Friday, 18th October 2024

ಆಗಸ್ಟ್ 18-22ರವರೆಗೆ ಜಿಂಬಾಬ್ವೆಯಲ್ಲಿ ಏಕದಿನ ಸರಣಿ

ಮುಂಬೈ: ಟೀಂ ಇಂಡಿಯಾ ಆಗಸ್ಟ್ ನಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಆಗಸ್ಟ್ 18-22ರವರೆಗೆ ಮೂರು ಏಕದಿನ ಪಂದ್ಯಗಳಿಗೆ ಜಿಂಬಾಬ್ವೆ ಪ್ರವಾಸ ಮಾಡಲಿದೆ.

ಏಷ್ಯಾ ಕಪ್‌ ಗೆ ಮುಂಚಿತವಾಗಿ ಸರಣಿ ಆಡಲಿರುವುದರಿಂದ, ಪೂರ್ಣ ಪ್ರಮಾಣದ ಭಾರತ ತಂಡವು ಈ ಸರಣಿ ಆಡುವುದು ಅನುಮಾನ ಎನ್ನಲಾಗಿದೆ.

ಪ್ರತಿಯೊಂದು ಸಣ್ಣ ದೇಶವು ಭಾರತದ ವಿರುದ್ಧ ಆಡಲು ಎದುರು ನೋಡುತ್ತಿದೆ. ಜಿಂಬಾಬ್ವೆಯ ಕ್ರಿಕೆಟ್ ಗೆ ಇದು ದೊಡ್ಡ ವಿಷಯವಾಗಿದೆ. ಜಿಂಬಾಬ್ವೆಯ ಪ್ರತಿಯೊಬ್ಬ ಕ್ರಿಕೆಟಿಗರು ಎದುರು ನೋಡುತ್ತಿದ್ದಾರೆ . ಇದು ಅವರಿಗೆ ಉತ್ತಮ ಕಲಿಕೆಯ ಎಂದು ಲಾಲ್ ಚಂದ್ ರಜಪೂತ್ ಹೇಳಿದ್ದಾರೆ.

ಭಾರತ ತಂಡ ಇಂಗ್ಲೆಂಡ್ ಸರಣಿಯ ಬಳಿಕ ವೆಸ್ಟ್ ಇಂಡೀಸ್ ನಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ. ಬಳಿಕ ಜಿಂಬಾಬ್ವೆ ಸರಣಿ ಆಡಲಿದೆ.