Thursday, 19th September 2024

ತಮಿಳುನಾಡಿನಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಸೋಂಕಿಗೆ ಒಂದು ಬಲಿ

ಚೆನ್ನೈ: ಡೆಲ್ಟಾ ಪ್ಲಸ್ ರೂಪಾಂತರ ಸೋಂಕಿಗೆ ತಮಿಳುನಾಡಿನಲ್ಲಿ ಮೊದಲ ಬಲಿಯಾಗಿದ್ದು, ಮಧುರೈ ಮೂಲದ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ.

ಈ ಬಗ್ಗೆ ತಮಿಳುನಾಡು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಮಧುರೈ ಮೂಲದ ಸೋಂಕಿತರೊಬ್ಬರು ಚಿಕಿತ್ಸೆ ಫಲಕಾರಿ ಯಾಗದೇ ಮೃತಪಟ್ಟಿದ್ದಾರೆ. ಇದು ಡೆಲ್ಟಾಗಿಂತ ಅತ್ಯಂತ ಹೆಚ್ಚು ಅಪಾಯಕಾರಿಯಾಗಿದೆ. ಈಗಾಗಲೆ ಮಧ್ಯ ಪ್ರದೇಶದಲ್ಲಿ ಈ ರೂಪಾಂತರಿ ಸೋಂಕಿಗೆ ಇಬ್ಬರು ಬಲಿಯಾಗಿದ್ದು, ಮಹಾರಾಷ್ಟ್ರದಲ್ಲಿ ಓರ್ವ ರೋಗಿ ಮೃತಪಟ್ಟಿದ್ದಾರೆ.

ಈ ಡೆಲ್ಟಾ ಪ್ಲಸ್ ಮಾನವರ ರೋಗನಿರೋಧಕ ಸಾಮರ್ಥ್ಯದ ಮೇಲೂ ದಾಳಿ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಲಸಿಕೆ ಯಿಂದ ಪಡೆದ ರೋಗನಿರೋಧಕ ಶಕ್ತಿ ಮತ್ತು ಸೋಂಕು ಬಂದು ಗುಣಮುಖರಾದಾಗ ಬಂದ ರೋಗ ನಿರೋಧಕ ಶಕ್ತಿಯ ಮೇಲೂ ಕೂಡ ಡೆಲ್ಟಾ ಪ್ಲಸ್ ದಾಳಿ ಮಾಡುತ್ತದೆ.

ತಮಿಳುನಾಡಿನಲ್ಲಿ ಈ ಡೆಲ್ಟಾ ಪ್ಲಸ್ ರೂಪಾಂತರ ಸೋಂಕು ಕಾಣಿಸಿಕೊಂಡ ಮೂರು ಸೋಂಕು ಪ್ರಕರಣಗಳ ಪೈಕಿ ಇಬ್ಬರು ಸೋಂಕಿತರು ಗುಣಮುಖರಾಗಿದ್ದಾರೆ. ಈ ಇಬ್ಬರ ಪೈಕಿ ಚೆನ್ನೈನ 32 ವರ್ಷದ ನರ್ಸ್ ಮತ್ತು ಕಾಂಚೀಪುರಂ ಜಿಲ್ಲೆಯ ಇನ್ನೊಬ್ಬ ವ್ಯಕ್ತಿ ಸೇರಿದ್ದಾರೆ. ಮಧುರೈ ಮೂಲದ ಸೋಂಕಿತರ ಪೈಕಿ ಓರ್ವ ರೋಗಿ ಡೆಲ್ಟಾ ಪ್ಲಸ್ ಸೋಂಕಿಗೆ ತುತ್ತಾಗಿರುವುದು ಕಂಡುಬಂದಿದೆ.