Saturday, 9th December 2023

ಹೆಣ್ಣು ಕೊಡದಿದ್ದಕ್ಕೆ ಗುಂಡಿನ ದಾಳಿ: ಇಬ್ಬರ ಸಾವು

ಖಿಸರಾಯ್: ಹೆಣ್ಣಿನ ಕುಟುಂಬಸ್ಥರು ಸಂಬಂಧ ಒಪ್ಪಿಕೊಳ್ಳಲು ನಿರಾಕರಿಸಿದ್ದಕ್ಕಾಗಿ, ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಬಿಹಾರದ ಲಖಿಸರಾಯ್‌ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

ಲಖಿಸರಾಯ್‌ ನಗರದ ಪಂಜಾಬಿ ಮೊಹಲ್ಲಾ ಪ್ರದೇಶದಲ್ಲಿ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಶಿಶ್ ಚೌಧರಿ (25) ಎಂಬಾತನೆ ಕೃತ್ಯ ಎಸಗಿದ ಆರೋಪಿ.

ಛತ್ ಹಬ್ಬದ ಅಂಗವಾಗಿ ಸೂರ್ಯನಿಗೆ ಪೂಜೆ ಸಲ್ಲಿಸಿ ಹಿಂದಿರುಗುವ ವೇಳೆ, ಚೌಧರಿ ಹೆಣ್ಣಿನ ಕುಟುಂಬದ ಸದಸ್ಯರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.

ಚೌಧರಿ ಆಕೆಯನ್ನು ಪ್ರೀತಿಸುತ್ತಿದ್ದು, ಕುಟುಂಬಸ್ಥರು ಸಂಬಂಧಕ್ಕೆ ನಕಾರ ವ್ಯಕ್ತಪಡಿಸಿದ್ದರಿಂದ ನೊಂದುಕೊಂಡಿದ್ದ. ಹೀಗಾಗಿ, ದಾಳಿ ನಡೆಸಿ, ಸ್ಥಳದಿಂದ ಪರಾರಿಯಾಗಿದ್ದ. ಗಾಯಗೊಂಡವರನ್ನು ಉನ್ನತ ಚಿಕಿತ್ಸೆಗಾಗಿ ಪಟ್ನಾದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಂದನ್‌ ಝಾ ಹಾಗೂ ರಾಜೇಂದ್ರ ಝಾ ಮೃತಪಟ್ಟಿದ್ದು, ಇಬ್ಬರೂ ಸಹೋದರರು. ಗಾಯಗೊಂಡವರಲ್ಲಿ ಅವರ ಸಹೋದರಿ ದುರ್ಗಾ ಝಾ ಹಾಗೂ ತಂದೆ ಶಶಿಭೂಷಣ್‌ ಝಾ ಸೇರಿದ್ದಾರೆ.

ಮೃತ ಸಹೋದರರ ಪೈಕಿ ಒಬ್ಬರ ಪತ್ನಿಯಾದ ಲವ್ಲೀ ದೇವಿ ಹಾಗೂ ಆಪ್ತ ಸಂಬಂಧಿ ಪ್ರೀತಿ ದೇವಿಗೆ ಗಾಯಗಳಾಗಿವೆ. ಆರೋಪಿಯ ಪತ್ತೆಗೆ ಕಾರ್ಯಾ ಚರಣೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!