುನೆ (14) ಮೃತರು. ಕಲಕಾಂಬ ಗ್ರಾಮದ ನಿವಾಸಿಯಾದ ಕವಿತಾ ಅವರು, ಪತಿ ಹಾಗೂ ಅತ್ತೆಯ ಕಾಟಕ್ಕೆ ಮನನೊಂದು ಮಗನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನಾ ಮಹಿಳೆ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದ್ದು, ಪತಿ ಹಾಗೂ ಅತ್ತೆ ಕಾಟದಿದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನೂ ಓದಿ | Farooq Abdullah: ಭಯೋತ್ಪಾದಕರನ್ನು ಕೊಲ್ಲಬೇಡಿ; ವಿವಾದ ಹುಟ್ಟು ಹಾಕಿದ ಜಮ್ಮು & ಕಾಶ್ಮೀರದ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ

ಟ್ರ್ಯಾಕಿಂಗ್ ಐಡಿ ಬದಲಿಸಿ ಅಮೆಜಾನ್‌ಗೆ 30 ಕೋಟಿ ರೂ. ವಂಚನೆ; ಇಬ್ಬರು ಖದೀಮರ ಸೆರೆ

Fraud Case

ಮಂಗಳೂರು: ಅಮೆಜಾನ್‌ ಕಂಪನಿಗೆ ಬರೊಬ್ಬರಿ 30 ಕೋಟಿ ರೂ. ವಂಚಿಸಿದ್ದ (Fraud Case) ಇಬ್ಬರು ಖದೀಮರನ್ನು ಮಂಗಳೂರಿನ ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಧೋಪುರ್ ಜಿಲ್ಲೆಯ ನಿವಾಸಿ ರಾಜಕುಮಾರ್ ಮೀನಾ (23), ಕರೌಲಿ ಜಿಲ್ಲೆಯ ಸುಭಾಸ್ ಗುರ್ಜರ್ (27) ಬಂಧಿತರು.

ಅಮೆಜಾನ್​ನಲ್ಲಿ ಬೆಲೆಬಾಳುವ ವಸ್ತುಗಳನ್ನು ಆರ್ಡರ್​​ ಮಾಡುತ್ತಿದ್ದ ಆರೋಪಿಗಳು, ಆರ್ಡರ್ ಪಡೆಯಲು ಟಯರ್ ಟು ಸಿಟಿ ಲೋಕೆಷನ್ ಆಯ್ಕೆ ಮಾಡುತ್ತಿದ್ದರು. ಬುಕ್ ಮಾಡಿದ ವಸ್ತುಗಳನ್ನು ವಿಮಾನದಲ್ಲಿ ಹೋಗುತ್ತಿದ್ದ ಇವರು, ವಸ್ತುವಿನ ಬಾಕ್ಸ್​ ಮೇಲಿನ ಟ್ರ್ಯಾಕಿಂಗ್ ಐಡಿಯನ್ನು ಅದಲು ಬದಲು ಮಾಡಿ ಅಮೆಜಾನ್ ಸಂಸ್ಥೆಗೆ ವಂಚನೆ ಮಾಡುತ್ತಿದ್ದರು.

ವಸ್ತುಗಳು ಡೆಲಿವರಿಯಾದ ಮೇಲೆ ಅವುಗಳ ಮೇಲಿನ ಟ್ರ್ಯಾಕಿಂಗ್ ಲೇಬಲ್​ಗಳನ್ನು ಅದೇ ರೀತಿಯ ಕಡಿಮೆ ಬೆಲೆಯ ವಸ್ತುಗಳ ಬಾಕ್ಸ್​​ ಮೇಲೆ ಹಚ್ಚುತ್ತಿದ್ದರು. ನಂತರ, ರಿಟರ್ನ್​​ ಮಾಡುತ್ತಿದ್ದರು. ದುಬಾರಿ ಬೆಲೆಯ ವಸ್ತುಗಳನ್ನು ತಮ್ಮಲ್ಲೇ ಇಟ್ಟುಕೊಂಡು ಸೆಕೆಂಡ್ ಹ್ಯಾಂಡ್​ಗೆ ಮಾರಾಟ ಮಾಡುತ್ತಿದ್ದರು. ಐಟಂ ರಿಟರ್ನ್ ಆದ ಬಳಿಕ ಆರ್ಡರ್​ಗೆ ಬಳಸಿದ ಸಿಮ್ ಕಿತ್ತೆಸೆಯುತ್ತಿದ್ದರು. ವಸ್ತು ಅಮೆಜಾನ್ ಗೋಡೌನ್‌ ತಲುಪಿದ ಬಳಿಕ ವಂಚನೆ ಬೆಳಕಿಗೆ ಬರುತ್ತಿತ್ತು.

ಆರೋಪಿಗಳು ಕಳೆದ‌ ಐದು ವರ್ಷಗಳಿಂದಲೂ ಈ ರೀತಿ ವಂಚನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಬಿಹಾರ ಸೇರಿ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ನೆಲೆಸಿ ವಂಚನೆ ಮಾಡಿದ್ದಾರೆ. ಇದೀಗ ಮಂಗಳೂರಿನ ಉರ್ವ ಪೊಲೀಸರು ಈ ಖತರ್ನಾಕ್‌ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರಿನ ಉರ್ವ ಠಾಣೆಯಲ್ಲಿ ಸೆ.21ರಂದು ಅಮೆಜಾನ್ ಕಂಪನಿಯ ಡೆಲಿವರಿ ಬಾಯ್ ಪ್ರಕರಣ ದಾಖಲಿಸದ್ದನು. ತನಿಖೆ ನಡೆಸಿ ಖದೀಮರ ಮೋಸದ ಜಾಲ ಭೇದಿಸಿದ ಮಂಗಳೂರಿನ‌ ಉರ್ವ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.