ಶಿಶಿರ ಕಾಲ
shishirh@gmail.com
ಸರ್ಗೆ ಸ್ಕ್ರಿಪಾಲ್. ಆತನೊಬ್ಬ ಡಬಲ್ ಏಜೆಂಟ್/ಸ್ಪೈ. ಡಬಲ್ ಏಜೆಂಟ್ ಎಂದರೆ ಪರದೇಶದಲ್ಲಿದ್ದು ಬೇಹುಗಾರಿಕೆ ಮಾಡುತ್ತ, ಕ್ರಮೇಣ ಆ ಅನ್ಯದೇಶದ ಬೇಹುಗಾರಿಕಾ ಸಂಸ್ಥೆಯ ಜತೆಯೇ ಕೈಜೋಡಿಸುವವ.
ಹಾಗಾದಾಗ ಆತನ ಮಾತೃದೇಶ ಹೇಗೆ ಬೇಹುಗಾರಿಕೆ ಮಾಡುತ್ತದೆ, ಯಾರ್ಯಾರು ಬೇಹುಗಾರರು ಎಂಬಿತ್ಯಾದಿ ವಿಷಯ ಬಯಲಾಗು ತ್ತದೆ. ಇದು ಪ್ರತಿ ಬೇಹುಗಾರಿಕೆಯ ಭಾಗ. ಆತ ತನಗೋಸ್ಕರ ಪರದೇಶದಲ್ಲಿ ಬೇಹುಗಾರಿಕೆ ಮಾಡುತ್ತಿದ್ದೇನೆಂದೇ ಮಾತೃದೇಶ ಅಂದುಕೊಂಡಿರುತ್ತದೆ. ಆದರೆ ಆತ ಮಾತ್ರ ಆ ಪರದೇಶದ ಜತೆ ಕೆಲಸ ಮಾಡುತ್ತ ತನ್ನ ದೇಶದ
ಕಣ್ಣಿಗೆ ಮಣ್ಣೆರಚುತ್ತಿರುತ್ತಾನೆ.
ಹೆಚ್ಚಾಗಿ ಆತ ಪರದೇಶದಲ್ಲಿ ಸಿಕ್ಕಿಬಿದ್ದಾಗ ಜೀವ ಉಳಿಸಿಕೊಳ್ಳಲು ಅಥವಾ ಹಣಕ್ಕಾಗಿ ಇಂಥ ಕೆಲಸಕ್ಕೆ ಮುಂದಾಗುತ್ತಾನೆ. ಅಂಥವನು ಮಾತೃದೇಶಕ್ಕೆ ದ್ರೋಹಿ. ಶತ್ರುದೇಶಕ್ಕೆ ಸ್ನೇಹಿತ, ಹೀರೋ. ಸರ್ಗೆ ಇಂಗ್ಲೆಂಡಿಗೆ ಹೊಕ್ಕ ರಷ್ಯಾದ ಬೇಹುಗಾರ. ಆತ ಕೈಜೋಡಿಸಿದ್ದು ಅಮೆರಿಕ ಮತ್ತು ಇಂಗ್ಲೆಂಡಿನ ಜತೆ. ಇದು ಮುಂದೊಂದು ದಿನ ಪುಟಿನ್ ಗೆ ತಿಳಿಯುತ್ತದೆ. 2004ರ ಒಂದು ದಿನ ಸರ್ಗೆ ಲಂಡನ್ನಿಂದ ರಷ್ಯಾಗೆ ಬಂದಿಳಿಯುತ್ತಿದ್ದಂತೆ ಪುಟಿನ್ ಆಡಳಿತ ಬಂಧಿಸುತ್ತದೆ.
ಸರ್ಗೆ ಸಾಮಾನ್ಯ ಬೇಹುಗಾರನೇನಲ್ಲ, ರಷ್ಯಾದ ಮಿಲಿಟರಿಯಲ್ಲಿ ಕೆಲಸ ಕಲಿತವ. ಅವರಿಂದಲೇ ತರಬೇತಾಗಿ ನಂತರ ಇಂಗ್ಲೆಂಡಿಗೆ ಬೇಹುಗಾರನಾಗಿ ಒಳನುಸುಳಿದವ. ನಂತರ ಇಂಗ್ಲೆಂಡಿನ ಬೇಹುಗಾರಿಕಾ ಸಂಸ್ಥೆ ಎಂಐ6 ಜತೆ ಕೈ ಜೋಡಿಸು ತ್ತಾನೆ, ಅದು ಹೇಗೋ ಪುಟಿನ್ಗೆ ತಿಳಿದುಬಿಡುತ್ತದೆ. ರಷ್ಯಾದಲ್ಲಿ ಆತನಿಗೆ ಜೈಲುಶಿಕ್ಷೆಯೂ ಆಗುತ್ತದೆ. ಸುಮಾರು ೬ ವರ್ಷ ಆತ ಬದುಕಿzನೋ ಇಲ್ಲವೋ ಎಂಬುದು ಹೊರಜಗತ್ತಿಗೆ ತಿಳಿಯುವುದೇ ಇಲ್ಲ.
ಸಾಮಾನ್ಯವಾಗಿ ಹಾಗೆ ಸಿಕ್ಕಿಬಿದ್ದವರು ಮತ್ತೆಂದೂ ಹೊರಜಗತ್ತನ್ನು ನೋಡುವುದು ಅಸಾಧ್ಯ; ಅದರಲ್ಲೂ ರಷ್ಯಾದಲ್ಲಿ. ಇತ್ತ, ತನ್ನ ಮೇಲೆ ಬೇಹುಗಾರಿಕೆ ಮಾಡುತ್ತಿದ್ದ ಕೆಲವು ರಷ್ಯನ್ ಬೇಹುಗಾರರನ್ನು ಅಮೆರಿಕ ಬಂಽಸಿರುತ್ತದೆ. 2010ರಲ್ಲಿ ರಷ್ಯಾ-
ಅಮೆರಿಕ ನಡುವೆ ಮಾತುಕತೆಯಾದಾಗ, ಹಾಗೆ ಬಂಽಸಿದ ಹತ್ತು ರಷ್ಯನ್ ಬೇಹುಗಾರರನ್ನು ಅಮೆರಿಕ ಬಿಡಬೇಕು, ಸರ್ಗೆ
ಸೇರಿದಂತೆ ಇನ್ನು ಮೂವರನ್ನು ರಷ್ಯಾ ಬಿಡಬೇಕು ಎಂಬ ಒಡಂಬಡಿಕೆಯಾಗುತ್ತದೆ. ಇದನ್ನು ‘ಸ್ಪೈ ಸ್ವಾಪ್’ ಎನ್ನುತ್ತಾರೆ.
ಇದು ಸಾಮಾನ್ಯವಾಗಿ ಶತ್ರುದೇಶಗಳ ನಡುವೆ ಆಗೀಗ ನಡೆಯುತ್ತಿರುತ್ತದೆ.
ಹೀಗೆ ಬಿಡುಗಡೆಯಾದ ಸರ್ಗೆ ಇಂಗ್ಲೆಂಡಿಗೆ ಬಂದು ಬೇರೂರುತ್ತಾನೆ. ನಂತರವೂ ಆತ ಬ್ರಿಟಿಷ್ ಇಂಟೆಲಿಜೆನ್ಸ್ ಏಜೆನ್ಸಿಗಳ ಜತೆ ಕೆಲಸ ಮಾಡುತ್ತಿರುತ್ತಾನೆ. ೨೦೧೮ರ ಮಾರ್ಚ್ನಲ್ಲಿ ಸರ್ಗೆಯ ಮಗಳು ಯುಲಿಯಾ ತಂದೆಯನ್ನು ನೋಡಲು ರಷ್ಯಾದಿಂದ ಲಂಡನ್ನಿಗೆ ಬಂದಿರುತ್ತಾಳೆ. ಅವರಿಬ್ಬರು ಸಲಿಸ್ಬರಿ ನಗರದ ಮಾಲ್ ಒಂದರ ಹತ್ತಿರದ ರಸ್ತೆಬದಿಯ ಬೆಂಚಿನಲ್ಲಿ ಕೂತಿದ್ದಾಗ ಉಸಿರು ಕಟ್ಟಿದಂತಾಗಿ ಒzಡುವುದು ಅಲ್ಲಿ ಓಡಾಡುತ್ತಿರುವವರ ಗಮನಕ್ಕೆ ಬರುತ್ತದೆ. ಅವರಿಬ್ಬರ ಮೇಲೆ ‘ನೋವಿಚೋಕ್’
ಎಂಬ ಅತ್ಯಂತ ಬಲಶಾಲಿ ವಿಷದ ಪ್ರಯೋಗವಾಗಿರುತ್ತದೆ.
ತರ ಆತನ ಲಂಡನ್ ಮನೆಗೆ ಹೋದ ಡಿಟೆಕ್ಟಿವ್, ಆತನನ್ನು ಚಿಕಿತ್ಸೆ ಮಾಡಿದ ವೈದ್ಯರಿಗೂ ವಿಷ ತಗುಲಿ ಆರೋಗ್ಯ ವ್ಯತ್ಯಯ ವಾಗುತ್ತದೆ. ನೋವಿಚೋಕ್ ಅತ್ಯಂತ ಪರಿಣಾಮಕಾರಿ ವಿಷ. ಸಲಿಸ್ಬರಿ ಯಲ್ಲಿ ಇಂಥ ವಿಷಪ್ರಯೋಗವಾಗಿದ್ದು ತಿಳಿಯುತ್ತಿದ್ದಂತೆ ಇಡೀ ಇಂಗ್ಲೆಂಡ್ ನಡುಗಿಹೋಗುತ್ತದೆ. ಕಾರಣ, ಬಣ್ಣ ಮತ್ತು ವಾಸನೆಯಿಲ್ಲದ ಈ ವಿಷ- ಕೇವಲ ಒಂದು ಚಮಚದಷ್ಟು ಸಾವಿರಕ್ಕೂ ಹೆಚ್ಚು ಮಂದಿಯನ್ನು ಕೊಲ್ಲಬಲ್ಲದು.
ಹಾಗೇ ಬಿಟ್ಟರೆ ಸುಮಾರು 50 ವರ್ಷವಾದರೂ ಅದರ ವಿಷಗುಣ ಹಾಗೇ ಇರುತ್ತದೆ. ಇದನ್ನು ಪ್ರಯೋಗಿಸಿದ್ದು ಯಾರು?
ಎಷ್ಟು ಪ್ರಮಾಣದಲ್ಲಿ ಇದನ್ನು ದೇಶದೊಳಕ್ಕೆ ಸ್ಮಗಲ್ ಮಾಡಿ ತರಲಾಗಿದೆ? ಹೀಗೆ ನೂರೆಂಟು ಪ್ರಶ್ನೆಗಳು. ಊರಿಗೆ ಊರೇ
ಲಾಕ್ಡೌನ್ ಸ್ಥಿತಿ. ಇದು ಕೇವಲ ವಿಷವಲ್ಲ, ಜನಸಮೂಹವನ್ನೇ ಕೊಲ್ಲಬಹುದಾದ ಮಾಸ್ ಕೆಮಿಕಲ್ ಅಸ. ಸರ್ಗೆ ರಷ್ಯಾದ ವಿರೋಽ. ಅಲ್ಲದೆ ನೋವಿಚೋಕ್ ರಷ್ಯಾದಲ್ಲಿ 1970-80ರಲ್ಲಿ ಅಭಿವೃದ್ಧಿಪಡಿಸಲ್ಪಟ್ಟ ವಿಷ. ಹೀಗಾಗಿ ಇದು ರಷ್ಯಾದ್ದೇ ಕೆಲಸ ಎಂಬ ಹೇಳಿಕೆ ನೀಡುತ್ತಾರೆ ಅಂದಿನ ಇಂಗ್ಲೆಂಡ್ ಪ್ರಧಾನಿ ತೆರೇಸಾ ಮೇ.
ಇಷ್ಟಕ್ಕೇ ಮುಗಿಯುವುದಿಲ್ಲ, ಸರ್ಗೆ ವಾಸಿಸುತ್ತಿದ್ದ ಕಟ್ಟಡದ ಸುತ್ತ ಗೋಡೆ ಕಟ್ಟಲಾಗುತ್ತದೆ. ಅದನ್ನು ನೆಲಸಮ ಮಾಡಿದರೂ ಆ ವಿಷ ಅಲ್ಲಿದ್ದಿದ್ದರೆ ಅದನ್ನು ಮಾತ್ರ ನಾಶಮಾಡಲು ಸಾಧ್ಯವಿಲ್ಲ. ಬೆಂಕಿಯಿಟ್ಟು ಸುಟ್ಟರೆ ಗಾಳಿಯಲ್ಲಿ ಅದು ಸೇರಿಕೊಳ್ಳಬಹುದು. ಇದಾದ 3 ತಿಂಗಳ ನಂತರ ಇಂದಿನ ಇಂಗ್ಲೆಂಡ್ ಮಹಾರಾಜ, ಅಂದಿನ ರಾಜಕುಮಾರ ಚಾಲ್ಸ ಸಲಿಸ್ಬರಿ ನಗರಕ್ಕೆ ಭೇಟಿ ಯಿತ್ತು, ಈ ಊರು ವಾಸಯೋಗ್ಯ ಎಂಬಂತೆ ಪೋಸು ಕೊಟ್ಟು ಬರುತ್ತಾನೆ.
ಇದಾದ ಐದೇ ದಿನದ ನಂತರ ಅಲ್ಲಿನ ನಾಗರಿಕನೊಬ್ಬನಿಗೆ ಪಾರ್ಕ್ ಒಂದರಲ್ಲಿ ತುಟ್ಟಿ ಬ್ರ್ಯಾಂಡ್ನ ಒಂದು ಸೆಂಟಿನ ಬಾಟಲಿ ಸಿಗುತ್ತದೆ. ಅದನ್ನಾತ ತನ್ನ ಗೆಳತಿಗೆ ನೀಡಿದಾಗ, ಆಕೆ ಮುಂಗೈಗೆ ಸೆಂಟ್ ಸಿಂಪಡಿಸಿಕೊಂಡು ಮೂಸುತ್ತಾಳೆ. ಅದರಲ್ಲಿ ಅದೇ ನೋವಿಚೋಕ್ ವಿಷವಿರುತ್ತದೆ. ಆಕೆ ಕೊನೆಯುಸಿರೆಳೆಯುತ್ತಾಳೆ. ಇದರಿಂದ ಇಡೀ ಸಲಿಸ್ಬರಿ ಮತ್ತು ಇಂಗ್ಲೆಂಡ್ ಇನ್ನೊಮ್ಮೆ ಧೃತಿಗೆಡುತ್ತವೆ. ಇದಾಗಿದ್ದೇ ತಡ, ಸುತ್ತಮುತ್ತಲ ನೂರಾರು ಮಂದಿ ಮನೆ ಖಾಲಿಮಾಡುತ್ತಾರೆ, ಇನ್ನೊಂದಿಷ್ಟು ಜನ ಆ ಊರನ್ನೇ ಬಿಟ್ಟುಹೋಗುತ್ತಾರೆ. ಹೀಗೆ ೪೦ ಸಾವಿರ ಮಂದಿಯ ಜೀವನ ಒಮ್ಮಿಂದೊಮ್ಮೆಲೇ ಅಸ್ತವ್ಯಸ್ತ.
ಸುಮಾರು ೮೦೦ ಸೈನಿಕರು ಹಗಲು ರಾತ್ರಿ ಒಂದು ವರ್ಷದವರೆಗೆ ಸ್ವಚ್ಛಗೊಳಿಸಿದ ಮೇಲೆ ಸಲಿಸ್ಬರಿ ವಿಷಮುಕ್ತ ಎಂದು
ಘೋಷಿಸಲ್ಪಡುತ್ತದೆ. ಕೆಲವೇ ಹನಿಗಳಷ್ಟು ವಿಷ ಒಂದು ನಗರ, ದೇಶ, ಸೈನ್ಯ, ವೈದ್ಯರು, ಪ್ರಜೆಗಳು, ಪ್ರಧಾನಿ, ಮಂತ್ರಿಗಳು
ಹೀಗೆ ಎಲ್ಲರನ್ನೂ ಕಂಗಾಲು ಮಾಡಿಬಿಡುತ್ತದೆ. ಈ ವಿಷವನ್ನು ‘ನರ್ವ್ ಏಜೆಂಟ್’ ಎನ್ನುತ್ತಾರೆ. ಇಂಥ ಅದೆಷ್ಟೋ ವಿಷಗಳನ್ನು ರಷ್ಯಾ, ಉತ್ತರ ಕೊರಿಯಾ ಮತ್ತು ಇರಾಕ್ ತಮ್ಮ ಅಸ್ತ್ರವಾಗಿಟ್ಟುಕೊಂಡಿದೆ ಎಂಬುದು ಪಾಶ್ಚಾತ್ಯ ಸರಕಾರಗಳ ದೂರು. ತಿರುಗಿಬಿದ್ದ ಅದೆಷ್ಟೋ ಬೇಹುಗಾರರನ್ನು, ಓಡಿಹೋದ ಬ್ಯುಸಿನೆಸ್ ಟೈಕೂನ್ಗಳನ್ನು ರಷ್ಯಾ ಅನ್ಯ ನೆಲದಲ್ಲಿ ಕೊಂದ ಉದಾಹರಣೆಗಳು ಬಹಳಷ್ಟಿವೆ.
ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ತನ್ನ ಅಣ್ಣನನ್ನು (ಮಲತಾಯಿಯ ಮಗ) ಮಲೇಷ್ಯಾದ ಅಂತಾರಾಷ್ಟ್ರೀಯ
ವಿಮಾನ ನಿಲ್ದಾಣದಲ್ಲಿ ಕೊಲ್ಲಿಸಲಿಕ್ಕೂ ಇಂಥದ್ದೊಂದು ನರ್ವ್ ಏಜೆಂಟನ್ನು ಬಳಸಿದ್ದು ನೀವು ಓದಿರಬಹುದು. ರಷ್ಯಾದ ಮಾಜಿ
ಸೇನಾಽಕಾರಿ ಅಲೆಕ್ಸಾಂಡರ್ ಲಿಟ್ವಿನೆಂಕೋನ ಚಹಾದಲ್ಲಿ ಪೊಲೋನಿಯಮ್ ವಿಕಿರಣಕಾರಿ ವಸ್ತು ಸೇರಿಸಿ ಕೊಲ್ಲಲಾಗಿತ್ತು.
ಹೀಗೆ ನರ್ವ್ ಏಜೆಂಟ್ ಬಳಸಿ ನಡೆದ ಕೊಲೆಗಳು ಸಾಕಷ್ಟಿವೆ.
ವಿಶ್ವವಾಣಿಯ ಆಗಸ್ಟ್ ೩೧ರ ಸಂಚಿಕೆಯ ತಮ್ಮ ಅಂಕಣದಲ್ಲಿ ನಾ. ಸೋಮೇಶ್ವರ ಅವರು ಪ್ರಾಚೀನ ಕಾಲದಲ್ಲಿ ವಿಷಪ್ರಾಶನ ಹೇಗೆಲ್ಲ ನಡೆಯುತ್ತಿತ್ತು, ಭಾರತದಲ್ಲಿ ಎಲ್ಲೆಲ್ಲಿ ನಡೆಯಿತು ಎಂಬ ಬಗೆಗಿನ ಅದ್ಭುತ ವಿವರ ನೀಡಿದ್ದರು. ವಿಷ ತಯಾರಿಸಿ ಅದರಿಂದ ಕೊಲ್ಲುವ ಪದ್ಧತಿ ಬಹಳ ಹಿಂದಿನದು. ರೋಮನ್ನರ ಕಾಲದ ದಾಖಲೆಗಳಲ್ಲಿ, ರಾಮಾಯಣ- ಮಹಾಭಾರತದಲ್ಲಿ ಈ ಕುರಿತ ಉಖಗಳಿವೆ. ಆದರೆ ಅವೆಲ್ಲ ಇಂದಿನಂತೆ ಆಧುನಿಕ ಲ್ಯಾಬ್ಗಳಲ್ಲಿ ತಯಾರಿಸಿದ, ಸಾವಿರಾರು ಜನರನ್ನು ಒಮ್ಮೆಲೇ ಕೊಲ್ಲಬಹುದಾದ ವಿಷಗಳಲ್ಲ.
ಇಂದಿನ ಆಧುನಿಕ ನರ್ವ್ ಏಜೆಂಟ್ಗಳು ಅತ್ಯಂತ ವಿಷಕಾರಿ. ಆ ಕಾರಣಕ್ಕೆ ಅವನ್ನು ಸಾಗಿಸುವುದು, ಪ್ರಯೋಗಿಸುವುದು ಕೂಡ ಅಷ್ಟೇ ಕಷ್ಟದ ಕೆಲಸ. ನೋವಿಚೋಕ್ ಅನ್ನೇ ತೆಗೆದುಕೊಳ್ಳಿ. ಅದನ್ನು ಮೂಸಿ ಅಥವಾ ತಿಂದೇ ದೇಹದೊಳಕ್ಕೆ
ಹೋಗಬೇಕೆಂದೇನಿಲ್ಲ. ಅದನ್ನು ಚರ್ಮದ ಮೇಲೆ ಹನಿಯ ಐವತ್ತು ಭಾಗದಲ್ಲಿ ಒಂದನ್ನು ತೆಗೆದು ಹಚ್ಚಿದರೆ ದೇಹದೊಳಕ್ಕೆ
ಹೀರಲ್ಪಟ್ಟು ಸಾವು ಸಂಭವಿಸುತ್ತದೆ.
ಹಾಗಾದರೆ ಇಂಥ ಅದೆಷ್ಟು ಸಿಂಥೆಟಿಕ್ ವಿಷಗಳಿವೆ? ಅದನ್ನು ಮೊದಲು ತಯಾರಿಸುವ ಪ್ರಮೇಯ ಹೇಗೆ ಬಂತು? ಎಂಬ ಪ್ರಶ್ನೆಗಳು ಸಹಜ. ಮೊದಲ ನರ್ವ್ ಏಜೆಂಟ್ ತಯಾರಿಸಿದ್ದು ಜರ್ಮನಿಯವರು, 1934ರಲ್ಲಿ. ಮೊದಲ ಮಹಾ ಯುದ್ಧ ಮುಗಿದು ಎರಡನೆಯದರ ಹೊಸ್ತಿಲಲ್ಲಿದ್ದ ಸಮಯ. ಆಗ ಆಹಾರ ಕೊರತೆಯಿತ್ತು, ಕೀಟನಾಶಕದ ತೀವ್ರ ಅಗತ್ಯವಿತ್ತು. ಲ್ಯಾಬ್ನಲ್ಲಿ ನಾನಾರೀತಿಯ ಕೀಟನಾಶಕ ರಾಸಾಯನಿಕವನ್ನು ತಯಾರಿಸುವಾಗ ಟ್ಯೂಬನ್ ಎಂಬ ಘೋರವಿಷದ ಅವಿಷ್ಕಾರವಾಯಿತು.
ಅರ್ಧ ಮಿಲಿಗ್ರಾಂ ಒಬ್ಬನನ್ನು ಕೊಲ್ಲುವಷ್ಟು ವಿಷ. ಆದರೆ ಜನರನ್ನು ಕೊಲ್ಲುವ ಹತ್ಯಾರವಾಗಿ ಜರ್ಮನಿ ಅದನ್ನು ಬಳಸಿದ್ದಿಲ್ಲ. ಏಕೆಂದರೆ ಅಂಥ ಹಿಕ್ಮತ್ತು ಆಗ ಅಷ್ಟು ಸುಲಭದ್ದಾಗಿರಲಿಲ್ಲ. ಅಲ್ಲಿಂದೀಚೆ ಅಮೆರಿಕ ಯುದ್ಧಕ್ಕೋಸ್ಕರ ಇಂಥದ್ದೊಂದಿಷ್ಟು ವಿಷಗಳನ್ನು ಲ್ಯಾಬ್ನಲ್ಲಿ ತಯಾರಿಸಲು ಶುರುವಿಟ್ಟುಕೊಂಡಿತು. ಇದು 1990ರವರೆಗೂ ಮುಂದುವರಿಯಿತು. ಇದರ ತಯಾರಿಕೆಗೆ ಬೇಕಾಗುವ ಕಚ್ಚಾ ರಾಸಾಯನಿಕದ ಪೂರೈಕೆಯನ್ನು ಕಂಪನಿಗಳು ನಿಲ್ಲಿಸಿದ ಮೇಲೆ ಮತ್ತು ನೈತಿಕ ಕಾರಣ ಗಳಿಂದ ಅಮೆರಿಕ ಈ ಕೆಲಸವನ್ನು ಇತ್ತೀಚೆಗೆ ಕೈಬಿಟ್ಟಿತು. ಆದರೆ ಲಕ್ಷಗಟ್ಟಲೆ ಜನರನ್ನು ಏಕಕಾಲಕ್ಕೆ ಕೊಲ್ಲಬಹುದಾದ ಇಂಥ ರಾಸಾಯನಿಕಗಳನ್ನು ಸದ್ದಾಂ ಹುಸೇನ್ ತಯಾರಿಸುತ್ತಲೇ ಇದ್ದ ಗುಮಾನಿಯಿತ್ತು.
ಮುಂದೊಮ್ಮೆ ಇರಾಕಿನ ಮೇಲೆ ಅಮೆರಿಕ ದಂಡೆತ್ತಿ ಹೋಗಲು ಈ ಗುಮಾನಿಯೇ ಕಾರಣವಾಯಿತು. ಆದರೆ ಇರಾಕಿನಲ್ಲಿ ಅಂಥ ವಿಷಗಳ ಪ್ರಮಾಣ ಅಷ್ಟೇನೂ ಇರದಿದ್ದುದು ಬೇರೆ ವಿಷಯ. ಈಗ ರಷ್ಯಾ ಮತ್ತು ಉತ್ತರ ಕೊರಿಯಾ ಮಾತ್ರ ಇಂಥ ರಾಸಾಯನಿಕ ವಿಷವನ್ನು ತಯಾರಿಸುವ, ಬಳಸುವ ಕೆಲಸ ಮಾಡುತ್ತಿವೆ ಎಂಬುದು ಅಮೆರಿಕ ಮತ್ತು ಪಶ್ಚಿಮ ದೇಶಗಳ ತಕರಾರು. ಇಂಥ ಘಟನೆಗಳೂ ಈ ತಕರಾರಿಗೆ ಪುಷ್ಟಿ ನೀಡುತ್ತವೆ. ಪ್ರಸ್ತುತ ಇಂಥ ಸಮೂಹನಾಶಕ ವಿಷಗಳು ಯಾವ ದೇಶಗಳ ಬಳಿಯಿವೆ, ಯಾರಲ್ಲಿಲ್ಲ, ಯಾರು ಎಷ್ಟು ಸಂಭಾವಿತರು ಎಂದು ಗ್ರಹಿಸುವುದು ಕಷ್ಟ.
ಮೊದಲೇ ಹೇಳಿದಂತೆ ಇಂಥ ಮಹಾವಿಷವನ್ನು ನಾಶಮಾಡುವುದು ಸುಲಭದ ಕೆಲಸವಲ್ಲ. ಸುಡುವಂತಿಲ್ಲ, ಚೆಲ್ಲುವಂ
ತಿಲ್ಲ, ಹಾಗೇ ಬಿಡುವಂತೆಯೂ ಇಲ್ಲ. ಹೀಗಾಗಿ ಅಣುವಿದ್ಯುತ್ ಸ್ಥಾವರದಂಥ ದೊಡ್ಡ ಸೌಕರ್ಯದಲ್ಲಿ ಜಾಗರೂವಾಗಿ, ಪ್ರತಿ ರಾಸಾಯನಿಕಗಳನ್ನು ಬಳಸಿ ಇದನ್ನು ನಾಶಮಾಡಬೇಕು. ಇಲ್ಲವೇ, ಇದು ಹೊರಬಾರದಂತೆ, ತುಕ್ಕು ಹಿಡಿಯದ ಬಲಿಷ್ಠ ಲೋಹಪೆಟ್ಟಿಗೆಗಳಲ್ಲಿಟ್ಟು, ಸಮುದ್ರದಾಳಕ್ಕಿಳಿದು ಹುಗಿದು ಬರಬೇಕು. ಒಂದು ಚಮಚ ವಿಷ ಸಾವಿರ ಮಂದಿಯನ್ನು ಕೊಲ್ಲಬಹುದು ಎಂದೆನಲ್ಲ.
GA, GB, VX, Tuban, Sarin, Soman ಹೀಗೆ ೧೫ ಟನ್ನಿನಷ್ಟು ವೈವಿಧ್ಯಮಯ ನರ್ವ್ ಏಜೆಂಟ್ಗಳನ್ನು ಅಮೆರಿಕ 2020 ರಲ್ಲಿ ನಾಶಮಾಡಿರುವುದು ಅದರ ಸೇನಾ ಜಾಲತಾಣ ದಲ್ಲಿ ನಮೂದಾಗಿದೆ. ಇದರರ್ಥ, ಇರಾಕಿನ ಮೇಲೆ ಅಮೆರಿಕ ಅದೇ ಕಾರಣಕ್ಕೆ ದಾಳಿ ಮಾಡುವಾಗ ಕೂಡ ತನ್ನಲ್ಲಿಯೇ ಇದೆಲ್ಲವನ್ನು ಇಟ್ಟುಕೊಂಡಿದ್ದುದು ಸ್ಪಷ್ಟವಾಗುತ್ತದೆ. ಇಂಥ ಪರಮವಿಷಗಳ ತಯಾರಿಕೆ ಭಾರಿ ಕಷ್ಟದ ಕೆಲಸವೆಂದು ನೀವು ಅಂದುಕೊಂಡಿರಬಹುದು. ಆದರೆ, ಅಣ್ವಸ್ತ್ರಕ್ಕೆ ಹೋಲಿಸಿದರೆ ಇವುಗಳ ತಯಾರಿಕೆ ಅಂಥ ಕಷ್ಟವೇನಲ್ಲ. ಕಳೆದ ಮಾರ್ಚ್ನಲ್ಲಿ ಸುದ್ದಿಯೊಂದು ಅಮೆರಿಕದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಔಷಧ ತಯಾರಿಯೆಂದರೆ ನೂರೆಂಟು ಪ್ರಯೋಗ ನಡೆಯಬೇಕು, ಜತೆಗೆ ಯಥೇಚ್ಛ ಖರ್ಚು ಕೂಡ.
ಹೀಗಾಗಿ, ಮಾರಣಾಂತಿಕವಾದ ಆದರೆ ಅಷ್ಟಾಗಿ ಕಾಣಿಸಿಕೊಳ್ಳದ ಕೆಲವು ರೋಗಗಳಿಗೆ ಔಷಧ ಆವಿಷ್ಕರಿಸಲು ದೊಡ್ಡ ಕಂಪನಿಗಳು ಮುಂದಾಗುವುದಿಲ್ಲ. ಏಕೆಂದರೆ ಆವಿಷ್ಕಾರಕ್ಕೆ ತಗಲುವ ಖರ್ಚು ನಂತರ ಮಾರಾಟದಲ್ಲಿ ಹುಟ್ಟುವುದಿಲ್ಲ. ಆದರೆ
ಇಂದು ಯಾವ್ಯಾವ ರಾಸಾಯನಿಕ ಮನುಷ್ಯನ ದೇಹದ ಮೇಲೆ ಹೇಗೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವ ವಿಷಯ
ಇಲೆಕ್ಟ್ರಾನಿಕ್ ಕಡತಗಳಲ್ಲಿ ಲಭ್ಯ. ಅಂಥ ಬೃಹತ್ ಕಡತಗಳನ್ನು ಇತ್ತೀಚೆಗೆ ತಂತ್ರಜ್ಞಾನ ಕಂಪನಿಯೊಂದು ಕೃತಕ ಬುದ್ಧಿ ಮತ್ತೆಯ ತಂತ್ರಾಂಶಕ್ಕೆ ನೀಡಿ, ತನ್ಮೂಲಕ ಇಂಥ ಅಪರೂಪದ ರೋಗಕ್ಕೆ ಸಾಧ್ಯವಿರುವ ಔಷಧಗಳನ್ನು ತಯಾರಿಸಲು ಮುಂದಾಗಿ, ಹಲವು ಅಪರೂಪದ ರೋಗಕ್ಕೆ ಕಡಿಮೆ ವೆಚ್ಚದಲ್ಲಿ ಕಂಪ್ಯೂಟರ್ ನಲ್ಲೇ ಔಷಧ ಕಂಡುಹಿಡಿದು, ನಂತರ ಅದನ್ನು ಗಿನಿಪಿಗ್ಗಳು ಮತ್ತು ರೋಗಿಗಳ ಮೇಲೆ ಪ್ರಯೋಗಿಸಿ ಯಶಸ್ಸನ್ನೂ ಪಡೆಯಿತು.
ಅದೇ ಕಂಪನಿಯ ಒಂದಿಷ್ಟು ಕಂಪ್ಯೂಟರ್ ತಜ್ಞರು ಔಷಧದ ಬದಲಿಗೆ, ಬಗೆಬಗೆಯಲ್ಲಿ ಸಾವುಂಟು ಮಾಡಬಲ್ಲಂಥ (ಜೀವರಕ್ಷಣೆ ಬದಲಿಗೆ ಜೀವ ತೆಗೆಯುವ) ರಾಸಾಯನಿಕಗಳ ಕುರಿತು ಕಂಪ್ಯೂಟರ್ಗೆ ನಿರ್ದೇಶನ ನೀಡಿ ದಾಗ, ಅದರ ಪ್ರೋಗ್ರ್ಯಾಂ ೬ ತಾಸು ಓಡಿದ ನಂತರ ಸುಮಾರು ೪೦,೦೦೦ ನರ್ವ್ ಏಜೆಂಟ್ಗಳ, ಪರಮವಿಷದ ತಯಾರಿಕೆ ಹೇಗೆನ್ನುವ ಬೃಹತ್ ಕಡತವನ್ನು ಪರದೆಯ ಮೇಲೆ ಮೂಡಿಸಿತು. ಜತೆಗೆ, ತೋರಿಸಿದ ಸಾಧ್ಯತೆಗಳ ರಾಸಾಯನಿಕವನ್ನು ಶಾಲಾ ಪ್ರಯೋಗಶಾಲೆ ಯಲ್ಲಿ ತಯಾರಿಸುವಷ್ಟು ಸುಲಭ ಮಾರ್ಗಗಳನ್ನೂ ಒದಗಿಸಿತ್ತು. ನಂತರದಲ್ಲಿ ಅದನ್ನು ಗೌಪ್ಯವಾಗಿ ನಾಶಮಾಡಲಾಯಿತಂತೆ. ಒಂದೊಮ್ಮೆ, ಅಡ ನಾಡಿ ದೇಶಗಳು ಇಂಥದೇ ಕೆಲಸ ಮಾಡಿದರೆ ಅಥವಾ ಇಂಥ ಕೃತಕ ಬುದ್ಧಿಮತ್ತೆಯ ತಂತ್ರಾಂಶ ಭಯೋತ್ಪಾದಕರಿಗೆ ಸಿಕ್ಕರೆ ಏನಾಗಬಹುದು? ಇದು ಆಧುನಿಕ ಕಂಪ್ಯೂಟರಿನ ಸಾಮರ್ಥ್ಯವೆಂದು ಬೀಗುವುದಕ್ಕಿಂತ, ತಂತ್ರಜ್ಞಾನದ ಮಗ್ಗುಲಲ್ಲಿ ಏನೆಲ್ಲ ಸಾಧ್ಯ ಎಂಬುದು ಇಲ್ಲಿನ ಚರ್ಚಾವಿಷಯ.
ಇಂಥ ನರ್ವ್ ಏಜೆಂಟ್ ಗಳನ್ನು ಸಾಮೂಹಿಕವಾಗಿ ನಾಶಮಾಡಬೇಕು, ತಯಾರಿಸಬಾರದು ಎಂಬ ಒಡಂಬಡಿಕೆ ಮಾಡಿಕೊಂಡಿವೆ ಅಮೆರಿಕ, ಭಾರತ, ಇಂಗ್ಲೆಂಡ್, ಫ್ರಾನ್ಸ್, ಆಸ್ಟ್ರೇಲಿಯಾದಂಥ ದೊಡ್ಡದೇಶಗಳು. ಈ ನರ್ವ್ ಏಜೆಂಟ್ಗಳ ಕಾರ್ಯಸಾಧ್ಯತೆ ಇಷ್ಟು ಸುಲಭ ಮತ್ತು ವಿಪರೀತದ್ದಾಗಿರುವಾಗ, ಮುಂದೊಮ್ಮೆ ಏನು ಬೇಕಾದರೂ ಅನಾಚಾರವಾಗಬಹುದು. ಈ ಕಾರಣಕ್ಕೇ ರಾಸಾಯನಿಕ ಅಸ್ತ್ರವೆಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗೀಗ ಸುದ್ದಿಯಾಗುತ್ತಿರುತ್ತದೆ. ಹಿಂದೆಯೂ ಇದು ಅದೆಷ್ಟೋ ಯುದ್ಧಗಳಿಗೆ ಕಾರಣವಾಗಿದೆ, ಮುಂದೆಯೂ ಆಗಬಹುದು. ಇದೆಲ್ಲ ನಾವೇ ಕಟ್ಟಿಕೊಂಡ ಆಧುನಿಕ ಜಗತ್ತಿನ
ಭಾಗವೇ ಆಗಿದೆ ಎಂಬುದು ಇಲ್ಲಿನ ವಿಚಾರ.