Friday, 18th October 2024

ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿಗೆ ಜಾಮೀನು

ವದೆಹಲಿ: ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಗೆ ಸುಪ್ರೀಂಕೋರ್ಟ್ ಗುರುವಾರ ಜಾಮೀನು ನೀಡಿದೆ.

17 ವರ್ಷಗಳಿಂದ ಆರೋಪಿ ಫಾರೂಕ್ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ರೈಲಿಗೆ ಕಲ್ಲು ಎಸೆದ ಆರೋಪ ಈತನ ಮೇಲಿರುವುದಾಗಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಜಸ್ಟೀಸ್ ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠ ತಿಳಿಸಿದೆ.

ಸೆಷನ್ಸ್ ಕೋರ್ಟ್ ವಿಧಿಸಿರುವ ನಿಯಮ ಮತ್ತು ಷರತ್ತುಗಳ ಅನ್ವಯ ಆರೋಪಿ ಫಾರೂಕ್ ಗೆ ಜಾಮೀನು ನೀಡಲಾಗಿದೆ.

ರಾಜ್ಯ ಸರ್ಕಾರ ಸಲ್ಲಿರುವ ಪ್ರಮಾಣಪತ್ರದಲ್ಲಿ, ಆರೋಪಿ ಅಂದು ಜನರ ಗುಂಪಿಗೆ ಪ್ರಚೋದನೆ ನೀಡಿದ್ದು, ರೈಲಿನ ಬೋಗಿಗಳತ್ತ ಕಲ್ಲು ತೂರಾಟ ನಡಸಿದ ಪರಿಣಾಮ ಪ್ರಯಾಣಿಕರು ಗಾಯಗೊಂಡಿದ್ದರು ಎಂದು ತಿಳಿಸಿತ್ತು.

2004ರಿಂದ ಬಂಧನದಲ್ಲಿರುವ ಆರೋಪಿ ಫಾರೂಖ್ ತನಗೆ ಜಾಮೀನು ಮಂಜೂರು ಮಾಡಬೇಕೆಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದ. 2002ರಲ್ಲಿ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ್ದ ಘಟನೆಯಿಂದಾಗಿ ಗುಜರಾತ್ ನಲ್ಲಿ ಕೋಮು ದಳ್ಳುರಿಗೆ ಕಾರಣವಾಗಿತ್ತು.