Friday, 18th October 2024

ಎರಡು ಪ್ರತ್ಯೇಕ ಎನ್ಕೌಂಟರ್‌: ಮೂವರು ಉಗ್ರರು ಹತ

ಶ್ರೀನಗರ: ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್‍ನಲ್ಲಿ ಮೂವರು ಉಗ್ರರನ್ನು ಹೊಡೆದುರು ಳಿಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ ಹತರಾದ ಉಗ್ರರ ಸಂಖ್ಯೆ ಏಳಕ್ಕೆ ತಲುಪಿದೆ.

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಗುಂಡಿನ ಚಕಮಕಿ ಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಭಾನು ವಾರ ನಡೆದ ಕಾರ್ಯಾಚರಣೆ ವೇಳೆ ನಾಲ್ಕು ಉಗ್ರರು ಹತರಾಗಿದ್ದರು. ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಮತ್ತೊಂದು ಎನ್ಕೌಂಟರ್‍ನಲ್ಲಿ ಅಪರಿಚಿತ ಉಗ್ರನೊಬ್ಬ ಬಲಿಯಾಗಿದ್ದಾನೆ. ಪುಲ್ವಾಮಾದ ಚತ್ಪೋರಾದಲ್ಲಿ ಎರಡು ಕಡೆಯ ನಡುವಿನ ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರಗಾಮಿ ಹತನಾಗಿದ್ದು, ಕೊನೆಯದಾಗಿ ವರದಿ ಗಳು ಬಂದಾಗ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.