ಸತತ ಮಳೆಯಿಂದಾಗಿ ಮನೆಯಿಂದ ಹೊರಬರದ ಜನರು
ನೈಟ್ ಕರ್ಫ್ಯೂ ಸಡಿಲವಾದರೂ ಕಳೆಗಟ್ಟದ ನೈಟ್ ಲೈಫ್
ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು
ನೈಟ್ ಕರ್ಫ್ಯೂ ಸಡಿಲಗೊಳಿಸಿದರೂ ರಾಜಧಾನಿ ಜನರ ವೀಕೆಂಡ್ ನೈಟ್ಲೈರ್ಫ್ಯೂ ಮೋಜು ಮಸ್ತಿಗೆ ಮಳೆರಾಯ ತಣ್ಣೀರು ಸುರಿದಿದ್ದಾನೆ. ಸತತ ಮಳೆ ಮತ್ತು ಚಳಿಗೆ ಜನ ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ.
ಕಳೆದ ಎರಡು ವರ್ಷದಿಂದ ಕರೋನಾ ಮಾರ್ಗಸೂಚಿಯಡಿಯಲ್ಲಿ ಕಾರ್ಯನಿರ್ವಹಿಸು ತ್ತಿದ್ದ, ಬೆಂಗಳೂರಿನ ಕ್ಲಬ್, ರೆಸ್ಟೋ ರೆಂಟ್, ಪಾರ್ಟಿಗಳಲ್ಲಿನ ಮೋಜು ಮಸ್ತಿ ನೈಟ್ ಕರ್ಫ್ಯೂ ಸಡಿಲಿಕೆ ನಂತರ ಗರಿಗೆದರಬಹುದು ಎಂಬ ನಿರೀಕ್ಷೆ ಎಲ್ಲರದಾಗಿತ್ತು. ನೈಟ್ ಕರ್ಫ್ಯೂ ಸಡಿಲಗೊಂಡ ದಿನದಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ಬೆಂಗಳೂರು ನಗರದಲ್ಲಿ ವಿಪರೀತ ಚಳಿ ವಾತಾವರಣ ನಿರ್ಮಾಣವಾಗಿದೆ.
ಮಳೆಯ ಭಯ ಮತ್ತು ಚಳಿಯಿಂದ ಜನರು ಮನೆಯಿಂದ ಹೊರಬರುತ್ತಿಲ್ಲ. ಹೀಗಾಗಿ, ನಗರದ ನೈಟ್ಲೈರ್ಫ್ಯೂ ಕಳೆಗುಂದಿದೆ. ರಾಜ್ಯದಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾದ ಹಿನ್ನೆಲೆಯಲ್ಲಿ ಸರಕಾರ ನೈಟ್ ಕರ್ಫ್ಯೂ ಆದೇಶವನ್ನು ನ. 5ರಿಂದ ಹಿಂಪಡೆದಿದೆ. ೨ನೇ ಅಲೆ ವೇಳೆ ಜನರನ್ನು ಸೋಂಕಿನಿಂದ ರಕ್ಷಿಸಲು ಸರಕಾರ ಹಲವಾರು ನಿಯಮಗಳನ್ನು ಜಾರಿಗೊಳಿಸಿತ್ತು. ಇವುಗಳ ನಡುವೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ರಾಜ್ಯದಲ್ಲಿ ನೈರ್ಟ್ ಕರ್ಫ್ಯೂ ಜಾರಿಯಲ್ಲಿತ್ತು.
ಈ ಸಂದರ್ಭದಲ್ಲಿ ಬಾರ್, ರೆಸ್ಟೋರೆಂಟ್ಗಳನ್ನು ತೆರೆಯಲು ಅವಕಾಶ ಒದಗಿಸಿರಲಿಲ್ಲ. ಹೊಟೇಲ್ಗಳು ಕೇವಲ ಪಾರ್ಸಲ್ ನೀಡಲಷ್ಟೇ ಅವಕಾಶವಿತ್ತು. ಆದರೆ, ಯಾವುದೇ ಮೋಜು ಮಸ್ತಿಗೆ ಅವಕಾಶವಿರಲಿಲ್ಲ. ರಾತ್ರಿ ಅಗತ್ಯ ಸಂದರ್ಭ ಹೊರತುಪಡಿಸಿ ಉಳಿದಂತೆ ವಾಹನಗಳ ಓಡಾಟಕ್ಕೂ ನಿಬಂಧ ವಿಧಿಸಿತ್ತು. ಇದೀಗ ಈ ಎಲ್ಲ ನಿಬಂಧ ಸಡಿಲ ಗೊಂಡಿದ್ದರು. ಚಳಿ ಮತ್ತು ಮಳೆಯ ಕಾರಣಕ್ಕೆ ಯಾರೂ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ.
ಮೆಟ್ರೋ ಪ್ರಯಾಣ ಸಮಯ ವಿಸ್ತರಣೆ: ನವೆಂಬರ್ ೧೮ರಿಂದ ರಾಜಧಾನಿಯಲ್ಲಿ ಮೆಟ್ರೋ ಓಡಾಟವನ್ನು ಕರೋನಾ ಆರಂಭಕ್ಕೆ ಮುಂಚಿನ ವೇಳಾಪಟ್ಟಿಯಂತೆ ಸಂಚರಿಸಲು ತೀರ್ಮಾನಿಸಲಾಗಿದೆ. ಲಾಕ್ಡೌನ್ ಆದಾಗಿನಿಂದ ಮೆಟ್ರೋ ರೈಲು ಸಂಚಾರ ಸ್ಥಗಿತವಾಗಿತ್ತು.
ನಂತರ ಹಂತಹಂತವಾಗಿ ಸಮಯ ವಿಸ್ತರಣೆ ಮಾಡಿದರೂ, ನೈಟ್ಲೈಫ್ ಗೆ ಸ್ವತಃ ವಾಹನದಲ್ಲಿ ಓಡಾಟ ನಡೆಸುವುದಕ್ಕಿಂತ ಮೆಟ್ರೋ ಪ್ರಯಾಣ ಸೂಕ್ತ ಎಂಬ ಪರಿಸ್ಥಿತಿ ಇತ್ತು. ಈ ಹಿನ್ನೆಲೆಯಲ್ಲಿ ಮೆಟ್ರೋ ಸಮಯವನ್ನು ವಿಸ್ತರಣೆ ಮಾಡಿ ರಾತ್ರಿ 11.30 ರವರೆಗೆ ಮೆಟ್ರೋ ಸಂಚಾರವನ್ನು ವಿಸ್ತರಣೆ ಮಾಡಲಾಯಿತು.
ಆ ಮೂಲಕ ನಗರದ ನೈಟ್ಲೈಫ್ ಗೆ ಮರುಚಾಲನೆ ನೀಡುವ ಉದ್ದೇಶ ಸರಕಾರಕ್ಕಿತ್ತು. ಆದರೆ, ಮೆಟ್ರೋ ವಿಸ್ತರಣೆ ನಂತರವೂ ನೈಟ್ಲೈಫ್ ಗೆ ಪೂರಕವಾದ ವಾತಾವರಣ ನಗರದಲ್ಲಿ ಸೃಷ್ಟಿಯಾಗಿಲ್ಲದಿರುವುದು ನೈಟ್ ಲೈಫ್ ವಹಿವಾಟು ನೆಚ್ಚಿಕೊಂಡಿದ್ದ ವರಿಗೆ ನಷ್ಟವನ್ನುಂಟು ಮಾಡಿದೆ.
ಚಳಿಗೆ ಹೊರಬರದ ಯುವಜನತೆ: ನೈಟ್ ಕರ್ಫ್ಯೂ ಸಂಪೂರ್ಣ ತೆರವಾಗಿದ್ದರೂ, ನೈಟ್ಲೈಫ್ ಗೆ ಅಗತ್ಯ ಸಂಚಾರ ವ್ಯವಸ್ಥೆ ಇದ್ದರೂ, ಸತತವಾಗಿ ಹತ್ತು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತು ಅದರಿಂದ ನಗರದಲ್ಲಿ ಉಂಟಾಗಿರುವ ಚಳಿಯ ವಾತಾ ವರಣ ಮನೆಯಿಂದ ಹೊರಬಂರದಂತೆ ಮಾಡಿದೆ. ಮಲೆನಾಡು ಮತ್ತು ಊಟಿ, ಮಡಿಕೇರಿಯ ವಾತಾವರಣ ಬೆಂಗಳೂರಿ
ನಲ್ಲಿದೆ. ಅನಿವಾರ್ಯವಾಗಿ ತಮ್ಮ ನಿತ್ಯದ ಕೆಲಸಗಳಿಗೆ ತೆರಳುವವರನ್ನು ಹೊರತುಪಡಿಸಿ ಬಹುತೇಕರು ಮನೆಯಿಂದ ಹೊರಗೆ ಬರುತ್ತಿಲ್ಲ.
ಅನೇಕ ವಹಿವಾಟು ಸ್ಥಗಿತಗೊಂಡಿದ್ದು, ಮನೆಯಲ್ಲಿ ಕಾಲ ಕಳೆಯುವವರ ಸಂಖ್ಯೆ ಹೆಚ್ಚಾಗಿದೆ. ಚಳಿ ಜತೆಗೆ, ಹೊರಗೆ ಬಂದ
ಸಂದರ್ಭದಲ್ಲಿ ಮಳೆ, ರಸ್ತೆಗಳ ಅವಾಂತರ, ಮರ ಬೀಳುವುದು ಇಂತಹ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಅಪಾಯವಿದ್ದು, ನೈಟ್ ಲೈ-, ಮೋಜು ಮಸ್ತಿಯಂತಹ ಸಾಹಸಕ್ಕೆ ಯಾರೂ ಕೈ ಹಾಕುತ್ತಿಲ್ಲ.
ಪಬ್, ರೆಸ್ಟೋರೆಂಟ್ ಮಾಲೀಕರಿಗೆ ಸಂಕಷ್ಟ
ಬ್ರಿಗೇಡ್ ರಸ್ತೆ, ಮಹಾತ್ಮ ಗಾಂಧಿ ರಸ್ತೆ, ಫುಡ್ ಸ್ಟ್ರೀಟ್ನಂತರ ನೈಟ್ಲೈಫ್ ಜೀವನಶೈಲಿ ಸ್ಥಳಗಳಲ್ಲಿ ವಹಿವಾಟು ನಡೆಸುವ ವ್ಯಾಪಾರಸ್ಥರಿಗೆ ಕಳೆದ ಎರಡು ವರ್ಷಗಳಿಂದ ವ್ಯಾಪಾರ ಇಲ್ಲದಂತಾಗಿತ್ತು. ಸರಕಾರ ಕರೋನಾ ಪ್ರಕರಣ ಕಡಿಮೆಯಾಗುತ್ತಿದ್ದಂತೆ ನೈಟ್ ಕರ್ಫ್ಯೂ ತೆರವು ಮಾಡುತ್ತಿದ್ದಂತೆ, ತಮ್ಮ ವಹಿವಾಟು ಸುಧಾರಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ಈ ವ್ಯಾಪಾರಸ್ಥರು ಇದ್ದರು. ಆದರೆ, ಸತತವಾಗಿ ಹತ್ತು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಯಾರೂ ಮನೆಯಿಂದ ಹೊರಬರುತ್ತಿಲ್ಲ. ನೈಟ್ ಪಾರ್ಟಿಗಳು, ಕ್ಲಬ್ಗಳಲ್ಲಿ ಜನ ಸೇರುತ್ತಿಲ್ಲ.
ರೆಸ್ಟೋರೆಂಟ್ಗಳಿಗೆ ಆಗಮಿಸುವ ಜನರ ಸಂಖ್ಯೆಯೂ ಕಡಿಮೆ ಸಂಖ್ಯೆಯಲ್ಲಿದೆ. ರಾತ್ರಿಯೆಲ್ಲ ಮಳೆ ಸುರಿಯುತ್ತಿರುವುದರಿಂದ ಅನೇಕ ರೆಸ್ಟೋರೆಂಟ್ಗಳು ಖಾಲಿ ಹೊಡೆಯುತ್ತಿದೆ. ಹೀಗಾಗಿ, ಚೇತರಿಕೆಯ ಆಸೆಯಲ್ಲಿದ್ದ ಹೋಟೆಲ್ ಮಾಲೀಕರಿಗೆ ಭಾರಿ ನಿರಾಸೆಯಾಗಿದೆ. ಇನ್ನು ಮಳೆಯೆಲ್ಲ ನಿಂತು ಚಳಿಯ ಪ್ರಮಾಣ ಕಡಿಮೆಯಾದ ನಂತರ ನೈಟ್ಲೈಫ್ ಗರಿಗೆದರಬಹುದು ಎನ್ನಲಾಗುತ್ತಿದೆ.
ನ. 5ರಿಂದ ನೈಟ್ ಕರ್ಫ್ಯೂ ತೆರವುಗೊಳಿಸಿದ ಸರಕಾರ
ನ. 18ರಿಂದ ಮೆಟ್ರೋ ಸಂಚಾರ 11.30ರವರೆಗೆ ವಿಸ್ತರಣೆ
ನ.19ರಿಂದ ಬಿಎಂಟಿಸಿ ಬಸ್ ಗಳ ರಾತ್ರಿ ಸಂಚಾರ ಆರಂಭ
ಆದರೂ ಡಲ್ ಹೊಡೆಯುತ್ತಿದೆ ವೀಕೆಂಡ್, ನೈಟ್ ಲೈಫ್
ಚಳಿ, ಮಳೆಗೆ ಥಂಡಾ ಹೊಡೆದು ಕುಳಿತಿರುವ ನಗರದ ಜನತೆ
ನಷ್ಟದ ಭೀತಿಯಲ್ಲಿ ಪಬ್, ರೆಸ್ಟೋರೆಂಟ್ ಮಾಲೀಕರು.