L P Kulkarni Column: ಎಲಾನ್ ಮಸ್ಕ್ʼಗೆ ಟಕ್ಕರ್ ಕೊಡಲು ಚೀನಾದಲ್ಲಿ 1000 ರೊಬೊ ತಯಾರಿ
L P Kulkarni Column: ಎಲಾನ್ ಮಸ್ಕ್ʼಗೆ ಟಕ್ಕರ್ ಕೊಡಲು ಚೀನಾದಲ್ಲಿ 1000 ರೊಬೊ ತಯಾರಿ
Ashok Nayak
January 3, 2025
ತಿಳಿಯೋಣ
ಎಲ್.ಪಿ.ಕುಲಕರ್ಣಿ
ಅಮೆರಿಕದ ಭೌತಶಾಸ್ತ್ರಜ್ಞ, ಎಂಜಿನೀಯರ್ ಆಗಿದ್ದ ಜೋಸೆಫ್ ಎಫ್.ಎಂಗೆಲ್ಬರ್ಗರ್ ಅವರನ್ನು ರೊಬೊಟಿಕ್ಸ್ ನ ಪಿತಾಮಹ ಎಂದು ಕರೆಯಲಾಗುತ್ತದೆ. 1956ರ ಒಂದು ದಿನ ಎಂಗೆಲ್ಬರ್ಗರ್ ಕಾಕ್ಟೈಲ್ ಪಾರ್ಟಿಯಲ್ಲಿ ಅಮೆರಿಕನ್ ಎಂಜಿನಿಯರ್ ಮತ್ತು ಸಂಶೋಧಕ ಜಾರ್ಜ್ ಸಿ. ಡೆವೊಲ್ ಅವರನ್ನು ಭೇಟಿಯಾಗುತ್ತಾರೆ. ಅಲ್ಲಿ ಇಬ್ಬರೂ ಮಾತಿ ಗಿಳಿಯುತ್ತಾರೆ.
ಇಬ್ಬರ ತಲೆಯಲ್ಲೂ ಮಾನವನನ್ನೇ ಹೋಲುವ ಯಂತ್ರಮಾನವನನ್ನು ತಯಾರಿಸಬಹುದೇ ಎಂಬ ವಿಚಾರಗಳೇ ತುಂಬಿರುತ್ತವೆ. ಈ ಮೊದಲೇ ಜಗತ್ತಿನ ಪ್ರಖ್ಯಾತ ಸೈ ಫಿಕ್ಷನ್ ಕಥೆಗಳ, ಕಾದಂಬರಿಗಳ ರಚನಕಾರ ಐಸಾಕ್ ಅಸಿಮೋವ್ ತಮ್ಮ ಹಲವಾರು ಕಥೆಗಳಲ್ಲಿ ಕಾಲ್ಪನಿಕವಾಗಿ ರೊಬೊಟ್‌ಗಳ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ, ಆ ಕಲ್ಪನೆಗಳನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಈಗ ಎಂಗೆಲ್ಬರ್ಗರ್ ಮತ್ತು ಜಾರ್ಜ್ ಸಿ.ಡೆವೊಲ್ ಯೋಚಿಸಿ, ಯೋಜಿಸಿ ಕಾರ್ಯರೂಪಕ್ಕೆ ತರುವ ನಿರ್ಧಾರ ಮಾಡುತ್ತಾರೆ. ಅವರ ಕನಸಿನ ಕೂಸಾದ ಮೊದಲ ರೊಬೊಟ ‘ಯುನಿಮೇಟ’ ಹೊರಬರುತ್ತದೆ. ಹೀಗೆ ಈ ರೊಬೊಟ್ ಗಳ ತಯಾರಿಕೆ ಇಂದಿಗೂ ಮುಂದುವರಿಯುತ್ತಲೇ ಇದೆ.
ಟೆಸ್ಲಾ ಕಂಪನಿ ಸ್ಥಾಪಿಸಿದ ಹಾಗೂ ಹಲವು ಬಾಹ್ಯಾಕಾಶ ಪ್ರಯೋಗಗಳನ್ನು ಮಾಡುತ್ತಿರುವ ಜಗತ್ತಿನ ಪ್ರತಿಭಾನ್ವಿತ ಶ್ರೀಮಂತ ಉದ್ಯಮಿ ಎಲಾನ್ ಮ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಅವರೀಗ ಹ್ಯುಮನಾಯ್ಡ ರೊಬೋಟ್‌ಗಳನ್ನು ತಯಾರಿಸುವಲ್ಲೂ ಬ್ಯುಜಿಯಾಗಿದ್ದಾರೆ. ಸದ್ಯ, ಈ ಮಗೆ ಟಕ್ಕರ್ ಕೊಡಲು ಚೀನಾದ ರೊಬೊಟಿಕ್ಸ್ ಕಂಪನಿ ಯೊಂದು ಸಾಕಷ್ಟು ರೊಬೊಗಳನ್ನು ತಯಾರಿಸಿ ಸುದ್ದಿಯಲ್ಲಿದೆ.
ಚೀನಾದ ಶಾಂಘೈನಲ್ಲಿ 2023 ರ ಫೆಬ್ರವರಿಯಲ್ಲಿ ಪೆಂಗ್ ಝಿಹುಯಿ ಅವರ ನೇತೃತ್ವದಲ್ಲಿ ಸ್ಥಾಪನೆಗೊಂಡ ‘ಅಗಿಬಾಟ’ ಕಂಪನಿ ಜಗತ್ತಿನ ಪ್ರತಿಷ್ಟಿತ ಸ್ಟರ್ಟ್‌ಅಪ್ ಕಂಪನಿಯಗಳ ಸಾಲಿಗೆ ಸೇರಿದೆ. ಈ ಅಗಿಬಾಟ, ಜಿಯುವಾನ್ ರೊಬೊಟಿP ಎಂದೂ ಕರೆಯಲ್ಪಡುತ್ತದೆ. 2024ರ ಅಂತ್ಯದ ವೇಳೆಗೆ 1000 ಹುಮ ನಾಯ್ಡ ರೋಬೋಟ್‌ಗಳನ್ನು ಉತ್ಪಾದಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಮುಟ್ಟಿ ಹುಮನಾಯ್ಡ ರೊಬೊಟಿಕ್ಸ್ ಉದ್ಯಮದಲ್ಲಿ ಅಲೆಗಳನ್ನು ಸೃಷ್ಟಿಸುತ್ತಿದೆ.
ಫೆಬ್ರವರಿ 2023 ರಲ್ಲಿ Huawei ಜೀನಿಯಸ್ ಯೂತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೆಂಗ್ ಝಿಹುಯಿ ಸ್ಥಾಪಿಸಿ ದರು, ಕಂಪನಿಯು ಈಗಾಗಲೇ ತನ್ನ ಶಾಂಘೈ ಸೌಲಭ್ಯದಲ್ಲಿ 960 ಘಟಕಗಳನ್ನು ತಯಾರಿಸಿದೆ. Agibotನ ಪ್ರಮುಖ ರೊಬೊಟ್ ಮಾದರಿಗಳಾದ ರೈಸ್ ಅ೧ ಮತ್ತು ಯುವಾನ್‌ಜೆಂಗ್ ಅ2, ದೇಶೀಯ ಕೆಲಸಗಳಿಂದ ಹಿಡಿದು ಕೈಗಾರಿಕಾ ಕಾರ್ಯಗಳವರೆಗೆ ವಿವಿಧ ಅಪ್ಲಿಕೇಶನ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
ಕಂಪನಿಯು ತನ್ನ ರೋಬೋಟ್‌ಗಳ ಕಾರ್ಯವನ್ನು ಹೆಚ್ಚಿಸಲು ದತ್ತಾಂಶ ಸಂಗ್ರಹ ಕಾರ್ಖಾನೆಯನ್ನು ಸ್ಥಾಪಿಸಿದೆ; ಬಟ್ಟೆಗಳನ್ನು ಮಡಚುವುದು ಮತ್ತು ಸ್ವಚ್ಛಗೊಳಿಸುವಂತಹ ನೈಜ ಕೆಲಸಗಳನ್ನು ಈ ರೊಬೊಟ್‌ಗಳು ಮಾಡುತ್ತಿವೆ. ಅದರ ಆಪ್ಟಿಮಸ್ ರೋಬೋಟ್‌ನ ಸಾಮೂಹಿಕ ಉತ್ಪಾದನೆಗೆ 2026 ಅನ್ನು ಗುರಿಪಡಿಸುವ ಟೆಸ್ಲಾದಂತಹ ಅದರ ಯುಎಸ್ ಕೌಂಟರ್‌ಪಾರ್ಟ್‌ಗಳಿಗಿಂತ ಭಿನ್ನವಾಗಿ, ಅಗಿಬಾಟ್ ಓಟದಲ್ಲಿ ಮುಂದಿದೆ. ಚೀನಾದ ಫೆರಿಯರ್ ಇಂಟೆಲಿ ಜೆನ್ಸ್ ಸಹ ಈ ದೆಸೆಯಲ್ಲಿ ಮುಂದಿದೆ.
ರೈಸ್ ಅ1 ಹುಮನಾಯ್ಡ್ ರೋಬೋಟ್, ಉದಾಹರಣೆಗೆ, 49 ಡಿಗ್ರಿ ಸ್ವತಂತ್ರವಾಗಿ ತಿರುಗುವ, ಸುಧಾರಿತ ಅಐ- ಲಿತ ಸಂವೇದಕಗಳೊಂದಿಗೆ ಸಜ್ಜುಗೊಂಡಿದೆ. ದಾರದಿಂದ ಕೂಡಿದ ಬಟ್ಟೆ ಹೊಲಿಯುವ ಸೂಜಿಗಳು ಅಥವಾ ಬೋಲ್ಟ್ ಬಿಗಿಗೊಳಿಸುವಿಕೆ ಯಂತಹ ಸಂಕೀರ್ಣವಾದ ಕಾರ್ಯಗಳನ್ನು ಸಹ ಈ ರೊಬೊಗಳು ಮಾಡುತ್ತವೆ. ಅಮೆರಿಕದ ಸಂಸ್ಥೆಗಳು ಚಿಪ್ ತಯಾರಿಕೆ ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ ಉತ್ಕೃಷ್ಟವಾಗಿದ್ದರೆ, Agibot ನಂತಹ ಚೀನೀ ಕಂಪನಿಗಳು ಚಲನೆಯ ನಿಯಂತ್ರಣ, ಅಐಮತ್ತು ವೈವಿಧ್ಯಮಯ ಅಪ್ಲಿಕೇಶನ್ ಗಳಲ್ಲಿ ದಾಪುಗಾಲಿಟ್ಟಿವೆ. ವೇಗವಾಗಿ ಬೆಳೆಯುತ್ತಿರುವ ರೊಬೊಟಿಕ್ಸ್ ಮಾರುಕಟ್ಟೆಯಲ್ಲಿ ಜಾಗತಿಕ ಸ್ಪರ್ಧಿಗಳಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿವೆ.
ಇದನ್ನೂ ಓದಿ: Aneesh B Column; ಕನ್ನಡ ಅಂದರೆ GenZ ಗಳಿಗೇಕೆ ಹಿಂಜರಿಕೆ?