Saturday, 14th December 2024

ಐಎಂಡಿಬಿ ಪಟ್ಟಿ: ಅತೀ ಹೆಚ್ಚು ವೀಕ್ಷಣೆಯಲ್ಲಿ ದೀಪಿಕಾ ಪಡುಕೋಣೆಗೆ ಅಗ್ರಸ್ಥಾನ

ಮುಂಬೈ: ಐಎಂಡಿಬಿ (IMDb) ಅತಿ ಹೆಚ್ಚು ವೀಕ್ಷಿಸಿದ ಟಾಪ್ 100 ಭಾರತೀಯ ತಾರೆಯರ ಪಟ್ಟಿಯನ್ನು ಹಂಚಿಕೊಂಡಿದೆ.

2014 ಏಪ್ರಿಲ್​ನಿಂದ 2024ರ ಏಪ್ರಿಲ್​ ತನಕ ಐಎಂಡಿಬಿ ವೆಬ್​ಸೈಟ್​ನಲ್ಲಿ ಜನರು ಅತಿ ಹೆಚ್ಚು ವೀಕ್ಷಿಸಿದ ಸೆಲೆಬ್ರಿಟಿ ಪ್ರೊಫೈಲ್​ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಹೆಚ್ಚು ವೀಕ್ಷಿಸಿದ ಭಾರತೀಯ ತಾರೆಗಳಲ್ಲಿ ದೀಪಿಕಾ ಪಡುಕೋಣೆ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ನಂತರ ಶಾರುಖ್ ಖಾನ್ ಎರಡನೇ ಸ್ಥಾನದಲ್ಲಿ, ಐಶ್ವರ್ಯ ರೈ ಬಚ್ಚನ್ ಮೂರನೇ ಸ್ಥಾನ, ಆಲಿಯಾ ಭಟ್ ನಾಲ್ಕನೇ ಸ್ಥಾನದಲ್ಲಿ ಮತ್ತು ಇರ್ಫಾನ್ ಖಾನ್ ಐದನೇ ಸ್ಥಾನದಲ್ಲಿದ್ದಾರೆ.

ಅಮೀರ್ ಖಾನ್ ಆರನೇ, ಸುಶಾಂತ್ ಏಳನೇ, ಸಲ್ಮಾನ್ ಖಾನ್ ಎಂಟನೇ, ಹೃತಿಕ್ ರೋಷನ್ ಒಂಬತ್ತನೇ ಮತ್ತು ಅಕ್ಷಯ್ ಕುಮಾರ್ ಹತ್ತನೇ ಸ್ಥಾನದಲ್ಲಿದ್ದಾರೆ. ವಿಶೇಷ ಎಂದರೆ ಕನ್ನಡದ ನಟ ಯಶ್ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ರಾಕಿಂಗ್​ ಸ್ಟಾರ್​ ಯಶ್​​ 89ನೇ ಸ್ಥಾನದಲ್ಲಿದ್ದಾರೆ.

IMDb ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿರುವ ದೀಪಿಕಾ ಪಡುಕೋಣೆ, ಜಾಗತಿಕ ಪ್ರೇಕ್ಷಕರ ಭಾವನೆಗಳನ್ನು ಪ್ರತಿನಿಧಿಸುವ ಪಟ್ಟಿಯಲ್ಲಿ ನನ್ನನ್ನು ಸೇರಿಸಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಳಾಗಿದ್ದದ್ದೇನೆ ಎಂದು ಧನ್ಯವಾದ ತಿಳಿಸಿದ್ದಾರೆ.