Sunday, 23rd June 2024

ಅಗಲಿಕೆಯ ನೆನಪಲ್ಲಿ ಐರಾ

ರಾಜ್ ಉದಯ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ‘ಐರಾ’ ಚಿತ್ರದ ಮುಹೂರ್ತದ ಕಾರ್ಯಕ್ರಮ ಬನಶಂಕರಿಯಲ್ಲಿ ನೆರವೇರಿತು. ಆ್ಯಕ್ಸನ್ ಪ್ರಿಿನ್‌ಸ್‌ ಧ್ರುವಸರ್ಜಾ ಚಿತ್ರದ ಮುಹೂರ್ತದ ದೃಶ್ಯಕ್ಕೆ ಆರಂಭ ಫಲಕ ತೋರಿಸಿದರು. ನಿರ್ಮಾಪಕರ ತಾಯಿ ಕ್ಯಾಾಮರಾ ಚಾಲನೆ ಮಾಡಿದರು. ನಿರ್ದೇಶಕ ರಾಜ್ ಉದಯ್, ಛಾಯಾ ಧೀರನ್ ಹಾಗೂ ‘ಭಜರಂಗಿ-2’ ಚಿತ್ರಗಳಲ್ಲಿ ವಿಲನ್ ಆಗಿ ಅಭಿನಯಿಸಿದ್ದಾಾರೆ. ಈಗ ‘ಐರಾ’ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.

ರಾಜ್ ಉದಯ್ ತನ್ನ ಬಾಮೈದುನನ ಅಗಲಿಕೆಯ 3 ವರ್ಷಗಳ ಸ್ಮರಣೆಗಾಗಿ ಈ ಚಿತ್ರವನ್ನು ಮಾಡಿ ಅರ್ಪಿಸಲಿದ್ದಾಾರೆ. ಕರ್ನಾಟಕ ಹಾಗೂ ಕೇರಳ ಸೇರಿದಂತೆ ಹಲವಾರು ಲೊಕೇಶನ್‌ಗಳಲಿ 45 ದಿನಗಳ ಕಾಲ ಈ ಚಿತ್ರದ ಶೂಟಿಂಗ್ ನಡೆಸುವ ಪ್ಲಾಾನ್ ಚಿತ್ರತಂಡಕ್ಕಿಿದೆ. ನವೆಂಬರ್ 7ಕ್ಕೆೆ ಅನಿಲ್ ಉದಯ್ ದುರಂತ ನಡೆದು 3 ವರ್ಷಗಳಾಗುತ್ತದೆ. ಅವರಿಗೆ ಈ ಚಿತ್ರವನ್ನು ಅರ್ಪಣೆ ಮಾಡುವುದಾಗಿ ನಿರ್ದೇಶಕ ರಾಜ್‌ಉದಯ್ ತಿಳಿಸಿದರು.

ಶ್ರೀ ಅಂಗಳಾ ಪರಮೇಶ್ವರಿ ಮೂವಿ ಮೇಕರ್‌ಸ್‌ ಲಾಂಛನದಲ್ಲಿ ಮಿರುನಾಳಿನಿ ನಾಯ್ಕರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆೆ ವಿಘ್ನೇಶ್ ನಾಗೇಂದ್ರನ್ ಛಾಯಾಗ್ರಹಣ, ಕೌಶಿಕ್ ಹರ್ಷ ಸಂಗೀತ, ಶ್ರೀಕಾಂತ್ ಸಂಕಲನ, ಭೂಷಣ್ ನೃತ್ಯ ನಿರ್ದೇಶನ ಕುಂಗ್ ಫೂ. ಚಂದ್ರು ಸಾಹಸ, ಅಶೋಕ್‌ದೇವ್ ಸಹಕಾರ ನಿರ್ದೇಶನವಿದೆ. ತಾರಾಬಳಗದಲ್ಲಿ ಶಿವು, ಕಾರ್ತಿ, ಅಕ್ಷತಾ ಇದ್ದಾಾರೆ, ಉಳಿದ ತಾರಾಬಳಗದ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!