Saturday, 23rd November 2024

ಪ್ರಪಾತಕ್ಕೆ ಇಳಿದ ಅದಾನಿ ಗ್ರೂಪ್ ಕಂಪೆನಿ ಷೇರುಗಳು

ಮುಂಬೈ: ಅದಾನಿ ಗ್ರೂಪ್ ಕಂಪೆನಿಯಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳಿಂದ ಪ್ರಪಾತಕ್ಕೆ ಇಳಿದಿರುವ ಷೇರುಗಳು ಏಳನೇ ದಿನವಾದ ಶುಕ್ರವಾರವೂ ದುರ್ಬಲ ವಾಗಿ ಮುಂದುವರಿದವು.

ಅದಾನಿ ಎಂಟರ್ಪ್ರೈಸಸ್ನ ಷೇರುಗಳು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಶೇಕಡಾ 20 ರಷ್ಟು ಕುಸಿದು 1,173.55 ರೂಪಾಯಿಗೆ ಮಾರಾಟವಾಗಿದೆ. ಕಳೆದ ಒಂದು ವರ್ಷದಲ್ಲಿ ಕನಿಷ್ಠ ಮಟ್ಟಕ್ಕೆ ತಲುಪಿದೆ. ಅದಾನಿ ಪೋರ್ಟ್ಸ್ ಷೇರುಗಳು ಶೇಕಡಾ 10, ಅದಾನಿ ಟ್ರಾನ್ಸ್ಮಿಷನ್ (ಶೇ 10), ಅದಾನಿ ಗ್ರೀನ್ ಎನರ್ಜಿ (ಶೇ 10), ಅದಾನಿ ಪವರ್ (ಶೇ 5), ಅದಾನಿ ಟೋಟಲ್ ಗ್ಯಾಸ್ (ಶೇ 5), ಅದಾನಿ ವಿಲ್ಮಾರ್ (ಶೇ 4.99) , ಎನ್ಡಿಟಿವಿ (ಶೇ. 4.98), ಎಸಿಸಿ (ಶೇ. 4.24) ಮತ್ತು ಅಂಬುಜಾ ಸಿಮೆಂಟ್ಸ್ (ಶೇ. 3).

ಇಂದು ಅದಾನಿ ಎಂಟರ್ಪ್ರೈಸಸ್ನಲ್ಲಿನ ವಹಿವಾಟು ಪುನಾರಂಭವಾಗಿ ಮತ್ತೆ ಶೇಕಡಾ 5ರಷ್ಟು ಕುಸಿತವಾಯಿತು.

ಅದಾನಿ ಗ್ರೂಪ್ ಷೇರುಗಳು ಕಳೆದ ಏಳು ದಿನಗಳಲ್ಲಿ 100 ಶತಕೋಟಿ ಡಾಲರ್ ಗಿಂತಲೂ ಹೆಚ್ಚು ಕುಸಿದಿದೆ. ಅದಾನಿ ಸ್ವತಃ ತನ್ನ ಸಂಪತ್ತು ಹತ್ತಾರು ಶತಕೋಟಿ ಡಾಲರ್ಗಳ ಕುಸಿತವನ್ನು ಕಂಡಿದೆ. ಫೋರ್ಬ್ಸ್ ಶ್ರೀಮಂತರ ಪಟ್ಟಿಯ ಟಾಪ್ 10 ನಿಂದ ಅದಾನಿಯವರು ಹೊರಬಿದ್ದಿದ್ದಾರೆ.