Mika Singh: ಎರಡು ಪೆಗ್ ಹಾಕಿದ ಬಳಿಕ ಸಲ್ಮಾನ್ ಖಾನ್ ಬದಲಾಗುತ್ತಾರೆ... ಸೀಕ್ರೆಟ್ ಬಿಚ್ಚಿಟ್ಟ ಮಿಕಾ ಸಿಂಗ್!
ಬಾಲಿವುಡ್ ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman khan) ಮತ್ತು ಖ್ಯಾತ ಗಾಯಕ ಮಿಕಾ ಸಿಂಗ್ (Mika singh) ಹೆಚ್ಚು ಗಾಢವಾದ ಬಾಂಧವ್ಯವನ್ನು ಹೊಂದಿದ್ದಾರೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿದೆ. ಇದೀಗ ಮಿಕಾ ಸಿಂಗ್ ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಖಾನ್ ಬಗ್ಗೆ ಒಂದು ಸೀಕ್ರೆಟ್ ಅನ್ನು ಹಂಚಿಕೊಂಡಿದ್ದಾರೆ. ಇದು ಈಗ ಸಾಕಷ್ಟು ವೈರಲ್ ಆಗಿದೆ.



ಸಲ್ಲು ಭಾಯ್ ಎಂದೇ ಕರೆಯಲ್ಪಡುವ ಬಾಲಿವುಡ್ ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಒಂದು ಸೀಕ್ರೆಟ್ ವಿಷಯವನ್ನು ಖ್ಯಾತ ಗಾಯಕ ಮಿಕಾ ಸಿಂಗ್ ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ವಿಭಿನ್ನ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅವರು ಹೇಳಿಕೊಂಡಿದ್ದು, ಇದಕ್ಕೆ ಕಾರಣವನ್ನೂ ತಿಳಿಸಿದ್ದಾರೆ.

ಬಾಲಿವುಡ್ ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಸಂಜೆ ಆರು ಗಂಟೆಯ ಮೊದಲು ಯಾರೂ ಭೇಟಿ ಮಾಡಬಾರದು ಎಂಬುದನ್ನು ಮಿಕಾ ಸಿಂಗ್ ರಿವೀಲ್ ಮಾಡಿದ್ದಾರೆ. ಸಂಜೆ ಆರು ಗಂಟೆಯ ಬಳಿಕ ಅವರು ತಮ್ಮೊಂದಿಗೆ ಇರುವವರನ್ನು ಸಮಾನವಾಗಿ ಕಾಣುತ್ತಾರೆ ಎಂದು ಮಿಕಾ ಹೇಳಿದ್ದಾರೆ.

ಸಲ್ಮಾನ್ ಖಾನ್ ಅವರ ಸಾಮಾಜಿಕ ಜೀವನದ ಬಗ್ಗೆ ಹೆಚ್ಚು ತಿಳಿದುಕೊಂಡಿರುವ ಮಿಕಾ ಸಿಂಗ್ ಅವರು ಶುಭಂಕರ್ ಮಿಶ್ರಾ ಅವರೊಂದಿಗಿನ ಇತ್ತೀಚಿನ ಸಂಭಾಷಣೆಯಲ್ಲಿ ಸಲ್ಮಾನ್ ಬಗ್ಗೆ ಒಂದು ರಹಸ್ಯ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಸಂಜೆ 6 ಗಂಟೆಯ ಮೊದಲು ಯಾರೂ ಸಂಪರ್ಕಿಸಬಾರದು ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್ ಹಗಲು ಮತ್ತು ರಾತ್ರಿಯಲ್ಲಿ ವಿಭಿನ್ನ ವ್ಯಕ್ತಿತ್ವಗಳನ್ನು ತೋರ್ಪಡಿಸುತ್ತಾರೆ ಎಂಬುದಾಗಿ ಖಾನ್ ಅವರನ್ನು ಹತ್ತಿರದಿಂದ ಬಲ್ಲವರಾದ ಮಿಕಾ ಸಿಂಗ್ ಬಹಿರಂಗಪಡಿಸಿದ್ದಾರೆ. ಅಲ್ಲದೇ ಸಂಜೆ ಎರಡು ಅಥವಾ ನಾಲ್ಕು ಪೆಗ್ ಸೇವಿಸಿದ ಬಳಿಕ ಅವರು ತುಂಬಾ ಬದಲಾಗುತ್ತಾರೆ. ಬಾಲಿವುಡ್ ನ ಸೂಪರ್ಸ್ಟಾರ್ ಹೆಚ್ಚು ಸ್ನೇಹಪರರಾಗುತ್ತಾರೆ ಎಂದು ಮಿಕಾ ತಿಳಿಸಿದ್ದಾರೆ.

ಅಲ್ಲದೇ ಸಲ್ಮಾನ್ ಖಾನ್ ನನ್ನೊಂದಿಗೆ ತುಂಬಾ ಮುಕ್ತವಾಗಿರುತ್ತಾರೆ. ಎರಡು ಪೆಗ್ ಸೇವಿಸಿದ ಅನಂತರ ಅವರು ನನ್ನನ್ನು ಸಮಾನವಾಗಿ ನಡೆಸಿಕೊಳ್ಳುತ್ತಾರೆ. ಇದು ನಮ್ಮ ಭ್ರಮೆ ಎಂದು ನಾವಂದುಕೊಳ್ಳಬಾರದು. ಎರಡು ಪೆಗ್ ಕಡಿಮೆ ಇದ್ದಾಗ ಮತ್ತು ಎರಡು ಪೆಗ್ ಜಾಸ್ತಿಯಾದಾಗ ಅವರು ತಮ್ಮ ವಿಭಿನ್ನ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತಾರೆ ಎಂದು ಮಿಕಾ ಹೇಳಿದ್ದಾರೆ.

ಸಾಮಾನ್ಯವಾಗಿ ಸಲ್ಮಾನ್ ಹೆಚ್ಚು ಅಹಂ ಹೊಂದಿರುವವರು ಎನ್ನುವ ಆರೋಪ ಇದೆ. ಆದರೆ ಅವರ ಹಾಕುವ ನಾಲ್ಕು ಪೆಗ್ಗಳು ಅವರ ವಿಭಿನ್ನ ಮುಖವನ್ನು ನಮಗೆ ತೋರಿಸಿಕೊಡುತ್ತದೆ ಎನ್ನುತ್ತಾರೆ ಮಿಕಾ ಸಿಂಗ್. ಇದು ನಮಗೆ ಭ್ರಮೆ ಉಂಟು ಮಾಡಬಹುದು ಎಂದು ಅವರು ಹೇಳಿದ್ದಾರೆ.

ಮೀಟ್ ಬ್ರದರ್ಸ್ ಕಾರ್ಯಕ್ರಮದ ಒಂದು ಕಥೆಯನ್ನು ಹಂಚಿಕೊಂಡ ಮಿಕಾ ಸಿಂಗ್, ಮೀಟ್ ಬ್ರದರ್ಸ್ ವೇಳೆ ಸಲ್ಮಾನ್ ಜೊತೆ ಬಿರಿಯಾನಿ ತಿಂದಿದ್ದೆ. ಬಳಿಕ ಉತ್ತಮ ಸ್ನೇಹಿತರಾದೆವು. ಅವರ ಬಗ್ಗೆ ನನಗೆ ತಿಳಿದಿರುವುದು ಅವರಿಗೂ ಗೊತ್ತಿಲ್ಲ. ಸಲ್ಮಾನ್ ಭಾಯ್ ಹಗಲಿನಲ್ಲಿ ಕೋಪಗೊಳ್ಳುತ್ತಾರೆ ಮತ್ತು ಸಂಜೆ 6 ಗಂಟೆಯ ಅನಂತರ ಅವರು ಹೆಚ್ಚು ಸ್ನೇಹಪರರಾಗುತ್ತಾರೆ.

ಮಧ್ಯಾಹ್ನ 2 ರಿಂದ ಸಂಜೆ 6ರ ನಡುವೆ ಸಲ್ಮಾನ್ ಭಾಯ್ನಿಂದ ದೂರವಿದ್ದರೆ ಒಳ್ಳೆಯದು. ಮೀಟ್ ಬ್ರದರ್ಸ್ ರಾತ್ರಿ ಅವರೊಂದಿಗೆ ಬಿರಿಯಾನಿ ತಿಂದಿದ್ದೆ. ಮರುದಿನ ಅವರು ರೇಸ್ 3ರ ಪ್ರಥಮ ಪ್ರದರ್ಶನಕ್ಕೆ ಹೋದರು. ಬಳಿಕ ಸಲ್ಮಾನ್ ಭಾಯ್ಗಾಗಿ ಕಾಯುತ್ತಾ ಅಲ್ಲಿಯೇ ಉತ್ಸಾಹದಿಂದ ನಿಂತಿದ್ದೆ. ಅವರು ಬಂದಾಗ ಅವರ ಹಿಂದೆ ನಡೆದೆ. ಸಲ್ಮಾನ್ ತನಗೆ ಹಲೋ ಕೂಡ ಹೇಳಲಿಲ್ಲ. ಇದರಿಂದ ದಿಗ್ಭ್ರಮೆಗೊಂಡೆ ಎನ್ನುತ್ತಾರೆ ಮಿಕಾ.

ಹಿಂದಿನ ರಾತ್ರಿ ಒಟ್ಟಿಗೆ ಬಿರಿಯಾನಿ ತಿಂದಿರುವುದರ ಬಗ್ಗೆ ಅವರಿಗೆ ನೆನಪಿಸಿದೆ. ಇದು ಭೇಟಿಯ ಸಮಯವಲ್ಲ. ಅದಕ್ಕಾಗಿ ಸಂಜೆವರೆಗೆ ಕಾಯಬೇಕು ಎಂದು ಹೇಳಿದರು. ಸಲ್ಮಾನ್ ಸಿಟ್ಟು ಕಡಿಮೆಯಾಗಲು ಎರಡು ಪೆಗ್ ಬೇಕಿಲ್ಲ. ಆದರೆ ಅವರು ನಮ್ಮ ವಲಯಕ್ಕೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಹಗಲಿನಲ್ಲಿ ಅವರು ತಮ್ಮ ಆಲೋಚನೆಗಳಲ್ಲಿ ಕಳೆದುಹೋಗುತ್ತಾರೆ ಎಂದು ಮಿಕಾ ಹೇಳಿದ್ದಾರೆ.

'ಜಾನಮ್ ಸಮ್ಜಾ ಕರೋ' ಚಿತ್ರೀಕರಣಕ್ಕಾಗಿ ಬಂದಿದ್ದ ಸಲ್ಮಾನ್ ಜೊತೆಗಿನ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡು ಮಿಕಾ ಆಗ ಅವರು ನಮ್ಮೊಂದಿಗೆ ಚಹಾ ಕೂಡ ಕುಡಿದರು. ಆದರೆ ಅವರ ಸಂಪರ್ಕ ವಿವರಗಳನ್ನು ನಾನು ಪಡೆಯಲಿಲ್ಲ. ಆಗ ನಾನು ಮೂರ್ಖನಾಗಿದ್ದೆ. ಅವರ ಪಾದಗಳನ್ನು ಮುಟ್ಟಿ ಅವರಿಗಾಗಿ ಒಂದು ಹಾಡನ್ನು ಹಾಡಬಹುದೇ ಎಂದು ಕೇಳಿದೆ. ಅವರು ನನ್ನನ್ನು ಹಾಡುವಂತೆ ಕೇಳಿದರು. ನಾನು ಹಾಡಿದೆ. ಆದರೆ ಆಗ ಅವರು ಈತ ಎಂತಹ ಕಾರ್ಟೂನ್ ಅನ್ನು ಪ್ರಸ್ತುತಪಡಿಸಿದ್ದಾನೆ ಎಂದು ಅವರು ಯೋಚಿಸುತ್ತಿರಬಹುದು ಎಂದರು.