ಮುಂಬಯಿ: ಭಾರತೀಯ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ ಚೇತರಿಕೆ ತೋರಿದ್ದು 437 ಅಂಶ ಏರಿಕೆ ದಾಖಲಿಸಿದೆ.
ಜಾಗತಿಕ ಮಾರುಕಟ್ಟೆಯ ಧನಾತ್ಮಕ ಟ್ರೆಂಡ್ಗೆ ಅನುಗುಣವಾಗಿ ಇನ್ಫೋಸಿಸ್, ಎಚ್ಯುಎಲ್, ಟಿಸಿಎಸ್ ಷೇರುಗಳು ಲಾಭಾಂಶ ದಾಖಲಿಸಿದ್ದೇ ಇದಕ್ಕೆ ಕಾರಣ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ಸೂಚ್ಯಂಕ ನಿಫ್ಟಿ ಮತ್ತೆ 13,600 ಅಂಶದ ಗಡಿ ದಾಟಿದೆ.
ಬಿಎಸ್ಇ ಸೆನ್ಸೆಕ್ಸ್ 437.49 (0.95%) ಅಂಶ ಏರಿಕೆ ದಾಖಲಿಸಿ 46,444.18 ಅಂಶದಲ್ಲಿ ದಿನದ ವಹಿವಾಟು ಮುಗಿಸಿದೆ. ನಿಫ್ಟಿ 134.80 (1%) ಅಂಶ ಏರಿಕೆಯೊಂದಿಗೆ 13,601.10 ಅಂಶ ಏರಿಕೆ ದಾಖಲಿಸಿ ದಿನದ ವಹಿವಾಟು ಕೊನೆ ಗೊಳಿಸಿದೆ. ಇನ್ಫೋಸಿಸ್, ಎಂಆಯಂಡ್ಎಂ, ಐಟಿಸಿ, ಎಸ್ಬಿಐ, ಇಂಡಸ್ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಟಿಸಿಎಸ್, ಭಾರ್ತಿ ಏರ್ಟೆಲ್ ಷೇರು ಗಳು ಲಾಭಾಂಶ ಕಂಡಿವೆ.
ಹೊಸ ಕರೊನಾ ವೈರಸ್ ಸೋಂಕು ಹಾಗೂ ವಿವಿಧ ದೇಶಗಳು ವಿಧಿಸಿರುವ ಆರ್ಥಿಕ ನಿರ್ಬಂಧಗಳ ಕಾರಣ ಜಾಗತಿಕ ಷೇರುಪೇಟೆ ಯಲ್ಲಿ ತೀವ್ರಗತಿಯ ಏರಿಳಿತ ದಾಖಲಾಗಿದೆ.