Saturday, 30th November 2024

Vijay Merchant Trophy: ರಾಜ್ಯ ಕಿರಿಯರ ತಂಡಕ್ಕೆ ಅನ್ವಯ್‌ ದ್ರಾವಿಡ್‌ ಉಪನಾಯಕ

ಬೆಂಗಳೂರು: ಭಾರತ ಕ್ರಿಕೆಟ್‌ಗ ತಂಡದ ಮಾಜಿ ನಾಯಕ ಹಾಗೂ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಕಿರಿಯ ಮಗ ಅನ್ವಯ್ ದ್ರಾವಿಡ್(Anvay Dravid) 16 ವಯೋಮಿತಿಯ ವಿಜಯ್ ಮರ್ಚೆಂಟ್ ಟ್ರೋಫಿಗೆ(Vijay Merchant Trophy) ಕರ್ನಾಟಕ ತಂಡ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಧ್ರುವ ಕೃಷ್ಣನ್ ನಾಯಕನಾಗಿದ್ದಾರೆ.

ಪಂದ್ಯಾವಳಿ ಡಿಸೆಂಬರ್ 6ರಿಂದ 28ರವರೆಗೆ ವಿಜಯವಾಡದಲ್ಲಿ ನಡೆಯಲಿದೆ. ಅನ್ವಯ್ ದ್ರಾವಿಡ್ ವಿಕೆಟ್ ಕೀಪರ್-ಬ್ಯಾಟರ್ ಆಗಿ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ವಿದರ್ಭ ಎದುರು ಕಣಕ್ಕಿಳಿಯುವ ಮೂಲಕ ಕರ್ನಾಟಕ ತಂಡ ತನ್ನ ಅಭಿಯಾನ ಆರಂಭಿಸಲಿದೆ.

ಕರ್ನಾಟಕ ತಂಡ: ಧ್ರುವ ಕೃಷ್ಣನ್ (ನಾಯಕ), ಅನ್ವಯ್ ದ್ರಾವಿಡ್ (ಉಪನಾಯಕ, ವಿ.ಕೀ), ಶಿವು ಎಂ, ಶ್ಯಮಂತಕ್ ಅನಿರುದ್ಧ್, ಸುಕೃತ್ ಜೆ., ಆರುಷ್ ಜೈನ್, ಅಯಾನ್, ಧ್ಯಾನ್ ಮಹೇಶ್, ಅಥರ್ವ್, ಗೌರವ್, ಗಗನ್ , ಆದಿತ್ಯ ಝಾ, ಸುಜಿತ್,ಆರ್ಯ, ಧ್ರುವ ಮೋದೆ ಹಾಗೂ ಅದ್ರಿತ್ ರಾವ್.

ಇದನ್ನೂ ಓದಿ SMAT 2024: ಕೇವಲ 23 ಎಸೆತಗಳಲ್ಲಿ 77 ರನ್‌ ಸಿಡಿಸಿದ ಇಶಾನ್‌ ಕಿಶನ್‌!

ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್‌ ಅವರು ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಸಿಂಗಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಇವರು ಮಾತ್ರವಲ್ಲದೆ, ಉನ್ನತಿ ಹೂಡಾ, ಪ್ರಿಯಾಂಶ್ ರಾಜಾವತ್ ಹಾಗೂ 2ನೇ ಶ್ರೇಯಾಂಕಿತ ಗಾಯತ್ರಿ ಗೋಪಿಚಂದ್- ತ್ರಿಸಾ ಜೋಲಿ, ಕನ್ನಡತಿ ಅಶ್ವಿನಿ ಪೊನ್ನಪ್ಪ-ತನಿಷಾ ಕ್ರಾಸ್ಟೋ ಕೂಡ ಸೆಮಿ ತಲುಪಿದ್ದಾರೆ. ಶುಕ್ರವಾರ ರಾತ್ರಿ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಗೆಲುವು ಸಾಧಿಸಿ ಇವರೆಲ್ಲ ಸೆಮಿ ಹಂತಕ್ಕೇರಿದರು.

ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.18 ಸಿಂಧು 21-15, 21-17ರಿಂದ ಚೀನಾದ ಡೈ ವಾಂಗ್ ಎದುರು ನೇರ ಗೇಮ್‌ಗಳ ಗೆಲುವು ಸಾಧಿಸಿದರು. ಗಾಯತ್ರಿ-ತ್ರಿಸಾ ಮಹಿಳಾ ಡಬಲ್ಸ್‌ನಲ್ಲಿ 21-8, 21-15 ರಿಂದ 6ನೇ ಶ್ರೇಯಾಂಕಿತ ಗೊ ಪಿಯ್ ಕೀ ಟಿಯೋ ಮೇ ಕ್ಸಿಂಗ್ ಜೋಡಿಯನ್ನು ಮಣಿಸಿದರು. ಅಶ್ವಿನಿ-ತನಿಷಾ ಜೋಡಿ 21-12, 17-21, 21-16 ರಿಂದ ದೇಶಬಾಂಧವ ಪ್ರಿಯಾ-ಶೃತಿ ಮಿಶ್ರಾ ಜೋಡಿಯನ್ನು ಪರಾಭವಗೊಳಿಸಿತು. ಮಿಶ್ರ ಡಬಲ್ಸ್‌ನಲ್ಲಿ 5ನೇ ಶ್ರೇಯಾಂಕಿತ ಧ್ರುವ ಕಪಿಲ-ತನಿಷಾ ಕ್ರಾಸ್ಟೋ 21-16, 21-13 ರಿಂದ ಮಲೇಷ್ಯಾದ ಲೊ ಬಿಂಗ್ ಕುನ್- ಹೊ ಲೊ ಈ ಜೋಡಿಯನ್ನು ಹಿಮ್ಮಟಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌ ಭಾರತದವರೇ ಆದ ಮೀರಾಬ ಲುವಾಂಗ್‌ ಮೈಸ್ನಮ್‌ ಅವರನ್ನು 21-8, 21-19ರಿಂದ ಮಣಿಸಿದರು. ಸೆಮಿ ಕದಾಟದಲ್ಲಿ ಸೇನ್‌ ಜಪಾನ್‌ನ ಶೋಗೊ ಒಗಾವ ವಿರುದ್ಧ ಆಡಲಿದ್ದಾರೆ.