Saturday, 27th July 2024

ಮಾಜಿ ಪ್ರಧಾನಿ ವಾಜಪೇಯಿ ಸೋದರ ಸೊಸೆ ಕರೋನಾ ಸೋಂಕಿಗೆ ಬಲಿ

ರಾಯ್ಪುರ್: ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸೊಸೆ, ಮಾಜಿ ಸಂಸದೆ, ಕಾಂಗ್ರೆಸ್ ಹಿರಿಯ ಮುಖಂಡ ಕರುಣಾ ಶುಕ್ಲಾ ಅವರು ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಕೋವಿಡ್ ಗೆ ಪಾಸಿಟಿವ್ ವರದಿ ಪಡೆದ ಬಳಿಕ ಶುಕ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

32 ವರ್ಷಗಳ ಕಾಲ ವಿವಿಧ ಸ್ಥಾನಮಾನಗಳ ಜವಾಬ್ದಾರಿ ಹೊತ್ತು ಬಿಜೆಪಿಯಲ್ಲಿದ್ದ ಶುಕ್ಲಾ, ಕೇಸರಿ ಪಕ್ಷವು ತನ್ನ ಉಮೇದುವಾರಿಕೆ ಕಡೆಗಣಿಸಿದ ಆರೋಪದ ಬಳಿಕ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ 2013 ರ ಅಕ್ಟೋಬರ್‌ ನಲ್ಲಿ ಕಾಂಗ್ರೆಸ್ ಸೇರಿದ್ದರು.

2018 ರ ಛತ್ತೀಸ್ ಘರ್ ವಿಧಾನಸಭೆ ಚುನಾವಣೆಯಲ್ಲಿ ರಾಜನಂದಗಾಂವ್ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ವಿರುದ್ಧ ಕಾಂಗ್ರೆಸ್ ಪಕ್ಷದ ಟಿಕೆಟ್‌ನಲ್ಲಿ ಅವರು ತಮ್ಮ ಕೊನೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು.

 

Leave a Reply

Your email address will not be published. Required fields are marked *

error: Content is protected !!