Thursday, 28th November 2024

ಮಣ್ಣಿನ ಗಣಪತಿ ಪರಿಸರ ಸ್ನೇಹಿ: ಜಿಲ್ಲಾಧಿಕಾರಿ 

ತುಮಕೂರು: ನೈಸರ್ಗಿಕವಾಗಿ ದೊರೆಯುವ ಮಣ್ಣಿನಿಂದ ತಯಾರಿಸುವ ಗಣಪತಿ ಪರಿಸರ ಸ್ನೇಹಿ ಆಗಿರುತ್ತದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಹೇಳಿದರು.
ನಗರದ ಆಲದಮರದ ಪಾರ್ಕ್ ಪ್ರೆಸ್‌ಕ್ಲಬ್ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಮಹಾನಗರ ಪಾಲಿಕೆಸಹಯೋಗದಲ್ಲಿ ಪ್ರೆಸ್ ಕ್ಲಬ್ ತುಮಕೂರು, ವರ್ಣೋದಯ ಆರ್ಟ್ ಗ್ರೂಪ್ ಟ್ರಸ್ಟ್(ರಿ)  ಆಯೋಜಿಸಿದ್ದ ಪರಿಸರ ಸ್ನೇಹಿ ಗಣೇಶ ಮೂರ್ತಿ ರಚನಾ ಕಾರ್ಯಾಗಾರ ಮತ್ತು ಜಿಲ್ಲಾ ಪಂಚಾಯಿತಿಯAದ ನೀರಿನ ಪರೀಕ್ಷೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ಗಣೇಶನಿಗೆ ವಿಘ್ನ ನಿವಾರಕ ಎಂದು ಕರೆಯುತ್ತೇವೆ. ನಮ್ಮ ಮನೆಯಲ್ಲಿ ಪೂಜೆಯಾಗಲಿ, ಸರ್ಕಾರಿ ಕಾರ್ಯಕ್ರಮವಾಗಲಿ ಅಥವಾ ಯಾವುದೇ ಕೆಲಸವಾಗಲಿ ನಾವು ಮೊದಲು ಗಣೇಶನನ್ನು ಪ್ರಾರ್ಥಿಸುತ್ತೇವೆ. ಇಷ್ಟೇ ಅಲ್ಲದೆ, ಮಕ್ಕಳಿಗೂ ಸಹ ಗಣೇಶ ಬೇಗ ಆಕರ್ಷಿತನಾಗುತ್ತಾನೆ. ಬಾಲ ಗಣೇಶ ಕರ‍್ಟೂನ್ ಬರುತ್ತೆ ಅಲ್ಲದೆ ಮುಖ ಆನೆಯ ಮುಖದಂತಿದೆ ಇದರಿಂದ ಮಕ್ಕಳಿಗೆ ಗಣೇಶ ಎಂದರೆ ಅಚ್ಚುಮೆಚ್ಚು ಎಂದರು.
ಜಿಪಂ ಸಿಇಒ ಪ್ರಭು ಮಾತನಾಡಿ, ಪ್ರೆಸ್‌ಕ್ಲಬ್ ಹಾಗೂ ವರ್ಣೋದಯ ಆರ್ಟ್ ಗ್ರೂಪ್ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳಿಗೆ ಪರಿಸರ ಬಗ್ಗೆ ಅರಿವು ಮೂಡಿಸುವುದು ಹಾಗೂ ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಓದುವುದಷ್ಟೇ ಅಲ್ಲದೆ ಇತರೆ ಚಟುವಟಿಕೆಗಳನ್ನು ಮಾಡುವುದರಿಂದ ಮಕ್ಕಳು ಹೊರಗಿನ ಪ್ರಪರಂಚದಲ್ಲಿ ಕ್ರೀಯಾಶೀಲರನ್ನಾಗಿ ಮಾಡಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ಇದೇ ವೇಳೆ ಸುಮಾರು ನೂರಕ್ಕೂ ಹೆಚ್ಚು ಮಕ್ಕಳು ಮಣ್ಣಿನಿಂದ ಗಣಪತಿಯನ್ನು ತಯಾರಿಸುವ ಕಾರ್ಯಗಾರದಲ್ಲಿ ಭಾಗವಹಿಸಿ ಸಂತಸ ಪಟ್ಟರು.
ಕಾರ್ಯಕ್ರಮದಲ್ಲಿ ವರ್ಣೋದಯ ಹಾರ್ಟ್ ಗ್ರೂಪ್ ಟ್ರಸ್ಟ್ ಅಧ್ಯಕ್ಷ ಕಿಶೋರ್ ಕುಮಾರ್, ಪ್ರೆಸ್ ಕ್ಲಬ್ ಅಧ್ಯಕ್ಷ ಶಶಿಧರ್ ದೋಣಿಹಕ್ಲು, ಸಹ ಕಾರ್ಯದರ್ಶಿ ಸತೀಶ್,   ರಂಗ ಅರಿಯಬ್ಬೆ, ಅರುಣ್, ಅಚ್ಯುತ್ ಕುಮಾರ್, ಉಮಾಮಹೇಶ್, ಸಿದ್ದೇಶ್ ಗೌಡ, ಭರತ್ ಹಾಗೂ ಪ್ರೆಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
*
ನಾವು ಹಳ್ಳಿಗಳಲ್ಲಿ ಎಮ್ಮೆ, ದನ ಮೇಯಿಸಲು ಹೋಗುತ್ತಿದ್ದೆವು. ಹೋಗಿ ಬಯಲಿನಲ್ಲಿ ದನ ಬಿಟ್ಟು ಮೂಲೆಗಳಲ್ಲಿ ಮಣ್ಣಿನಲ್ಲಿ ಕುಡಿಕೆ, ಒಲೆ, ಪಾತ್ರೆಗಳನ್ನು ಮಾಡುವುದು ಮಾಡುತ್ತಿದ್ದೆವು. ಈ ಆಟಗಳಿಂದ ಅಮ್ಮನ ಕೈಲಿ ಒದೆ ತಿಂದಿದ್ದು ಇದೆ ಇದೆಲ್ಲವನ್ನು ನೋಡಿದರೆ ನನ್ನ ಬಾಲ್ಯದ ದಿನಗಳು ನೆನೆಪಾಗುತ್ತಿದೆ.
                                                   | ಪ್ರಭು, ಜಿಪಂ ಸಿಇಒ
ವರ್ಷದಲ್ಲಿ ಎರಡೂ ಮೂರು ಹಬ್ಬಗಳಲ್ಲಿ ಗಣೇಶ ಹಬ್ಬ ಫೇವರೇಟ್. ಸ್ವಾತಂತ್ರ‍್ಯ ಹೋರಾಟದಲ್ಲಿ ಗಣೇಶ ಹಬ್ಬ ಪ್ರಮುಖ ಪಾತ್ರ ವಹಿಸಲಿದೆ. ಈ ಕಾರ್ಯಕ್ರಮ ನಿಮ್ಮಜೀವನದಲ್ಲಿ ನೆನಪಿಟ್ಟುಕೊಳ್ಳಬೇಕು.
                                  | ಅಶೋಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ