Rashmika Mandanna: ವ್ಹೀಲ್‌ಚೇರ್‌ನಲ್ಲಿ ರಶ್ಮಿಕಾ ಮಂದಣ್ಣ- ಕೈಯಲ್ಲಿರೋ ಸಿನಿಮಾಗಳ ಕಥೆಯೇನು?
ರಶ್ಮಿಕಾ ಇಂದು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಕೂಡಾ ವೀಲ್ ಚೇರ್‌ನಲ್ಲಿ. ಕಾರಿನಿಂದ ಇಳಿದು ಕುಂಟುತ್ತಲೇ ನಡೆದ ನಟಿ ವ್ಹೀಲ್‌ಚೇರ್ ಮೇಲೆ ಕುಳಿತಿದ್ದಾರೆ. ನಂತರ ಅವರನ್ನು ಕರೆದೊಯ್ಯಲಾಗಿದೆ.
ಹೈದರಾಬಾದ್: ನ್ಯಾಷನಲ್ ಕ್ರಶ್ ಎಂದು ಖ್ಯಾತಿ ಗಳಿಸಿದ್ದ ಕನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika mandanna) ಅವರು ಅಭಿಮಾನಿಗಳಿಗೆ ಶಾಕಿಂಗ್ ಆಗುವಂತ ವಿಡೀಯೋ ಒಂದು ಸಾಮಾಜಿಕ ಜಾಲತಾಣದಲ್ಲಿ(Social Media) ಸಖತ್ ವೈರಲ್(viral) ಆಗುತ್ತಿದ್ದು, ನಡೆಯಲಾಗದೇ ವೀಲ್‌ಚೇರ್ ಅಲ್ಲಿ ಏರ್‌ಪೋರ್ಟ್‌ಗೆ ಪುಷ್ಫ ನಟಿಯ ವಿಡೀಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಕೆಲದಿನಗಳ ಹಿಂದೆ ರಶ್ಮಿಕಾ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ರಶ್ಮಿಕಾ ಪೆಟ್ಟು ಮಾಡಿಕೊಂಡಿರುವ ವಿಚಾರ ಭಾರೀ ಸದ್ದು ಮಾಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಅವರು ಕೆಲ ಫೋಟೋಗಳನ್ನು ಹಂಚಿಕೊಂಡು ಅವರ ಕಾಲು ಫ್ರಾಕ್ಚರ್ (Leg injury) ಆಗಿರುವ ಕುರಿತು ಹೇಳಿಕೊಂಡಿದ್ದರು. ನಾಲ್ಕು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅವರು ತಮಗೆ ಆಗಿರುವ ಗಂಭೀರ ಗಾಯದ ಬಗ್ಗೆ ನೋವನ್ನು ತೋಡಿಕೊಂಡಿದ್ದರು.
ಈ ಹಿನ್ನಲೆ ಬೆಡ್ ರೆಸ್ಟ್‌ನಲ್ಲಿ ಕೂರ್ಗ್ ಬ್ಯೂಟಿ ಹೊರಪ್ರಪಂಚದಿಂದ ದೂರ ಉಳಿದಿದ್ದರು, ಆದರೀಗ ತಮ್ಮ ಮುಂಬರುವ ಛಾವಾ ಚಿತ್ರದ ಪ್ರಮೋಷನ್‌ಗಾಗಿ, ಹೈದರಾಬಾದ್ನಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಕುಂಟುತ್ತಲ್ಲೇ ಕಾರಿನಿಂದಿಳಿದು ವ್ಹೀಲ್‌ಚೇರ್‌ನಲ್ಲಿ ಏರ್‌ಪೋರ್ಟ್‌ಗೆ ಎಂಟ್ರಿ ನೀಡಿದ್ದಾರೆ. ನಡೆಯಲಾಗದ ಪರಿಸ್ಥಿತಿಯಲ್ಲಿ ಶ್ರೀವಲ್ಲಿ ಇದ್ದು, ವಿಮಾನ ನಿಲ್ದಾಣ ತಲುಪಿದ ಬಳಿಕ ಕಾರಿನಿಂದ ಇಳಿಯಲು ರಶ್ಮಿಕಾ ಪರದಾಡುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
ಮುಂಬರುವ ಅವರ ಬಹುನಿರೀಕ್ಷಿತ 'ಛಾವಾ' ಚಿತ್ರದ ಟ್ರೇಲರ್ ಇಂದು ಬಿಡುಗಡೆಗೊಳ್ಳಲಿದ್ದು, ಮುಂಬೈನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಿನ್ನೆಲೆ, ರಶ್ಮಿಕಾ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಲು ನೋವು ಇದ್ದರೂ ನಟಿ ಮುಂಬೈ ಕಾರ್ಯಕ್ರಮದಲ್ಲಿ ಪಾಲ್ಗೊಳಲು ಮುಂದಾಗಿದ್ದು, ಕಿರಿಕ್ ಬೆಡಗಿಯ ಪ್ರಫೆಷನಲಿಸಂ ಬಗ್ಗೆಯೂ ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಕಾಣಿಸಿಕೊಂಡ ವಿಡಿಯೋವನ್ನು ಪಾಪರಾಜಿಗಳು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಎಡಗಾಲಿಗೆ ಪ್ಲಾಸ್ಟರ್ ಹಾಕಿಕೊಂಡು ಕಾರಿನಿಂದ ಇಳಿಯುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿದೆ.
ಇನ್ನು ಜಿಮ್‌ನಲ್ಲಿ ವರ್ಕ್ಔಟ್ ಮಾಡುವಾಗ ರಶ್ಮಿಕಾ ಮಂದಣ್ಣ ಕಾಲಿಗೆ ಪೆಟ್ಟಾಗಿತ್ತು. ನಟಿ ವಿಶ್ರಾಂತಿ ಪಡೆಯುತ್ತಿದ್ದರು. ಗಾಯದಿಂದಾಗಿ ರಶ್ಮಿಕಾ ಅವರು ಶೂಟಿಂಗ್‌ನಲ್ಲಿ ಭಾಗಿಯಾಗಲು ಸಾಧ್ಯವಾಗದ ಕಾರಣ ತಮ್ಮ ಮುಂಬರುವ ಸಿನಿಮಾಗಳಾದ ಥಾಮ, ಸಿಕಂದರ್ ಮತ್ತು ಕುಬೇರ ಚಿತ್ರದ ನಿರ್ದೇಶಕರಿಗೆ ಕ್ಷಮೆಯೂ ಕೇಳಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಪ್ರಿನ್ಸಿಪಾಲ್‌ಗೆ ಆಜಾಜ್ ಹಾಕಿದ ಸ್ಟೂಡೆಂಟ್- ವಿಡಿಯೊ ಫುಲ್ ವೈರಲ್
ನನ್ನ ನಿರ್ದೇಶಕರಿಗೆ ವಿಳಂಬಕ್ಕೆ ಕ್ಷಮೆಯಿರಲಿ, ನನ್ನ ಕಾಲುಗಳು ಆಕ್ಷನ್ ಸಜ್ಜಾದ ಕೂಡಲೇ ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂದೂ ಅವರು ಭರವಸೆಯ ಮಾತುಗಳನ್ನಾಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರು ಗಾಯಗೊಂಡಿದ್ದು, ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಪೆಟ್ಟು ಮಾಡಿಕೊಂಡಿದ್ದಾರೆ. ರಶ್ಮಿಕಾ ಅವರು ಸಲ್ಮಾನ್ ಖಾನ್ ನಟನೆಯ ಸಿಖಂದರ್ ಸಿನಿಮಾದ ಶೂಟಿಂಗ್‌ಗೆ ಹೋಗಬೇಕಿತ್ತು. ಇದರ ನಡುವೆಯೇ ರಶ್ಮಿಕಾ ಜಿಮ್‌ನಲ್ಲಿ ಪೆಟ್ಟು ಮಾಡಿಕೊಂಡ ಕಾರಣ ಶೂಟಿಂಗ್ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಅದೃಷ್ಟವಶಾತ್ ರಶ್ಮಿಕಾ ಅವರಿಗೆ ಯಾವುದೇ ಅನಾಹುತವಾಗಿಲ್ಲ, ಆದರೆ, ಕಾಲಿಗೆ ಗಂಭೀರ ಗಾಯವಾಗಿರುವ ಕಾರಣ ಅವರು ನಡೆದಾಡಲು ಕೂಡ ಸಾಧ್ಯವಾಗುತ್ತಿಲ್ಲ. ಆದರೆ, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದು, ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಹಾಗಾಗಿ ರಶ್ಮಿಕಾ ಅವರು ಕೆಲ ದಿನಗಳವರೆಗೆ ರೆಸ್ಟ್ ಮಾಡಲಿದ್ದಾರೆ. ಕೈಯಲ್ಲಿ ಸಾಲು ಸಾಲು ಸಿನಿಮಾಗಳಿರುವಾಗಲೇ ರಶ್ಮಿಕಾ ಅವರಿಗೆ ಈ ರೀತಿ ಏಟಾಗಿದೆ. ಅವರು ವಾಪಸ್ ಆಗುವವರೆಗೂ ಶೂಟಿಂಗ್ ನಿಲ್ಲಿಸಲು ಚಿತ್ರತಂಡಗಳು ನಿರ್ಧರಿಸಿವೆ.