Thursday, 14th November 2024

ಸೆನ್ಸೆಕ್ಸ್: 1,200 ಪಾಯಿಂಟ್ಸ್ ಇಳಿಕೆ

ನವದೆಹಲಿ: ಭಾರತೀಯ ಷೇರುಪೇಟೆಯು ಸೋಮವಾರ ಸೆನ್ಸೆಕ್ಸ್ ಬರೋಬ್ಬರಿ 1,200 ಪಾಯಿಂಟ್ಸ್ ಇಳಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 365 ಪಾಯಿಂಟ್ಸ್‌ ಇಳಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 1,139 ಪಾಯಿಂಟ್ಸ್‌ ಇಳಿಕೆಗೊಂಡು 48,452 ಪಾಯಿಂಟ್ಸ್‌ಗೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 346 ಪಾಯಿಂಟ್ಸ್‌ ಇಳಿಕೆಗೊಂಡು 14,499 ಪಾಯಿಂಟ್ಸ್‌ಗೆ ಕುಸಿದಿದೆ. ಮಾರುಕಟ್ಟೆ ವಹಿವಾಟು ಆರಂಭದಲ್ಲಿ 386 ಷೇರುಗಳು ಏರಿಕೆಗೊಂಡರೆ, 1,181 ಷೇರುಗಳು ಕುಸಿತಕ್ಕೆ ಸಾಕ್ಷಿಯಾದವು.

ಬಜಾಜ್ ಫೈನಾನ್ಸ್ ಷೇರುಗಳು ಸುಮಾರು 243 ರೂ.ಗಳನ್ನು ಕಳೆದುಕೊಂಡು 4,629.30 ರೂ., ಟಾಟಾ ಮೋಟಾರ್ಸ್ ಷೇರುಗಳು 13 ರೂ.ಗಳ ಕುಸಿತದೊಂದಿಗೆ 304.85 ರೂ., ಎಸ್‌ಬಿಐ ಷೇರು ಸುಮಾರು 15 ರೂ.ಗಳ ಕುಸಿತ ಕಂಡು 338.20 ರೂ., ಟಾಟಾ ಸ್ಟೀಲ್ ಷೇರುಗಳು ರೂ. 869.00 ಕ್ಕೆ ಪ್ರಾರಂಭವಾಯಿತು, ಇದು ಸುಮಾರು 31 ರೂ. ಕುಸಿತ ಕಂಡಿತು