Kannada Digitalization: ಕನ್ನಡಕ್ಕೆ ಡಿಜಿಟಲ್‌ ಪ್ರಾಧಿಕಾರ ಅಗತ್ಯ

Kannada Digitalization: ಕನ್ನಡಕ್ಕೆ ಡಿಜಿಟಲ್‌ ಪ್ರಾಧಿಕಾರ ಅಗತ್ಯ

Profile Ashok Nayak December 22, 2024
ವಿದ್ಯುನ್ಮಾನ ಗೋಷ್ಠಿಯಲ್ಲಿ ವಿಶ್ರಾಂತ ಕುಲಪತಿ ಡಾ. ಚಿದಾನಂದ ಗೌಡ ಹಕ್ಕೊತ್ತಾಯ ಕನ್ನಡ ಮುದುಕರ ಭಾಷೆ ಆಗುತ್ತಿದೆ: ಜಿಎನ್‌ಎಂ ಹರೀಶ್ ಕೇರಾ ಸಮಾನಾಂತರ ವೇದಿಕೆ ೧ಮಂಡ್ಯ: ತಂತ್ರಜ್ಞಾನ ಯುಗದಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಡಿಜಿಟಲ್ ಪ್ರಾಧಿಕಾರ ರೂಪಿಸಿಕೊಂಡು ಪ್ರಯತ್ನ ಮಾಡಬೇಕಾಗಿದೆ ಎಂದು ಸೃಜನಶೀಲತೆ - ವಿದ್ಯುನ್ಮಾನ ಮಾಧ್ಯಮಗಳ ಸವಾಲುಗಳು ಗೋಷ್ಠಿಯಲ್ಲಿ ಸರಕಾರವನ್ನು ಒತ್ತಾಯಿಸಲಾಯಿತು. ಎಐ, ಸೃಜನಶೀಲತೆ ಎಲ್ಲವೂ ಮನುಷ್ಯನ ಮಿತ್ರನಾಗಬೇಕೇ ಹೊರತು ಶತ್ರು ಆಗಬಾರದು. ಮಾನವನ ಆಸ್ತಿ ಸೃಜನಶೀಲತೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ತಂತ್ರಜ್ಞಾನವನ್ನು ಬಳಸಿಕೊಳ್ಳುವ, ಮನುಷ್ಯನನ್ನು ಬೆಳೆಸುವ ಕೆಲಸ ಆಗಬೇಕು. ಕಲೆ, ವಿಜ್ಞಾನ, ಶಿಕ್ಷಣ ಎಲ್ಲ ಕಡೆಯೂ ತಂತ್ರಜ್ಞಾನದ ಬೆಳವಣಿಗೆ ಸಾಕಷ್ಟಿದೆ. ತಂತ್ರಜ್ಞಾನ ಬೆಳೆದಂತೆ ಮನುಷ್ಯನ ನೈತಿಕತೆಗೂ ಧಕ್ಕೆಯಾಗುವ ಭಯ ಇದೆ. ಕನ್ನಡ ವರ್ಚುವಲ್ ಯುನಿವರ್ಸಿಟಿ ಹಾಗೂ ಡಿಜಿಟಲ್ ಪ್ರಾಧಿಕಾರ ಸ್ಥಾಪಿಸಿ ಮುಂದುವರಿಯಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಡಾ. ಚಿದಾನಂದ ಗೌಡ ನುಡಿದರು. ವಿದ್ಯುನ್ಮಾನ ಮಾಧ್ಯಮ; ಕನ್ನಡ ಪಾರಮ್ಯ ಅಗತ್ಯ: ಇವತ್ತಿನ ಕನ್ನಡ ಮುದುಕರ ಕನ್ನಡವಾಗುತ್ತಿದೆ. ಕನ್ನಡ ಮನೆಮನಗಳಿಂದ ಮರೆಯಾಗುತ್ತಿದೆ. ಮಕ್ಕಳು ಕನ್ನಡವನ್ನು ಬಳಸುತ್ತಿಲ್ಲ. ಹೀಗಾಗಿ ವಿದ್ಯುನ್ಮಾನ ಮಾಧ್ಯಮದಲ್ಲಿ ಕನ್ನಡದ ಪಾರಮ್ಯವನ್ನು ಸಾಧಿಸುವುದು ಅತ್ಯಗತ್ಯವಾಗಿದೆ ಎಂದು ಗೋಷ್ಠಿಯ ಆಶಯ ಭಾಷಣ ಮಾಡಿದ ಹಿರಿಯಪತ್ರಕರ್ತ ಜಿ.ಎನ್ ಮೋಹನ್ ನುಡಿದರು. ನಾವು ಕಂಪ್ಯೂಟರ್‌ನಲ್ಲಿ ಎಷ್ಟು ಕನ್ನಡ ಪದಗಳನ್ನು ಬಳಸುತ್ತಿದ್ದೇವೆ, ಅದಕ್ಕೆ ಸರಿಯಾಗಿ ಕನ್ನಡ ಕಲಿಸಿದ್ದೇವೆಯೇ ಎಂದು ನೋಡಬೇಕಿದೆ. ಮುಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಕನ್ನಡ ಉಳಿಯಬೇಕು. ಕನ್ನಡ ತಂತ್ರಾಂಶ ರೂಪಿಸಬೇಕು. ಹಂಪಿ ವಿಶ್ವ ವಿದ್ಯಾಲಯರೂಪಿಸಿದ ಕುವೆಂಪು ತಂತ್ರಾಂಶದ ಕತೆಏನಾಯಿತೋ ಗೊತ್ತಿಲ್ಲ. ಸರಕಾರಕ್ಕೆ ಕನ್ನಡ ತಂತ್ರಾಂಶದ ಕಿವಿಯೇ ಇಲ್ಲ. ಇಂಟರ್ನೆಟ್ ಅನ್ನು ಮಾತ್ರ ಉಪಯೋಗಕ್ಕೆ ತಕ್ಕಷ್ಟು ಬಳಸುತ್ತಿದೆ. ಇದನ್ನೆಲ್ಲ ಸರಿಯಾಗಿ ನಿರ್ವಹಿಸಲು ಡಿಜಿಟಲ್ ಕನ್ನಡ ಪ್ರಾಧಿಕಾರ ಬೇಕು ಎಂದು ಅವರು ಒತ್ತಾಯಿಸಿದರು. ಸಾಮಾಜಿಕ ಜಾಲತಾಣದಲ್ಲಿ ಎಲ್ಲವೂ ಲಭ್ಯ: ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಜಾಲತಾಣ ವಿಷಯದ ಬಗ್ಗೆ ಐಟಿ ತಜ್ಞ ಓಂಶಿವಪ್ರಕಾಶ್ ಮಾತನಾಡಿ, ಸಾಮಾಜಿಕ ಜಾಲತಾಣ ಎಂದರೆ ಊರಲ್ಲಿನ ಅರಳಿಕಟ್ಟೆಯಂತೆ. ಇಲ್ಲಿ ಎಲ್ಲ ವಿಷಯಗಳಿಗೂ ಸ್ಥಾನವಿದೆ. ಆದರೆ ನಮ್ಮ ಕನ್ನಡ ಸಾಹಿತ್ಯಕ್ಕೆ ಸರಕಾರ ಅಲ್ಲದೆ, ಜನಸಾಮಾನ್ಯರು ಏನೆ ಮಾಡು ತ್ತಿದ್ದೇವೆ ಎಂದು ನಾವು ನಮ್ಮನ್ನು ಕೇಳಿಕೊಳ್ಳಬೇಕು. ಸಮುದಾಯ ಸಾಮಾಜಿಕ ಜಾಲತಾಣಗಳಿಂದ ಇಂಟರ್ ನೆಟ್ ಸಾಕಷ್ಟು ಕೊಡುಗೆ ಪಡೆದಿದೆ. ವಿಕಿಪೀಡಿಯ 300ಕ್ಕೂ ಹೆಚ್ಚು ಭಾಷೆಯಲ್ಲಿ ಇದೆ. ಕನ್ನಡದಲ್ಲೂ ಇದರಲ್ಲಿ ಸಾಕಷ್ಟು ಮಾಹಿತಿ ಇದೆ. ಇದು ಸಾಧ್ಯವಾದುದು ಸೋಶಿಯಲ್ ಮೀಡಿಯಾ ಗಳಿಂದ. ವಚನ ಸಾಹಿತ್ಯ, ದಾಸ ಸಾಹಿತ್ಯ ಮುಂತಾದವು ಡಿಜಿಟಲೀಕರಣಗೊಂಡು ಇಂದು ಬೆರಳ ತುದಿಯಲ್ಲಿ ಲಭ್ಯವಿವೆ ಎಂದು ಅವರು ನುಡಿದರು. ಎಲ್ಲಿ ಮಾಧ್ಯಮಗಳಲ್ಲಿ ಕನ್ನಡ ಬಳಕೆಯಾಗಲಿತಂತ್ರeನ ಯುಗದಲ್ಲಿ ಕನ್ನಡದ ಅನುಸಂಧಾನ ವಿಚಾರದಲ್ಲಿ ಮಾತನಾಡಿದ ಶಂಕರ್ ಸಿಹಿಮೊಗ್ಗೆ, ಎಲ್ಲಾ ಸಾಮಾ ಜಿಕ ಜಾಲತಾಣಗಳಲ್ಲಿ, ವೈದ್ಯಕೀಯ, ಇಂಜಿನಿ ಯರಿಂಗ್ ಕ್ಷೇತ್ರದಲ್ಲಿ ಕನ್ನಡವನ್ನು ಹೆಚ್ಚು ಬಳಸಬೇಕು ಹಾಗೂ ತಂದೆ - ತಾಯಂದಿರು ಮಕ್ಕಳ ಜೊತೆಗೆ ಹೆಚ್ಚು ಮಾತೃಭಾಷೆ ಕನ್ನಡ ವನ್ನು ಬಳಸಬೇಕು. ಹಾಗಾದರೆ ಮಾತ್ರ ಕನ್ನಡ ಆಧುನಿಕ ಯುಗದಲ್ಲಿ ಉಳಿಯಲು ಸಾಧ್ಯ ಎಂದರು. * ತಂತ್ರಜ್ಞಾನ ಮಾನವನ ಮಿತ್ರನಾಗಬೇಕು; ಸೃಜನಶೀಲತೆ ಸಮರ್ಪಕ ಬಳಕೆಗೆ ಆಗ್ರಹತಂತ್ರಜ್ಞಾನ ಬೆಳೆದಂತೆ ಮಾನವನ ನೈತಿಕತೆಗೂ ಧಕ್ಕೆಯಾಗುವ ಭೀತಿ ಭವಿಷ್ಯದಲ್ಲಿ ಕೃತಕ ತಂತ್ರಜ್ಞಾನದಿಂದಅಪಾಯ ಖಚಿತ: ತಜ್ಞರ ಎಚ್ಚರಿಕೆ ಸಾಮಾಜಿಕ ಜಾಲತಾಣ, ಇತರ ಮಾಧ್ಯಮಗಳಲ್ಲಿ ಕನ್ನಡ ಬಳಕೆಗೆ ಒತ್ತಾಯವಿದ್ಯುನ್ಮಾನ ಮಾಧ್ಯಮದಲ್ಲೂ ಕನ್ನಡ ಪಾರಮ್ಯ ಅತ್ಯಗತ್ಯ , ಕನ್ನಡ ತಂತ್ರಾಂಶ ರೂಪಿಸಲು ಮನವಿ * ಕೃತಕ ಬುದ್ಧಿಮತ್ತೆ ಸದ್ಯದ ಮನುಷ್ಯನ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಿದೆ. ನಾವು ಸ್ವತಂತ್ರ ಎಂದು ತಿಳಿದಿದ್ದೇವೆ. ಆದರೆ ಎಐ ಆಲ್ಗಾರಿದಂ ನಮ್ಮನ್ನು ಸತತವಾಗಿ ಗಮನಿಸಿ ನಮ್ಮ ವರ್ತನೆಗಳನ್ನು ನಿಯಂತ್ರಿಸುತ್ತಿರುತ್ತದೆ. ಎಐಯಿಂದ ನಾವು ಸೃಷ್ಟಿ ಮಾಡುವ ಕಂಟೆಂಟ್ ಮತ್ತೆ ಅದೇ ವ್ಯವಸ್ಥೆಯನ್ನು ಇಂಟರ್ನೆಟ್ ಮೂಲಕ ಸೇರಿಕೊಂಡುಅದೇ ಗಾಳಿಯನ್ನು ಮತ್ತೆ ಮತ್ತೆ ಉಸಿರಾಡುವ ಇಕೋ ಚೇಂಬರ್‌ಗಳಾಗಿ ನಾವು ಬದಲಾಗಲಿದ್ದೇವೆ.-ವೈ.ಎನ್ ಮಧು, ಸಾಹಿತಿ
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ