Wednesday, 11th December 2024

ದೆಹಲಿಯಲ್ಲಿ ಒಂದು ವಾರ ಲಾಕ್ ಡೌನ್

ನವದೆಹಲಿ : ವಾಯುಮಾಲಿನ್ಯ ಮಿತಿ ಮೀರಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ದೆಹಲಿಯಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಘೋಷಿಸಲಾಗಿದೆ.

ಸಿಎಂ ಅರವಿಂದ್ ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೋಮವಾರದಿಂದ ಒಂದು ವಾರ ಶಾಲೆಗಳು ಬಂದ್ ಆಗಿರಲಿವೆ. ಸರ್ಕಾರಿ ಕಚೇರಿ ಸಿಬ್ಬಂದಿ ಮನೆಯಿಂದಲೇ ಕಲೆಸ ನಿರ್ವಹಿಸಲು ಹೇಳಲಾಗಿದೆ.

ರಾಜಧಾನಿಯಲ್ಲಿ ವಿಷಕಾರಿ ಹೊಗೆ ಆವರಿಸಿದೆ. ಈ ನಿಟ್ಟಿನಲ್ಲಿ ಒಂದು ವಾರಗಳ ಕಾಲ ನಗರದಾದ್ಯಂತ ಶಾಲೆಗಳು ಸಂಪೂರ್ಣ ವಾಗಿ ಬಂದ್ ಆಗಿರಲಿವೆ. ನ. 14ರಿಂದ 17ರವರೆಗೆ ಕಟ್ಟಡ ನಿರ್ಮಾಣ ಕಾರ್ಯ ಸಂಪೂರ್ಣ ಬಂದ್ ಆಗಲಿದೆ ಎಂದು ಹೇಳಿದ್ದಾರೆ.

ರಾಜಧಾನಿಯಲ್ಲಿ ವಾಯುಮಾಲಿನ್ಯ ಸಂಪೂರ್ಣವಾಗಿ ಹದಗೆಟ್ಟಿರುವ ಕಾರಣ ದೆಹಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಸುಪ್ರೀಂಕೋರ್ಟ್, ಲಾಕ್ಡೌನ್ ಘೋಷಣೆ ಮಾಡುವಂತೆ ಸಲಹೆ ನೀಡಿತ್ತು. ಇದರ ಹಿನ್ನೆಲೆಯಲ್ಲಿ ಆಪ್ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

Share