Saturday, 30th November 2024

ಕೊಲ್ಹಾರ ಜಾನುವಾರ ಸಂತೆ ನಿಷೇಧ

ಕೊಲ್ಹಾರ: ಕೊಲ್ಹಾರ ಪಟ್ಟಣದಲ್ಲಿ ಪ್ರತಿ ಬುಧವಾರ ನಡೆಯುವ ಜಾನುವಾರು ಸಂತೆಯನ್ನು ನಿಷೇಧಿಸಲಾಗಿದೆ ಎಂದು ಪ.ಪಂ ಮುಖ್ಯಾಧಿಕಾರಿ ವಿರೇಶ ಹಟ್ಟಿ ಹೇಳಿದ್ದಾರೆ.

ಪ.ಪಂ ಕಾರ್ಯಾಲಯದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಜಾನುವಾರುಗಳ ಚರ್ಮಗಂಟು ರೋಗ ವ್ಯಾಪಕ ವಾಗಿ ಹರಡುತ್ತಿರುವ ಕಾರಣ ಸದರಿ ರೋಗವನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಅನಿಮಲ್ ಡಿಸೀಸ್ ಅಕ್ಟ್ 1961 ರ ಅಡಿ ಮತ್ತು ಕಾಯ್ದೆ 1973 ರ ಕಲಂ 144 ರ ಮೇರೆಗೆ ದಿನಾಂಕ 17-9-2022 16-10-2022 ರ ವರೆಗೆ ಜಾನುವಾರುಗಳ ಸಂತೆ, ಜಾತ್ರೆ ಹಾಗೂ ಸಾಗಾಣಿಕೆಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಿಷೇಧಿಸಲಾಗಿದೆ ಎಂದು ಹೇಳಿದರು.