Tuesday, 28th May 2024

ಗುಡ್ ನ್ಯೂಸ್ ಕೊಡಲಿದ್ದಾರೆ ಅಕ್ಷಯ್ ಕುಮಾರ್

ಬಾಲಿವುಡ್ ಸ್ಟಾಾರ್‌ಅಕ್ಷಯ್ , ಈ ವರ್ಷ ಈಗಾಗಲೇ ಎರಡು ಸಿನಿಮಾಗಳನ್ನು ಮಾಡಿದ್ದಾರೆ. ’ಮಿಷನ್ ಮಂಗಲ್’ ದೊಡ್ಡ ಹಿಟ್ ಆದ್ರೆೆ, ’ಹೌಸ್ ಫುಲ್ 4’ ಹಾಸ್ಯದ ಹೊನಲನ್ನೇ ಹರಿಸಿದ್ದ, ನೋಡುಗರನ್ನು ನಕ್ಕು ನಗಿಸಿದೆ. ಇದೀಗ ಅಕ್ಷಯ್ ಕುಮಾರ್ ನಟನೆಯ ಮತ್ತೊೊಂದು ಸಿನಿಮಾ ಇದೇ ವರ್ಷ ಬರುತ್ತಿಿದೆ. ’ಗುಡ್ ನ್ಯೂಸ್’ ಅಕ್ಷಯ್ ಕುಮಾರ್ ಹೊಸ ಸಿನಿಮಾ. ಈ ಸಿನಿಮಾ ಡಿಸೆಂಬರ್ 27 ರಂದು ಬಿಡುಗಡೆ ಆಗುತ್ತಿಿದೆ. ಸಿನಿಮಾ ಪೋಸ್ಟರ್‌ಗಳು ಬಿಡುಗಡೆಯಾಗಿದ್ದು ಕುತೂಹಲವನ್ನೂ ಕೆರಳಿಸುತ್ತಿಿವೆ. ನಟ ಕುಮಾರ್ ತಮ್ಮ ಟ್ವಿಿಟ್ಟರ್ ಖಾತೆಯಲ್ಲಿ ಸಿನಿಮಾ ಪೋಸ್ಟರ್ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಹಾಗೂ ದಿಲ್ಜಿಿತ್ ನಟಿಸಿದ್ದಾರೆ. ಚಿತ್ರದ ಪೋಸ್ಟರ್ ಒಮ್ಮೆೆ ನೋಡಿದರೆ ಇವರಿಬ್ಬರು ತಂದೆ ಆಗಿದ್ದಾರೆ ಎನ್ನುವುದು ಪಕ್ಕಾಾ ಎನ್ನಬಹದು. ಅದೇ ಗುಡ್ ನ್ಯೂಸ್ ಅಂತೆ. ಇದು ಪೋಸ್ಟರ್ ಮೂಲಕ ತಿಳಿಯುತ್ತಿಿದೆ. ಕರೀನಾ ಕಪೂರ್ ಹಾಗೂ ಕೈರಾ ಅಡ್ವಾಾಣಿ ಸಿನಿಮಾದ ನಾಯಕಿಯರು. ಇವರು ಗರ್ಭಿಣಿಯಾದ ಫೋಟೋ ಪೋರ್ಸ್ಟ ನಲ್ಲಿ ಇದೆ.

ಅಕ್ಷಯ್ ಗೆ ಕರೀನಾ ಜೋಡಿಯಾಗಿ, ದಿಲ್ಜಿಿತ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿಿದ್ದಾರೆ. ಧರ್ಮ ಪ್ರೊೊಡಕ್ಷನ್ ನಲ್ಲಿ ಸಿನಿಮಾ ನಿರ್ಮಾಣ ಆಗಿದೆ. ರಾಜ್ ಮೆಹ್ತಾಾ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಏಪ್ರಿಿಲ್ ನಲ್ಲಿ ಸಿನಿಮಾದ ಚಿತ್ರೀಕರಣ ಮುಗಿದಿದೆ. ವೀರ್ ದಿ ವೆಡ್ಡಿಿಂಗ್’ ನಂತ ಕರೀನಾ ಯಾವ ಚಿತ್ರದಲ್ಲೂ ಕಾಣಿಸಿಕೊಳ್ಳಲಿಲ್ಲ. ಆ ಸಿನಿಮಾದ ನಂತರ ಕರೀನಾ ಈ ಸಿನಿಮಾದಲ್ಲಿ ನಟಿಸುತ್ತಿಿದ್ದಾರೆ. ಸಿನಿಮಾದ ಕಥೆಯೂ ಕೂಡ ಕುತೂಹಲವಾಗಿದೆಯಂತೆ ಜತೆಗೆ ಕಾಮಿಡಿಯನ್ನೂ ಹೊತ್ತುತರಲಿದೆ ಎನ್ನುವುದು ಚಿತ್ರ ತಂಡದ ಅಭಿಮತ. ಕ್ರಿಿಸ್‌ಮಸ್ ಹಬ್ಬದಂದು ‘ಗುಡ್‌ನ್ಯೂಸ್’ ಸಿನಿಮಾ ಬಿಡುಗಡೆ

Leave a Reply

Your email address will not be published. Required fields are marked *

error: Content is protected !!