ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Assaulting Case: "ನಿನ್ನನ್ನೂ ಕೊಂದು ಡ್ರಮ್‌ ಒಳಗೆ ಹಾಕುವೆ"; ಗೆಳೆಯನ ಜೊತೆ ಸೇರಿ ಪತಿ ಮೇಲೆ ಹಲ್ಲೆ ಮಾಡಿದ ಪತ್ನಿ

ಗುರುಗ್ರಾಮದ ಬಸಾಯಿ ಎನ್ಕ್ಲೇವ್ ನಲ್ಲಿ ಮಂಗಳವಾರ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯ ಮೇಲೆ ಹಲ್ಲೆ ಮಾಡಿದ್ದಾಳೆ. ಆಕೆಯ ಪ್ರಿಯಕರ ವ್ಯಕ್ತಿಗೆ ಪಿಸ್ತೂಲಿನ ಹಿಂಭಾಗದಿಂದ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಮಹಿಳೆ ತನ್ನ ಗಂಡನಿಗೆ ಕೊಲೆ ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ಗೆಳೆಯನ ಜೊತೆ ಸೇರಿ ಪತಿ ಮೇಲೆ ಹಲ್ಲೆ ಮಾಡಿದ ಪತ್ನಿ

Profile Vishakha Bhat Apr 9, 2025 12:28 PM

ಲಖನೌ: ಗುರುಗ್ರಾಮದ ಬಸಾಯಿ ಎನ್ಕ್ಲೇವ್ ನಲ್ಲಿ ಮಂಗಳವಾರ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯ ಮೇಲೆ ಹಲ್ಲೆ ಮಾಡಿದ್ದಾಳೆ. (Assaulting Case) ಆಕೆಯ ಪ್ರಿಯಕರ ವ್ಯಕ್ತಿಗೆ ಪಿಸ್ತೂಲಿನ ಹಿಂಭಾಗದಿಂದ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಮಹಿಳೆ, ಮೀರತ್‌ನಲ್ಲಿ ಕಳೆದ ತಿಂಗಳು ಮಹಿಳೆ ಮತ್ತು ಆಕೆಯ ಪ್ರಿಯಕರ ಪತಿಯನ್ನು ಕ್ರೂರವಾಗಿ ಕೊಂದು, ದೇಹವನ್ನು ಕತ್ತರಿಸಿ, ಡ್ರಮ್‌ನಲ್ಲಿ ಹಾಕಿ ಸಿಮೆಂಟ್ ತುಂಬಿಸಿದ ರೀತಿಯಲ್ಲಿ ನಿನ್ನನ್ನು ಕೂಡ ಮುಗಿಸಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ ಎಂದು ಆಕೆಯ ಪತಿ ದೂರಿನಲ್ಲಿ ತಿಳಿಸಿದ್ದಾರೆ.

ಹರಿಯಾಣದ ಝಜ್ಜರ್‌ನ ಖರ್ಮನ್ ಗ್ರಾಮದವಾರದ ಮೌಸಮ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಹಾಗೂ ಆಕೆಯ ಗೆಳೆಯ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಪಂಜಾಬ್‌ನ ಮೋಗಾದ ಮಹಿಳೆಯೊಂದಿಗೆ ತಾನು ವಿವಾಹವಾಗಿದ್ದೆ. ಆಕೆಯ ಕುಟುಂಬವು ಮದುವೆಗೆ ಒಪ್ಪದ ಕಾರಣ, ತಾವು ಗುರುಗ್ರಾಮ್‌ನ ಬಸಾಯಿ ಎನ್‌ಕ್ಲೇವ್‌ನಲ್ಲಿ ವಾಸಿಸುತ್ತಿದ್ದೆವು. ಸೋಮವಾರ ರಾತ್ರಿ ಕರ್ತವ್ಯ ಮುಗಿಸಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಮನೆಗೆ ತಲುಪಿದಾಗ, ನನ್ನ ಹೆಂಡತಿ ಕೋಣೆಯಲ್ಲಿ ಕಾಣಲಿಲ್ಲ. ನಾನು ಟೆರೇಸ್‌ಗೆ ಹೋದಾಗ, ನನ್ನ ಹೆಂಡತಿ ಅದೇ ಊರಿನ ನವೀನ್ ಜೊತೆ ನಿಂತಿರುವುದನ್ನು ನೋಡಿದೆ.

ಆಗ ನಾನು ಅವರಿಬ್ಬರಿಗೆ ಪ್ರಶ್ನೆ ಮಾಡಿದೆ. ನವೀನ್ ಒಂದು ಪಿಸ್ತೂಲನ್ನು ತೆಗೆದುಕೊಂಡು ನನ್ನ ತಲೆಯ ಮೇಲೆ ಗುರಿಯಿಟ್ಟನು. ಅವನು ಪಿಸ್ತೂಲಿನ ಹಿಂಭಾಗದಿಂದ ನನ್ನ ತಲೆಗೆ ಹೊಡೆದ. ನಾನು ಕೂಗಿಕೊಂಡೆ. ನೆರೆಹೊರೆಯವರು ಬಂದ ಕೂಡಲೇ ನವೀನ್‌ ಹಾಗೂ ಆಕೆ ಪರಾರಿಯಾದರು. ಎಂದು ಮೌಸಮ್ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಎಫ್‌ಐಆರ್ ದಾಖಲಿಸಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಶೋಧ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Meerut Case: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದ ಮುಸ್ಕಾನ್‌ ಈಗ ಗರ್ಭಿಣಿ; ಮಗು ಸೌರಭ್‌ನದ್ದಾದರೆ ಸಾಕುವುದಾಗಿ ಸಹೋದರನ ಹೇಳಿಕೆ

ಇತ್ತೀಚೆಗೆ ಗೊಂಡಾದ ಜಲ ನಿಗಮದಲ್ಲಿ ಕೆಲಸ ಮಾಡುತ್ತಿರುವ ಜೂನಿಯರ್ ಎಂಜಿನಿಯರ್ (ಜೆಇ) ಧರ್ಮೇಂದ್ರ ಕುಶ್ವಾಹ, ತಮ್ಮ ಪತ್ನಿ ಮಾಯಾ ಮೌರ್ಯ ಮತ್ತು ಆಕೆಯ ಪ್ರಿಯಕರ ನೀರಜ್ ಮೌರ್ಯ ತನ್ನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಜುಲೈ 7, 2024 ರಂದು ಮಾಯಾ ಮತ್ತು ನೀರಜ್‌ನ ಖಾಸಗಿ ಸ್ಥಿತಿಯಲ್ಲಿ ನೋಡಿದ ಕುಶ್ವಾಹ ಹೇಳಿಕೊಂಡಿದ್ದಾರೆ. ತಾನು ಈ ಬಗ್ಗೆ ಕೇಳಿದಾಗ ಮಾಯಾ ಇಬ್ಬರೂ ತನ್ನನ್ನು ಥಳಿಸಿದ್ದಾಗಿ ಹೇಳಿದರು. ಮಾರ್ಚ್ 29, 2025 ರಂದು, ಮಾಯಾ ತನ್ನ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಳು. ನೀನು ಹೆಚ್ಚು ಮಾತನಾಡಿದರೆ, ಮೀರತ್‌ನಲ್ಲಿ ನಡೆದ ಹತ್ಯೆಯಂತೆ ನಿನ್ನನ್ನು ಕೊಂದು ಡ್ರಮ್‌ನಲ್ಲಿ ಹಾಕಿ ಮುಚ್ಚಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.