Friday, 18th October 2024

2019 ಮಿಸ್ ಯುಎಸ್‌ಎ ’ಚೆಸ್ಲಿ ಕ್ರಿಸ್ಟ್’ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

ನ್ಯೂಯಾರ್ಕ್: ಮಿಸ್ ಯುಎಸ್‌ಎ(2019 ರಲ್ಲಿ ) ಚೆಸ್ಲಿ ಕ್ರಿಸ್ಟ್ (30) ಯುನೈಟೆಡ್ ಸ್ಟೇಟ್ಸ್‌ನ ಮ್ಯಾನ್ಹ್ಯಾಟನ್‌ನಲ್ಲಿರುವ ಬಹುಮಹಡಿ ಅಪಾರ್ಟ್ಮೆಂಟ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

30 ವರ್ಷದ ಚೆಸ್ಲಿ ಕ್ರಿಸ್ಟ್ ತನ್ನ ಅಪಾರ್ಟ್ಮೆಂಟ್ ಕಟ್ಟಡದ 29 ನೇ ಮಹಡಿಯಲ್ಲಿರುವ ಸಾಮಾನ್ಯ ಪ್ರದೇಶದಿಂದ ಜಿಗಿದಿದ್ದಾರೆ ಎನ್ನಲಾಗಿದೆ. ಮೃತ ಮಿಸ್ ಕ್ರಿಸ್ಟ್ 2019 ರಲ್ಲಿ ಮಿಸ್ USA ಕಿರೀಟ ಧರಿಸಿದ್ದರು.

1991ರಲ್ಲಿ ಜನಿಸಿದ್ದ ಚೆಸ್ಲಿ ಕ್ರಿಸ್ಟ್ ಅವರ ಲಿಂಕ್ಡ್‌ಇನ್ ಖಾತೆಯ ಪ್ರಕಾರ, ಅವರು ಉತ್ತರ ಕ್ಯಾರೋ ಲಿನ್‌ನ ವಿನ್ಸ್‌ಟನ್-ಸೇಲಂನಲ್ಲಿರುವ ವೇಕ್ ಫಾರೆಸ್ಟ್ ಯೂನಿವರ್ಸಿಟಿ ಸ್ಕೂಲ್ ಆಫ್ ಲಾದಿಂದ ಕಾನೂನು ಪದವಿ ಪಡೆದರು. ಅವರು ಸೆಪ್ಟೆಂಬರ್ 2017 ರಿಂದ ಮೇ 2019 ರವರೆಗೆ ಷಾರ್ಲೆಟ್‌ನಲ್ಲಿರುವ ಪೋಯ್ನರ್-ಸ್ಪ್ರುಲ್ ಎಲ್‌ಎಲ್‌ಪಿಯಲ್ಲಿ ಸಹಾಯಕ ವಕೀಲರಾಗಿದ್ದರು.