ಸಾಲ ಪಡೆಯುವವರ ಸಂಖ್ಯೆ ಶೇ.67ಕ್ಕೆ ಹೆಚ್ಚಳ
ಮಹಾನಗರಗಳ ಪೈಕಿ ಬೆಂಗಳೂರಿಗರೇ ಹೆಚ್ಚು
ವಿಶೇಷ ವರದಿ: ಸುಷ್ಮಾ ಸಿ. ಚಿಕ್ಕಕಡಲೂರು ಬೆಂಗಳೂರು
ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗರು ಕೊಂಡು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ ಎಂಬ ವಚನವೇ ಇದೆ. ಆದರೂ, ರಾಜಧಾನಿ ಮಂದಿಗೆ ಸಾಲವೆಂದರೆ ಅಚ್ಚುಮೆಚ್ಚು ಎನ್ನುತ್ತಿವೆ ವರದಿಗಳು.
ಕರೋನಾ ಎರಡನೇ ಅಲೆ ಬಳಿಕ ಬೆಂಗಳೂರು ನಗರದಲ್ಲಿ ಸಾಲ ಪಡೆಯುವವರ ಸಂಖ್ಯೆ ಶೇ.67 ರಷ್ಟು ಹೆಚ್ಚಾಗಿದೆ ಎಂಬ ಮಾಹಿತಿ ಹೋಮ್ ಕ್ರೆಡಿಟ್ ಇಂಡಿಯಾ ನಡೆಸಿರುವ ವಾರ್ಷಿಕ ಸಮೀಕ್ಷೆ ‘ಹೌ ಇಂಡಿಯಾ ಬಾರೋಸ್- 2021’ ವರದಿಯಲ್ಲಿ ಲಭ್ಯವಾಗಿದೆ. ಕರೋನಾ ಎರಡನೇ ಅಲೆಯ ಬಳಿಕ, ಗ್ರಾಹಕರು ಸಾಲದ ಮೊರೆ ಹೋಗುತ್ತಿರುವುದು ಗಣನೀಯವಾಗಿ ಹೆಚ್ಚಾಗು ತ್ತಿದೆ. ಗ್ರಾಹಕರ ಭಾವನೆಗಳು ಸಕಾರಾತ್ಮಕ ಮನೋಭಾವಕ್ಕೆ ಮರಳಿದ್ದು, ಸಾಲ ಪಡೆದಿದ್ದರಿಂದ ಖರೀದಿ ಹೆಚ್ಚಾಗಿ, ಆರ್ಥಿಕತೆ ಸಹಜ ಸ್ಥಿತಿಗೆ ಮರಳುತ್ತಿದೆ ಎಂಬುದು ದೃಢಪಟ್ಟಿದೆ.
2020ಕ್ಕೆ ಹೋಲಿಸಿದರೆ ಸಾಲ ಪಡೆಯುವವರ ಪ್ರಮಾಣ ಶೇ.50 ರಷ್ಟು ಏರಿಕೆಯಾಗಿದೆ. ಮನೆ ನಿರ್ವಹಣೆಗೆ ಸಾಲ ಪಡೆಯುವವರ ಸಂಖ್ಯೆ ಗಣನೀಯ ಇಳಿಕೆಯಾಗಿದ್ದು, 2020ರಲ್ಲಿ ಶೇ.85ರಷ್ಟು ಇದ್ದ ಮನೆ ನಿರ್ಮಾಣ ಸಾಲ, 2021ರಲ್ಲಿ ಕೇವಲ ಶೇ.60ಕ್ಕೆ ಇಳಿದಿದೆ.
ಆನ್ಲೈನ್ನಲ್ಲಿಯೇ ಹೆಚ್ಚು ಸಾಲ ಶೇ.40ರಷ್ಟು ಸಾಲಗಾರರು ಡಿಜಿಟಲ್ ಪ್ಲಾಟ್ ಫಾರ್ಮ್ ಗಳ ಮೊರೆ ಹೋಗುತ್ತಿದ್ದಾರೆ. ಅಂದರೆ, ಈಗಾಗಲೇ ಜಾಗೃತರಾಗಿರುವ ಶೇ.15 ಕ್ಕಿಂತ ಹೆಚ್ಚು ಗ್ರಾಹಕರು ಸಾಂಪ್ರದಾಯಿಕ ಆಫ್ಲೈನ್ ಚಾನೆಲ್ಗಳ ಬದಲಿಗೆ ಆನ್ಲೈನ್ ಸಾಲ ಪ್ರಯಾಣಕ್ಕೆ ಒಲವು ತೋರಿಸಿದ್ದಾರೆ. ತಂತ್ರeನವು ಒಂದು ಪ್ರಮುಖ ಅಸವಾಗಿದ್ದರೂ, ಎಲ್ಲ ಡಿಜಿಟಲ್ ಟ್ರೆಂಡ್ ಗಳಂತೆ, ಯುವ ಗ್ರಾಹಕರಿಗೆ ಚಾಟ್ಬಾಟ್ ಪರಿಚಯ ಮತ್ತು ಅದರ ಮೇಲಿನ ನಂಬಿಕೆಯು ಡಿಜಿಟಲ್ ವೇದಿಕೆಯನ್ನು ಮುನ್ನಡೆಸುತ್ತದೆ ಎಂಬುದನ್ನು ಸಮೀಕ್ಷೆಯ ಸಂಶೋಧನೆಗಳು ಬಹಿರಂಗ ಪಡಿಸಿವೆ.
***
ಹೆಚ್ಚು ಜನರು ಬ್ಯುಸಿನೆಸ್ ಅಭಿವೃದ್ಧಿ, ಮನೆ ನವೀಕರಣ ಅಥವಾ ಇತರ ಕಾರಣಗಳಿಗೆ ಸಾಲ ಪಡೆಯಲು ಮುಂದಾಗಿದ್ದಾರೆ. ಆನ್ಲೈನ್ ಮೂಲಕ ಸಾಲ ಪಡೆಯಲು ಮುಂದಾಗಿರುವುದರಿಂದ ಡಿಜಟಲೀಕರಣ ಪ್ರಕ್ರಿಯೆ ವೇಗವಾಗಿ ಬೆಳೆಯುತ್ತಿದೆ.
– ವಿವೇಕ್ ಕುಮಾರ್ ಸಿನ್ಹಾ ಹೋಮ್ ಕ್ರೆಡಿಟ್ ಇಂಡಿಯಾ ಮಾರುಕಟ್ಟೆ ಮುಖ್ಯ ಅಧಿಕಾರಿ