Actor Fawad Khan: ಪಾಕ್ ನಟ ಫವಾದ್ ಖಾನ್ ನಟನೆಯ ಚಿತ್ರಕ್ಕೆ ಭಾರೀ ವಿರೋಧ! ಕಾರಣ ಏನು?
ಪಾಕ್ ನಟ ಫವಾದ್ ಖಾನ್(Actor Fawad Khan) ಅಬೀರ್ ಗುಲಾಲ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದೆ. ಇದರ ಬೆನ್ನಲ್ಲೆ ಇದೀಗ ಚಿತ್ರ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಮಹಾರಾಷ್ಟ್ರ ನವನಿರ್ಮಾಣ ಸೇನೆಯು (MNS) ಮಹಾರಾಷ್ಟ್ರದಲ್ಲಿ ಚಿತ್ರ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ.


ನವದೆಹಲಿ: ಫವಾದ್ ಖಾನ್(Actor Fawad Khan) ಮತ್ತು ವಾಣಿ ಕಪೂರ್ ಅಭಿನಯದ ಅಬೀರ್ ಗುಲಾಲ್ (Abir Gulaal) ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಬಹಳಷ್ಟು ಕುತೂಹಲ ಕೆರಳಿಸುತ್ತಿದೆ. ಈ ಮೂಲಕ ಪಾಕಿಸ್ತಾನಿ ಸೂಪರ್ ಸ್ಟಾರ್ ಫವಾದ್ ಖಾನ್ ಬಾಲಿವುಡ್ ಗೆ ಕಂಬ್ಯಾಕ್ ಆಗಿದ್ದಾರೆ. ಕಳೆದ ವರ್ಷದಿಂದಲೇ ಈ ಸಿನಿಮಾ ಅನೇಕ ಗಾಸಿಪ್ ಹುಟ್ಟು ಹಾಕಿದ್ದು ಇದೀಗ ಟೀಸರ್ ಬಿಡುಗಡೆಯಾಗಿ ಚಿತ್ರದ ರಿಲೀಸ್‌ಗೂ ರೆಡಿಯಾಗಿದೆ. ಟೀಸರ್ ನಲ್ಲಿ ಕಥೆಯ ಲವ್ ಸ್ಟೋರಿಯಲ್ಲಿ ವಾಣಿ ಮತ್ತು ಫವಾದ್ ಕೆಮಿಸ್ಟ್ರಿ ಸಖತ್ತಾಗಿಯೇ ಮೂಡಿಬಂದಿದ್ದು ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿಸಿದೆ. ಈ ನಡುವೆ ಮಹಾರಾಷ್ಟ್ರದಲ್ಲಿ ಈ ಸಿನಿಮಾ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್‌ಎಸ್) ವಿರೋಧ ವ್ಯಕ್ತಪಡಿಸಿದೆ.
ಅಬೀರ್ ಗುಲಾಲ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದೆ. ಇದರ ಬೆನ್ನಲ್ಲೆ ಇದೀಗ ಚಿತ್ರ ತಂಡಕ್ಕೆ ಬಿಗ್ ಶಾಖ್ ಎದುರಾಗಿದೆ. ಮಹಾರಾಷ್ಟ್ರ ನವನಿರ್ಮಾಣ ಸೇನೆಯು (ಎಂಎನ್‌ಎಸ್) ಮಹಾರಾಷ್ಟ್ರದಲ್ಲಿ ಚಿತ್ರ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಫವಾದ್ ಖಾನ್ ನಟಿಸಿರುವ ಈ ಚಿತ್ರದಲ್ಲಿ ಪಾಕಿಸ್ತಾನಿ ಆ್ಯಕ್ಷನ್ ಇದೆ. ಪಾಕಿಸ್ತಾನಿ ನಟರು ನಟಿಸಿರುವ ಚಲನಚಿತ್ರಗಳನ್ನು ಭಾರತ ದಲ್ಲಿ ಬಿಡುಗಡೆ ಮಾಡಲು ನಮ್ಮ ಪಕ್ಷ ಅವಕಾಶ ನೀಡುವುದಿಲ್ಲ ಎಂದು ಹಲವು ಬಾರಿ ಹೇಳಿದ್ದರೂ, ಕೆಲವು ಕೊಳೆತ ಮಾವಿನ ಹಣ್ಣುಗಳು ಬೆಳೆ ಯುತ್ತಲೇ ಇವೆ ಎಂದು ಎಂಎನ್‌ಎಸ್ ನಾಯಕ ಅಮೇಯಾ ಖೋಪ್ಕರ್ ‘ಎಕ್ಸ್’ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಯಾವುದೇ ಕಾರಣಕ್ಕೂ ಅಬೀರ್ ಗುಲಾಲ್’ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ. ಎಂಎನ್ಎಸ್ ಕಾರ್ಯಕರ್ತರು ಸಿನಿಮಾ ಪೋಸ್ಟರ್ ತೆಗೆದು ಕಸದ ಬುಟ್ಟಿಗೆ ಎಸೆಯುವ ಕೆಲಸ ಮಾಡಬೇಕು ಎಂದು ಎಂ ಎನ್ ಎಸ್ ಮುಖ್ಯಸ್ಥರಾದ ಖೋಪ್ಕರ್ ಕರೆ ನೀಡಿದ್ದಾರೆ.
ಪಾಕಿಸ್ತಾನದ ನಟರು ಭಾರತೀಯ ಸಿನಿಮಾದಲ್ಲಿ ನಟಿಸುವುದು ಸರಿಯಲ್ಲ, ಪಾಕಿಸ್ತಾನದ ಕಲಾವಿದರು ಭಾರತೀಯ ಸಿನಿಮಾ ಮಾಡುವ ಬದಲು ತಮ್ಮ ತಾಯ್ನಾಡಿನ ಸಿನಿಮಾದಲ್ಲಿ ನಟನೆ ಮಾಡುವುದು ಉತ್ತಮ.. ಈ ಬಗ್ಗೆ ಭಾರತೀಯ ಸಿನಿಮಾದಲ್ಲಿ ಪಾಕಿಸ್ತಾನದ ಕಲಾವಿದರನ್ನು ಅನುಮತಿ ಸಬೇಕೋ ಅಥವಾ ಬೇಡವೆ ಎಂಬುದರ ಬಗ್ಗೆ ಕೆಲ ಅಗತ್ಯ ನೀತಿ ರೂಪಿಸಿ ಕೇಂದ್ರ ಸರಕಾರವೇ ನಿರ್ಧಾರ ಕೈಗೊಳ್ಳಬೇಕು ಎಂದು ಶಿವಸೇನೆಯ ನಾಯಕ ಸಂಜಯ್ ನಿರುಪಮ್ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: Choo Mantar Kannada Movie: ಸದ್ದಿಲ್ಲದೆ ಒಟಿಟಿಗೆ ಬಂತು ಕನ್ನಡದ ಈ ಹಾರರ್-ಥ್ರಿಲ್ಲರ್ ಸಿನಿಮಾ: ಮಿಸ್ ಮಾಡ್ಬೇಡಿ
2016 ರಲ್ಲಿಯೇ ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘವು ಭಾರತೀಯ ಚಲನಚಿತ್ರಗಳಲ್ಲಿ ನಟನೆ ಮಾಡುವ ಪಾಕಿಸ್ತಾನಿ ಕಲಾವಿದರ ಮೇಲೆ ನಿಷೇಧ ಹೇರಿತ್ತು. ಹೀಗಾಗಿ ಫವಾದ್ ಸೇರಿದಂತೆ ಇತರ ನಟರಿಗೂ ಭಾರತೀಯ ಸಿನಿಮಾದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ ಇದೀಗ ಆರತಿ ಎಸ್. ವಾಗ್ದಿ ನಿರ್ದೇಶನದಲ್ಲಿ ಮೂಡಿ ಬಂದ ಅಬಿರ್ ಗುಲಾಲ್ ಸಿನಿಮಾ ಮೂಲಕ ಮತ್ತೆ ಫವಾದ್ ಅವರು ಬಾಲಿವುಡ್ ಗೆ ಕಂಬ್ಯಾಕ್ ಮಾಡಿದ್ದಾರೆ. ಈ ಸಿನಿಮಾವು ಮೇ 9 ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗ ಲಿದೆ. ಚಿತ್ರವನ್ನು ಇಂಡಿಯನ್ ಸ್ಟೋರೀಸ್, ಎ ರಿಚರ್ ಲೆನ್ಸ್ ಮತ್ತು ಆರ್ಜಯ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ.ಇದೀಗ ಚಿತ್ರ ಬಿಡುಗಡೆ ಮುನ್ನವೇ ಸಂಕಷ್ಟಕ್ಕೆ ಸಿಲುಕಿದ್ದು ಸಿನಿಪ್ರಿಯರ ಮನ ಗೆಲ್ಲುತ್ತಾ ಎಂದು ಕಾದು ನೋಡ್ಬೆಕು.