Sunday, 23rd June 2024

‘ಕೈಟ್ ಬ್ರದರ್ಸ್‌‘ ಲಿರಿಕಲ್ ಸಾಂಗ್ ರಿಲೀಸ್

ಭಜರಂಗ ಸಿನಿಮಾ ಲಾಂಛನದಲ್ಲಿ ರಜನಿಕಾಂತ್ ರಾವ್ ದಳ್ವಿಿ, ಮಂಜುನಾಥ್ ಬಿ.ಎಸ್ ಹಾಗೂ ಮಂಜುನಾಥ್ ಬಗಾಡೆ ನಿರ್ಮಿಸಿರುವ ‘ಕೈಟ್ ಬ್ರದರ್ಸ್‌‘ ಚಿತ್ರದ ‘ಆ ಅರಸ ಆ ಆನೆ..‘ ಎಂಬ ಹಾಡಿನ ಲಿರಿಕಲ್ ಸಾಂಗ್ ರಾಜ್ಯೋೋತ್ಸವದಂದು ಲಹರಿ ಆಡಿಯೋ ಮೂಲಕ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿತ್ತು, ವಿರೇನ್ ಸಾಗರ್ ಬಗಾಡೆ ಬರೆದಿರುವ ಈ ಹಾಡಿಗೆ ಉತ್ತಮ ಪ್ರತಿಕ್ರಿಿಯೆ ವ್ಯಕ್ತವಾಗಿದ್ದು ಅಧಿಕ ಸಂಖ್ಯೆೆಯಲ್ಲಿ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾಾರೆ. ಅನನ್ಯ ಭಟ್ ಹಾಗೂ ವಿರೇನ್ ಸಾಗರ್ ಬಗಾಡೆ ಈ ಹಾಡನ್ನು ಹಾಡಿದ್ದಾಾರೆ

ವಿರೇನ್ ಸಾಗರ್ ಬಗಾಡೆ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಹಳ್ಳಿಿಗಾಡಿನ ಬದುಕು ಮತ್ತು ಅಲ್ಲಿಯ ಮಕ್ಕಳ ಬಾಲ್ಯದ ಸಹಜ, ಸರಳ ನೈಜ ರೀತಿಯ ಚಿತ್ರಣ ಈ ಚಿತ್ರದ ಮುಖ್ಯ ಆಕರ್ಷಣೆ. ಶಿಕ್ಷಣ ಹಕ್ಕು, ಘನವಾದ ಸ್ನೇಹ ಮತ್ತು ಮಕ್ಕಳ ಸಾಹಸಗಾಥೆಯ ಕಥೆಯನ್ನು ಮನೋರಂಜನಾತ್ಮಕ ಹಾಗೂ ರೋಚಕರೀತಿಯಲ್ಲಿ ಹೇಳಲಾಗಿದೆ ಎನ್ನುತ್ತಾಾರೆ ನಿರ್ದೇಶಕ ವಿರೇನ್ ಸಾಗರ್ ಬಗಾಡೆ.

ಅನೀಶ್ ಚೆರಿಯನ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ವಿಜಯ್ ಭರಮಸಾಗರ, ಸುನಿ ಹಾಗೂ ವಿರೇನ್ ಸಾಗರ್ ಬಗಾಡೆ ರಚಿಸಿದ್ದಾಾರೆ. ಅಶೋಕ್ ಕಶ್ಯಪ್ ಛಾಯಾಗ್ರಹಣ, ಸಂತೋಷ್ ರಾಧಕೃಷ್ಣನ್ ಸಂಕಲನ ಹಾಗೂ ವಿನೋದ್ ಬಗಾಡೆ ಅವರ ನಿರ್ಮಾಣ ಸಮನ್ವಯ ಈ ಚಿತ್ರಕ್ಕಿಿದೆ. ವಿನೋದ್ ಬಗಾಡೆ, ಅನಂತ್ ದೇಶಪಾಂಡೆ, ಸಮರ್ಥ್ ಆಶಿ, ಪ್ರಣೀಲ್ ನಾಡಿಗೇರ, ಶ್ರೇಯ ಹರಿಹರ, ಅಭೀಷೇಕ್ ಮದರ್ಡ್ದಿಿ, ಪ್ರಭು ಹಂಚಿನಾಳ, ಅನಸೂಯ ಹಂಚಿನಾಳ, ರಾಜೀವ್ ಸಿಂಗ್ ಹಲವಾಯಿ, ಮುಕುಂದ ಮೈಗೂರು, ಕಿರಣ್ ಬಗಾಡೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾಾರೆ.

Leave a Reply

Your email address will not be published. Required fields are marked *

error: Content is protected !!