ವಿಶ್ವವಾಣಿ ಕ್ಲಬ್ ಹೌಸ್ ಸಂವಾದ 40
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಇತಿಹಾಸಕಾರ ಧರ್ಮೇಂದ್ರ ಕುಮಾರ್ ಅಭಿಪ್ರಾಯ
ಸಾಮಾನ್ಯವಾಗಿ ನಾವು ವಾಸಿಸುವ ಜಾಗಗಳ ಮಹತ್ವ ತಿಳಿದುಕೊಳ್ಳುವ ಗೋಜಿಗೆ ಹೋಗುವುದೇ ಇಲ್ಲ. ಆ ಕುತೂಹಲವು ಕಣ್ಮರೆಯಾಗಿದೆ. ಅದೆಷ್ಟೋ ತಿಳಿಯದ ಸ್ಥಳಗಳ ವಿಸ್ಮಯ ಲೋಕ ತಿಳಿದುಕೊಳ್ಳುವುದು ಉತ್ತಮ. ಹಲವಾರು ಜನ ಸಂಶೋಧಕರು ಮತ್ತು ಇತಿಹಾಸದ ಕುರಿತು ತಾವು ಕಂಡುಕೊಂಡ ಸತ್ಯಗಳನ್ನು ತಿಳಿಸುತ್ತಾ ಬಂದಿದ್ದಾರೆ. ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಮತ್ತು ಇತಿಹಾಸದ ಬಗ್ಗೆ ಪ್ರೀತಿ ಉಳ್ಳವರು, ಇತಿಹಾಸದ ಬಗ್ಗೆ ಆಸಕ್ತಿ ಹುಟ್ಟಿಸುವವರು
ಅರೇನಹಳ್ಳಿ ಶಿವಶಂಕರ ಧರ್ಮೇಂದ್ರ ಕುಮಾರ್ !
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮೈಸೂರು ಮತ್ತು ಬೆಂಗಳೂರು ಐತಿಹಾಸಿಕ ಚರಿತ್ರೆಯ ಚಿತ್ರಣ ಶ್ರೋತೃಗಳ ಮುಂದಿಟ್ಟರು. ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿರುವ ಇವರ ಪ್ರವೃತ್ತಿ ಇತಿಹಾಸ. ರಾಜ ಮಹಾರಾಜರ ಬಗೆಗಲ್ಲದೆ, ನಾವು ಹುಟ್ಟಿ ಬೆಳೆದ ಪ್ರದೇಶ, ನಾವು ವಾಸಿಸುತ್ತಿರುವ ಊರು, ಹಳ್ಳಿ, ಓಡಾಡುವ ರಸ್ತೆ ಇಂತಹ ವಿಷಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು ಧರ್ಮೇಂದ್ರ ಕುಮಾರ್.
ಲಾರ್ಡ್ ಕಾರ್ನವಾಲಿಸ್ ಬೆಂಗಳೂರು ಕೋಟೆಯನ್ನು 230 ವರ್ಷಗಳ ಹಿಂದೆ ಇದೇ ದಿನ ಹೇಗೆ ಟಿಪ್ಪುವಿನಿಂದ ವಶಪಡಿಸಿಕೊಂಡ. ಬೆಂಗಳೂರು ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ಬಹದ್ದೂರ್ ಖಾನ್ ಯುದ್ಧದಲ್ಲಿ ವೀರ ಮರಣ ಹೊಂದಿದ. ಅವನು ಟಿಪ್ಪುವಿನ ಪಾಳಯದವನು. ಶತ್ರು ಸೈನಿಕನಾದರೂ ಅವನ ಪರಾಕ್ರಮ ಮೆಚ್ಚಿ ಲಾರ್ಡ್ ಕಾರ್ನವಾಲಿಸ್ ಅವನಿಗೆ ಒಂದು ಗೋರಿ ಕಟ್ಟಿದ್ದನು.
ಅದು ಈಗಲೂ ಕೆ.ಆರ್. ಮಾರ್ಕೆಟ್ ಹತ್ತಿರ ನೋಡಬಹುದು ಎಂದರು. ಈಗಿನ ಕೆ.ಆರ್.ಮಾರ್ಕೆಟ್ ಜಾಗವು ಸಿದ್ಧಿಕಟ್ಟೆ ಕೆರೆಯಾಗಿತ್ತು. ಅಲ್ಲಿ ಟಿಷರು ಯುದ್ಧದಲ್ಲಿ ಮಡಿದ 6000 ಸೈನಿಕರನ್ನು ಹೂತು ಕೆರೆಯನ್ನು ಮುಚ್ಚಿದರು ಎಂದರು. ಕ್ರೂರವಾದ ಇತಿಹಾಸ ಅಡಗಿದೆಯೇ ಹೊಯ್ಸಳರ ಸಾಮಂತರಾದ ಕೆಂಪೇಗೌಡರು ಹೇಗೆ ಅದನ್ನು ಕಟ್ಟಿ ಬೆಳೆಸಿದರು, ಬೆಂದಕಾಳೂರು ಅನಂತರ ಬೆಂಗಳೂರು ಆಗಿದ್ದು ಹೇಗೆ ಎನ್ನುವ ಕುರಿತು ಕಥೆಯೆಲ್ಲ ಕಪೋಲ ಕಲ್ಪಿತ ಎಂದು ಸೊಗಸಾಗಿ ವಿವರಿಸಿದರು.
ಮೈಸೂರು ಸಂಸ್ಥಾನವು ಪ್ರತಿ ಬಾರಿ ಯುದ್ಧದಲ್ಲಿ ಸೋತಾಗಲು ಸಂಧಾನ ರೂಪದಲ್ಲಿ ಒಂದೊಂದೇ ಪ್ರದೇಶಗಳನ್ನು ಬಿಟ್ಟು ಕೊಡುತ್ತಾ ಹೋಗಿ ಕಡೆಗೆ ಏನೂ ಉಳಿಯದೇ ಮಹಾರಾಜರು ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಬಂದು ನೆಲೆಸುತ್ತಾರೆ. ಇಂತಹ ಸಂದರ್ಭದಲ್ಲಿಯೇ ಪೈಲ್ವಾನ್ ಮತ್ತು ಕುದುರೆಯನ್ನು ನೋಡಿ ಕೊಳ್ಳುವ ಸಹಾಯಕನಾಗಿ ಬಂದು ಕಡೆಗೆ ತನ್ನ ಶೌರ್ಯ ಮತ್ತು ಪರಾಕ್ರಮದಿಂದ ರಾಜರ ಮೆಚ್ಚುಗೆ ಗಳಿಸಿ ಸೇನಾಧಿಪತಿಯಗಿದ್ದ ಹೈದರ್ ಅಲಿಯ ಸುಪರ್ದಿಗೆ ಮೈಸೂರು ಸಂಸ್ಥಾನ ಜಾರಿ ಹೋಗಿ ಅವನ ನಂತರ ಅಧಿಕಾರ ಅವನ ಮಗ ಟಿಪ್ಪು ಸುಲ್ತಾನನ ಕೈವಶವಾಗಿ ಹೋಗುತ್ತದೆ.
1799ರಲ್ಲಿ ಬ್ರಿಟಿಷರು ಟಿಪ್ಪು ಸುಲ್ತಾನನ್ನು ಯುದ್ದದಲ್ಲಿ ಹತ್ಯೆಮಾಡಿದ ನಂತರ ಬ್ರಿಟಿಷರು ಇಡೀ ಸಂಪತ್ತನ್ನು ದೋಚಿಕೊಂಡು ಹೋಗುತ್ತಾನೆ ಎಂದು ಹೇಳಿದರು.
ನಾಲ್ಕನೇ ಆಂಗ್ಲೋ ಮೈಸೂರು ಯುದ್ದ ನಂತರ ಶ್ರೀರಂಗಪಟ್ಟಣ ಹೊತ್ತಿ ಉರಿಯುತ್ತದೆ. ಟಿಪ್ಪು ಪತ್ರ ವ್ಯವಹಾರದಲ್ಲಿ ಯುದ್ಧ ಮುಂದೂಡುತ್ತಾರೆ. ಮಳೆಗಾಗಿ ಕಾಯುತ್ತಿರುತ್ತಾರೆ. ಈ ಯುದ್ಧ ಮಹತ್ವ ಏಕೆಂದರೆ ಕಾವೇರಿ ತೀರದಲ್ಲಿ ಕರ್ನಲ್ ವೆಸ್ಲಿ ಬೀಡು ಬಿಟ್ಟಿರುತ್ತದೆ.
ಯುದ್ಧದ ನಂತರ ಮಳೆ ಬಂತು. ಮಳೆ ಬಂದಿದ್ದರೆ ಸರಿಯಾಗಿ ಟಿಪ್ಪು ಸಾಯುತ್ತಿರಲಿಲ್ಲ. ಒಂದು ವಾರದ ನಂತರ ಕರಿಗಟ್ಟ ಬೆಟ್ಟ ದಿವಾನ್ ಪೂರ್ಣಯ್ಯ ಅವರು ಟಿಪ್ಪು ಸುಲ್ತಾನ್ ಮಗನ ಬಳಿ ಇರುತ್ತಾನೆ ಎಂದರು. ಕರ್ನಾಟಕಕ್ಕೆ ಎರಡು ಲಾಲ್ ಬಾಗ್ ಎಂದರೆ ಬೆಂಗಳೂರು ಮತ್ತು ಶ್ರೀರಂಗಪಟ್ಟಣ ಇದೆ. ಎರಡೂ ಮಾಡಿದ್ದು ಹೈದರ್ ಅಲಿ. ೧೭೯೦ ರಾಬರ್ಟ್ ಹೋ ಇಂಗ್ಲೆಂಡಿನಿಂದ ಬರುತ್ತಾರೆ. ಏಳು ಪ್ಲಾನ್ ಗಳನ್ನು ಮಾಡುತ್ತಾರೆ. ರಮಣ ಮಹರ್ಷಿ ಪಾರ್ಕ್ ಒಳಗೆ ಕಾವಲು ಗೋಪುರ ಇದೆ. ಲಾಲ್ ಬಾಗ್ ಮೇಲೆ ಕಾವಲುಗೋಪರ ಮಾಡಿದ್ದಾರೆ.
ಅಲ್ ಅಮೀನ್ ಜಾಗದಲ್ಲಿ ಅ ಬಕ್ಷಿ ಸಂತ ಅಲ್ಲಿ ಇರುತ್ತಿದ್ದ. ಅವರನ್ನು ನೋಡಲು ಹಲವಾರು ದಿನ ಕಾಯುತ್ತಿದ್ದರು. ಇದನ್ನು ನೋಡಿ ಹೈದರ್ ಅಲಿ ಮಾವಿನ ತೋಪು ಇತ್ತು. ಅದು ಈಗ ಮಾವಳ್ಳಿ ಆಗಿದೆ ಎಂದು ವಿವರಿಸಿದರು. 1790 ಲಾರ್ಡ್ ಕಾರ್ನ್ ವಾಲೀಸ್ ಬೆಂಗಳೂರಿಗೆ ಬರುತ್ತಾನೆ. ಟಿಪ್ಪು ಸುಲ್ತಾನ್ ಗೆ ಗೊತ್ತಾಗು ತ್ತದೆ. ಆಗ ಮೈಲಸಂದ್ರದ ಬಳಿ ಯುದ್ಧಕ್ಕೆ ತಯಾರಿ ಆಗುತ್ತಾರೆ. ಮೂರು ದಿನ ಕಾರ್ನ್ ವಾಲೀಸ್ ಆಚೆ ಬರಲ್ಲ. ಮೂರು ದಿನಗಳಾದರೂ ಯುದ್ಧ ಮಾಡಿಲ್ಲ. ಅದಾಗಲೇ ಮೀರ್ ಸಾದಿಕ್ ಬ್ರಿಟಿಷ್ ಜತೆ ಕೈ ಜೋಡಿಸುತ್ತಿರುತ್ತಾನೆ. ಹಲಸೂರು ಗೇಟ್ ಬಳಿ ಯುದ್ಧ ನಡೆಯುತ್ತಾನೆ. ಬಹದ್ದೂರ್ ಖಾನ್ ಅವರನ್ನು ಸಾಯಿಸುತ್ತಾನೆ ಲಾರ್ಡ್ ಕಾರ್ನ್ ಎಂದು ತಿಳಿಸಿದರು.
ಮುಮ್ಮಡಿ ಕೃಷ್ಣರಾಜ ಒಡೆಯರ್ ಸತತ ಯುದ್ದದಿಂದ ಜರ್ಜರಿತವಾಗಿ ಭೂಮಿ ಫಲವತ್ತಾಗಿದ್ದರೂ ಯಾವುದೇ ಬೆಳೆಗಳನ್ನೂ ಬೆಳೆಯದೇ ಬೆಂಗಾಡಾಗಿದ್ದ ಪ್ರದೇಶ ದಲ್ಲಿ ಬೆಳೆಗಳನ್ನು ಬೆಳೆಯಲು ಅಕ್ಕ ಪಕ್ಕದ ರಾಜ್ಯಗಳಿಂದ ಅತ್ಯುತ್ತಮ ಕೃಷಿಕರನ್ನು ಕರೆತಂದು ಅವರಿಗೆ ಉಚಿತವಾಗಿ ನೂರಾರು ಎಕರೆ ಜಮೀನುಗಳನ್ನು ಕೊಟ್ಟು ಅವರಿಗೆ ಬೆಳೆಯನ್ನು ಬೆಳೆಯಲು ಸಹಾಯ ಮಾಡಿ ಮೈಸೂರು ಸಂಸ್ಥಾನದಲ್ಲಿ ಅಹಾರ ಕ್ರಾಂತಿಗೆ ಕಾರಣೀಭೂತರಾಗುತ್ತಾರೆ ಎಂದರು.
ಬ್ರಿಟಿಷರ ಕಾಲದಲ್ಲಿ ಇಡೀ ಆಡಳಿತ ಅವರ ಕೈಯಲ್ಲಿ ಇದ್ದರೂ, ಮೈಸೂರು ಅಭಿವೃದ್ಧಿ ಆಗಿತ್ತು. ಏಕೆಂದರೆ ಮಹಾರಾಜರಲ್ಲಿ ಇದ್ದ ಬದ್ಧತೆ. ಮಹಾರಾಜರು ಒಂದು ಔತಣಕೂಟ ಏರ್ಪಡಿಸುತ್ತಾರೆ. ಮೈಸೂರು ಪಾಕ ಬಾಣಸಿಗ ಮಾದಪ್ಪ ಮಾಡಿದ. ಅದು ಮಹಾರಾಜರಿಗೆ ಕೊಡುತ್ತಾರೆ. ಆಗ ಮಹಾರಾಜರು ಇಡೀ ಜನಕ್ಕೆ ನೀಡಬೇಕು ಅಂದರು. ಜನರನ್ನು ನೋಡಿಕೊಳ್ಳುತ್ತಿದ್ದ ಪರಿ ಇದು ಎಂದು ವಿವರಿಸಿದರು.
ಮದ್ರಾಸ್ ಈ ಇಂಡಿಯಾ ಕಂಪನಿಯಲ್ಲಿ ಬೈಬಲ್ ಓದಲು ಬ್ರಿಟಿಷರು ಪ್ರಸ್ತಾಪ ಮಾಡಿದಾಗ ದೊಡ್ಡ ಹೋರಾಟ ನಡೆಯುತ್ತದೆ. ಕಂಪನಿ ಹಣಕಾಸು ವ್ಯವಹಾರ ಮಾಡುತ್ತಿದ್ದ ಲಕ್ಷ್ಮಿ ನರಸಿಂಹ ಶೆಟ್ಟಿ. ಆಗ ಇವರೆಲ್ಲ ಜತೆಗೂಡಿ ಬ್ರಿಟಿಷರ ವಿರುದ್ದ ಹೋರಾಡುತ್ತಾರೆ ಎಂದು ಹೇಳಿದ ಅವರು, 1840 ರಲ್ಲಿ ಬಂಡೀಪುರದ ಕಾಡುಗಳು ಚಾಮುಂಡಿ ಬೆಟ್ಟದಿಂದ ಶುರುವಾಗುತ್ತಿತ್ತು. ಆಗ ಬ್ರಿಟಿಷರು ಮದರಾಸು, ಬೆಂಗಳೂರು, ಮೈಸೂರು, ಊಟಿ ಗೆ ಹೋಗುತ್ತಿದ್ದರು. ಹೋದ ದಾರಿಯಲ್ಲಿ ಜನರನ್ನು ಕೊಂದ ಕ್ರೂರಿಗಳು ಬ್ರಿಟಿಷರು ಎಂದು ಮಾಹಿತಿ ನೀಡಿದರು.
***
ಭಾರತದ 565 ಸಂಸ್ಥಾನದಲ್ಲಿ ಮೈಸೂರು ನಂ.1
1800 ರಲ್ಲಿ ಬರಿಗೈಲಿ ಬಂದ ಮೈಸೂರು ಮಹಾರಾಜರು ಇರಲು ಅರಮನೆ ಇರಲಿಲ್ಲ. 1802 ರಲ್ಲಿ ದಿವಾನ್ ಪೂರ್ಣಯ್ಯ ಅವರು ಕಟ್ಟಿದರು. ಆಡಳಿತ ಶುರು ಮಾಡಿದ ಮುಮ್ಮಡಿ ಕೃಷ್ಣರಾಜ, ದಿವಾನ್ ಪೂರ್ಣಯ್ಯ ನಂತರ ಬಂದ ಆಡಳಿತದ ಅರಸರು ಅರಮನೆಗೆ ಮೆರುಗು ತಂದರು. ಭಾರತದ 565 ಸಂಸ್ಥಾನದಲ್ಲಿ ಮೈಸೂರು ನಂ.೧ ಆಯಿತು. ಕಾಣದೆ ಇರುವ ಜಪಾನ್ ಅನ್ನು ಅಲ್ಲ. ನಮ್ಮನ್ನು ಅನುಕರಿಸಬೇಕು. ಭಾರತವನ್ನು ಏಕೀಕರಣ ಮಾಡಲು ಸರ್ದಾರ್ ವಲ್ಲಭಭಾಯಿ ಪಟೇಲ್ ಮೈಸೂರಿಗೆ ಬರುತ್ತಾರೆ. ಸಂಕ್ರಮಣ ಕಾಲದಲ್ಲಿ ತ್ವರಿತಗತಿಯಲ್ಲಿ ಇಡೀ ಭಾರತವನ್ನೆ ಸುತ್ತಿದರು. ಮೈಸೂರು ಮಹಾರಾಜರು ವಿಮಾನ ಕೊಟ್ಟರು. ಭಾರತದ ಏಕೀಕರಣಕ್ಕೆ ಮೈಸೂರು ಮಹಾರಾಜರ ಕೊಡುಗೆ ಇದೆ ಎಂದು ಧರ್ಮೇಂದ್ರ ಅವರು ವಿವರಿಸಿದರು.
***
ಶಾಲಾ ಮಕ್ಕಳಿಗೆ ಅವರು ನೆಲೆಸಿರುವ ಸ್ಥಳಗಳ ಬಗ್ಗೆ ಮಾಹಿತಿ ನೀಡಬೇಕಾಗಿದೆ. ಆಗ ಗತ ಕಾಲದ ಇತಿಹಾಸ ಅರ್ಥವಾಗುತ್ತದೆ. ಪುಸ್ತಕಗಳಲ್ಲಿ ಕರ್ನಾಟಕದ
ಇತಿಹಾಸ ಕುರಿತು ಸಾಕಷ್ಟು ಮಾಹಿತಿ ಇಲ್ಲ. ಪುಸ್ತಕಗಳಲ್ಲಿ ಎಲ್ಲಾ ವಿಷಯಗಳನ್ನು ಮಾಹಿತಿ ನೀಡಬೇಕು.
– ಧರ್ಮೇಂದ್ರ ಕುಮಾರ್ ಅರೇನಹಳ್ಳಿ
ಇತಿಹಾಸ ಸಂಶೋಧಕ