ಸಂಬಂಧಿಕರಿಗೆ ಹಲವು ಸಮಸ್ಯೆ
ಕನಿಷ್ಠ ೫೦ ಜನರಿಗೆ ಪಿಪಿಇ ಕಿಟ್ ಸಮೇತ ಪರವಾನಗಿ ನೀಡಲು ಆಗ್ರಹ
ಸಿದ್ದರಾಮಪ್ಪ ಸಿರಿಗೇರಿ ಬಳ್ಳಾರಿ
ದೂರದ ಸಂಬಂಧಿಕರು ಮೃತಪಟ್ಟರೆ ಹೋಗಲಿ ಬಿಡು ಎನ್ನಬಹುದು. ತೀರಾ ಹತ್ತಿರದ ಸಂಬಂಧಿಕರು ಮೃತಪಟ್ಟರೆ, ಮಣ್ಣಿಗೆ ಹೋಗುವುದು ಒಂದೆಡೆ ಇರಲಿ. ಕನಿಷ್ಠ ಮುಖ ನೋಡಲು ಹೋಗಲಾರದ ಪರಿಸ್ಥಿತಿ.
ಹೌದು, ಇದು ಕರೋನಾ ಎರಡನೇ ಅಲೆ ಆರಂಭವಾದಾಗಿನಿಂದ ಜನರಲ್ಲಿ ಉಂಟಾಗಿರುವ ಗುಮಾನಿಗಳು. ಸಂಬಂಧಿಕರು ಯಾವುದೇ ರೋಗ ಬಂದು ಮೃತಪಟ್ಟರೂ ಸಹ ಈ ಸಂದರ್ಭದಲ್ಲಿ ಏನಾಗಿತ್ತು. ಏನಾಗಿ ಸತ್ತ ಎಂಬ ಮಾತುಗಳೇ ಕೇಳುವುದಿಲ್ಲ. ಕರೋನಾ ಬಂದು ಮೃತಪಟ್ಟಿದ್ದಾರೆ ಎಂಬ ಭಾವನೆ ಎಲ್ಲರಲ್ಲೂ ಕಾಡುತ್ತಿದೆ.
ಕರೋನಾ ಎರಡನೇ ಅಲೆಯ ಇತ್ತೀಚಿನ ದಿನಗಳಲ್ಲಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕರೋನಾದಿಂದ ಮೃತಪಟ್ಟವರ
ಸಂಖ್ಯೆ ಹೆಚ್ಚಾಗಿದೆ. ಆದರೂ ಗ್ರಾಮೀಣ ಪ್ರದೇಶಗಳಲ್ಲಿ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡರೂ ಆಸ್ಪತ್ರೆಗೆ ದಾಖಲಾಗದೇ,
ಮೆನೆಯಲ್ಲೇ ಸಾಯುವವರ ಸಂಖ್ಯೆ ಹೆಚ್ಚಾಗಿದೆ.
ಒಂದು ಊರಿನಲ್ಲಿ ದಿನಕ್ಕೆ ಕನಿಷ್ಠ ಒಬ್ಬರು ಇಬ್ಬರು ಸಾಯುತ್ತಿದ್ದಾರೆ. ಬೇರೆ ಊರಿನಲ್ಲಿ ಸಂಬಂಧಿಕರು ಮೃತಪಟ್ಟರೆ ಹೋಗುವವರೇ ವಿರಳ. ಒಂದೇಡೆ ಕರೋನಾ ಭಯದ ಭೀತಿ. ಇನ್ನೊಂದೆಡೆ ಲಾಕ್ ಡೌನ್‌ನಿಂದಾಗಿ ಸಾರಿಗೆ ಸಂಚಾರ ರದ್ದಾಗಿರುವುದು. ಅಲ್ಲಿ ಇಲ್ಲಿ ಕದ್ದುಮುಚ್ಚಿ ಆಟೋಗಳು ಓಡಾಡಿದರೂ ದುಪ್ಪಟ್ಟು ಹಣ ತೆತ್ತು ಪ್ರಯಾಣ ಮಾಡಬೇಕು.
ಇದರಿಂದ ಮೃತ ವ್ಯಕ್ತಿಗಳ ದರ್ಶನ ಪಡೆಯಲು ಸಂಬಂಧಿಕರಿಗೆ ಹಲವು ಸಮಸ್ಯೆಗಳು ಕಾಡುತ್ತಿವೆ.
ಸತ್ತವರ ದರ್ಶನ ಮಾಡಿವ ಹಾಗಿಲ್ಲ. ಈಗ 15 ದಿನಗಳ ಹಿಂದೆ ಮದುವೆ ಸಮಾರಂಭಗಳಿಗೆ ಪ್ರತಿ ಮದುವೆಗೆ ವಧು ಕಡೆ ಸಂಬಂಧಿಕ ರಿಗೆ 25 ಜನ ಮತ್ತು ವರನ ಸಂಬಂಧಿಕರಿಗೆ 25 ಜನರಿಗೆ ಪಾಸ್ ನೀಡಿ ತಹಸೀಲ್ದಾರ್ ಕಚೇರಿಯಿಂದ ಪರವಾನಗಿ ಪತ್ರ ನೀಡಲಾಗುತ್ತಿತ್ತು. ಅದೇ ಪರವಾನಿಗೆ ಪಡೆದು ಮದುವೆ ಮಾಡಿಕೊಳ್ಳಬಹುದು ಎಂದು ಹಲವು ಒಂದು ತಿಂಗಳ ಹಿಂದೆಯೇ ಮುಹೂರ್ತ ಫಿಕ್ಸ್ ಮಾಡಿ ಲಗ್ನ ಪತ್ರಿಕೆ ಹಾಕಿಸಿ, ಸಂಬಂಧಿಕರಿಗೆಲ್ಲಾ ಕೊಟ್ಟು ಮಾಹಿತಿ ತಿಳಿಸಿದ ಮೂರು ದಿನಗಳಲ್ಲಿ ಮದುವೆ ಸಮಾರಂಭಗಳು ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಮದುವೆಗೆ ಬೇಕಾಗುವ ಶಾಮಿಯಾನ, ಅಡುಗೆದಾರರು, ಮದುವೆಗೆ ಬೇಕಾಗುವ ಡೆಕೋರೇಷನ್‌ಗೆ ನೀಡಿದ ಮಂಗಡ ಹಣವೂ ಸಹ ವಾಪಸ್ ಬಾರದಂತ ಪರಿಸ್ಥಿತಿ ನಿರ್ಮಾಣವಾಯಿತು.
ಇದರಿಂದ ಹಲವರೂ ನಷ್ಟ ಅನುಭವಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಂಬಂಧಿಕರು ಸತ್ತರೆ ಹೋಗುವ ಹಾಗಿಲ್ಲ. ಮದುವೆಗಳು ಮಾಡುವ ಹಾಗಿಲ್ಲ. ಯಾವುದಾದರೂ ಸಂಬಂಧಿಕರ ಊರಿಗೂ ಹೋಗುವ ಹಾಗಿಲ್ಲ. ಎಂತಹ ಕಾಲ ಬಂತು. ಇಂತಹ ಕಾಲ ನಾವು ಹುಟ್ಟಿನಿಂದಲೂ ಕಂಡಿಲ್ಲ-ಕೇಳಿಲ್ಲ ಎಂದು ವೃದ್ಧರೊಬ್ಬರು ತೀರಾ ಆಶ್ಚರ್ಯ ರೀತಿಯಲ್ಲಿ ಹೇಳುವ ಮಾತು.
***
ಸಂಬಂಧಿಕರು ಮೃತಪಟ್ಟರೆ ಮತ್ತೆ ಅವರನ್ನು ನೋಡಲು ಆಗುವುದಿಲ್ಲ. ಕನಿಷ್ಠ ಅವರ ದರ್ಶನ ಮಾಡಿಕೊಳ್ಳಲು ಕೊನೆಯದಾಗಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮಾನವೀಯತೆ ದೃಷ್ಟಿಯಿಂದ ಸರಕಾರ 50 ಜನರಿಗೆ ಪರವಾನಿಗಿ ಮತ್ತು ಪಾಸ್
ನೀಡಬೇಕು. ಜತೆಗೆ ಪಿಪಿ ಕಿಟ್ ವಿತರಿಸಬೇಕು.
-ಕೆ. ಎರ್ರಿಸ್ವಾಮಿ ಕರ್ನಟಕ ಜನ ಸೈನ್ಯ, ಸಂಘಟನೆ ರಾಜ್ಯಾಧ್ಯಕ್ಷ