Star Pregnancy Look: ಪ್ರೆಗ್ನೆನ್ಸಿಯಲ್ಲಿ ಕಂಫರ್ಟಬಲ್ ಲುಕ್‌ಗೆ ನಟಿ ಸಂಜನಾ ಗರ್ಲಾನಿ ಆದ್ಯತೆ
Star Pregnancy Look: ಬಹುಭಾಷಾ ತಾರೆ ಸಂಜನಾ ಗರ್ಲಾನಿ ಎರಡನೇ ಮಗುವಿಗೆ ಸದ್ಯದಲ್ಲೆ ತಾಯಿಯಾಗಲಿದ್ದು, ನಟಿಯಾದರೂ ಕೂಡ ತಮ್ಮ ಕಂಫರ್ಟಬಲ್ ಲೈಫ್‌ಸ್ಟೈಲ್‌ಗೆ ಹೊಂದುವಂತೆ ತಮ್ಮ ಲುಕ್ ಅನ್ನು ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ಅವರು ಹೇಳುವುದೇನು? ಇಲ್ಲಿದೆ ಸಂದರ್ಶನದ ಡಿಟೇಲ್ಸ್.
(ವಿಶೇಷ ಸಂದರ್ಶನ: ಶೀಲಾ ಸಿ. ಶೆಟ್ಟಿ)
ಬಹುಭಾಷಾ ತಾರೆ ಸಂಜನಾ ಗರ್ಲಾನಿ (Sanjana Garlani) ಮೊದಲಿನಿಂದಲೂ ಸ್ಟೈಲಿಶ್ ತಾರೆ ಎಂದೇ ಖ್ಯಾತಿಗಳಿಸಿದವರು. ಒಂದಲ್ಲ ಒಂದು ಫ್ಯಾಷನ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ (Star Pregnancy Look). ಇದೀಗ ಅವರು ಮೊದಲ ಮಗು ಅಲಾರಿಕ್ ನಂತರ ತಮ್ಮ ಎರಡನೇ ಮಗುವಿಗೆ ಸದ್ಯದಲ್ಲೆ ತಾಯಿಯಾಗಲಿದ್ದಾರೆ. ಈ ಸಂತಸವನ್ನು ವಿಶ್ವವಾಣಿ ನ್ಯೂಸ್‌ನೊಂದಿಗೂ ಹಂಚಿಕೊಂಡ ಸಂಜನಾ, ಪ್ರೆಗ್ನೆನ್ಸಿ ಸಮಯದಲ್ಲಿ ಮಹಿಳೆಯರು ಹೇಗಿರಬೇಕು? ಯಾವ ಬಗೆಯ ಸ್ಟೈಲಿಶ್ ಲುಕ್ ಆವಾಯ್ಡ್ ಮಾಡಬೇಕು? ಕಂಫರ್ಟಬಲ್ ಲುಕ್‌ಗೆ ಆದ್ಯತೆ ಯಾಕೆ ನೀಡಬೇಕು ಎಂಬುದರ ಬಗ್ಗೆ ಸಲಹೆ ನೀಡಿದ್ದಾರೆ.
ವಿಶ್ವವಾಣಿ ನ್ಯೂಸ್: ಪ್ರೆಗ್ನೆನ್ಸಿ ಟೈಮ್‌ನಲ್ಲಿ ಸ್ಟೈಲಿಶ್ ಲುಕ್ಸ್‌ಗೆ ಆದ್ಯತೆ ನೀಡುತ್ತೀರಾ ಅಥವಾ ಕಂಫರ್ಟಬಲ್ ಔಟ್‌ಫಿಟ್‌ಗೆ ಮಾನ್ಯತೆ ನೀಡುತ್ತೀರಾ?
ಸಂಜನಾ ಗರ್ಲಾನಿ: ಕಂಫರ್ಟಬಲ್ ಲುಕ್‌ಗೆ ಆದ್ಯತೆ ನೀಡುತ್ತೇನೆ. ಕಂಫರ್ಟಬಲ್ ಫ್ಯಾಷನ್‌ಗೆ ಆದ್ಯತೆ ನೀಡುತ್ತೇನೆ.
ವಿಶ್ವವಾಣಿ ನ್ಯೂಸ್: ಎರಡನೇ ಪ್ರೆಗ್ನೆನ್ಸಿ ಸಮಯದಲ್ಲಿ ನೀವು ಮಹಿಳೆಯರಿಗೆ ಹೇಳುವುದೇನು?
ಸಂಜನಾ ಗರ್ಲಾನಿ: ದಿನಚರಿಯಲ್ಲಿ ಪತಿಯ ಸಹಕಾರ ಅತ್ಯಂತ ಅಗತ್ಯ. ಯಾರನ್ನು ಇಂಪ್ರೆಸ್ ಮಾಡಲು ಹೋಗಲೇ ಬೇಡಿ. ನೀವು ಹೇಗೆ ಕಾಣಿಸಬೇಕು? ಹೇಗಿರಬೇಕು? ಎಂದೆನಿಸುತ್ತದೆಯೋ ಹಾಗೆಯೇ ನೀವು ಕಾಣಿಸಿಕೊಳ್ಳಿ. ನಿಮ್ಮನ್ನು ಅರ್ಥಮಾಡಿಕೊಳ್ಳುವ ಪರಿಸರದಲ್ಲಿ ವಾಸಿಸಿ. ಮೆಡಿಕೇಷನ್‌ನಲ್ಲಿದ್ದಾಗ ಮೂಡ್ ಸ್ವಿಂಗ್ಸ್ ಆಗುವುದು ಸಹಜ. ಹಾಗಾಗಿ ಅದನ್ನು ಕುಟುಂಬದವರಿಗೆ ಅರ್ಥ ಮಾಡಿಸಿ.
ವಿಶ್ವವಾಣಿ ನ್ಯೂಸ್: ನಿಮ್ಮ ಪ್ರೆಗ್ನೆನ್ಸಿ ಫ್ಯಾಷನ್ ಮಂತ್ರ ಏನಾದರೂ ಇದೆಯಾ?
ಸಂಜನಾ ಗರ್ಲಾನಿ: ಖಂಡಿತಾ ಇಲ್ಲ! ಮೊದಲೇ ಹೇಳಿದಂತೆ, ಕಂಫರ್ಟಬಲ್ ಔಟ್‌ಫಿಟ್‌ಗೆ ಮೊದಲ ಆದ್ಯತೆ.
ವಿಶ್ವವಾಣಿ ನ್ಯೂಸ್: ಪ್ರೆಗ್ನೆನ್ಸಿಯಲ್ಲಿ ಯಾವುದನ್ನು ಫಾಲೋ ಮಾಡಬೇಕು? ಮಾಡಬಾರದು?
ಸಂಜನಾ ಗರ್ಲಾನಿ: ಯಾವುದೇ ಕಾರಣಕ್ಕೂ ಬೇರೆಯವರನ್ನು ಮೆಚ್ಚಿಸುವಂತಹ ಫ್ಯಾಷನ್ ಆಗಲಿ, ಲುಕ್ ಆಗಲಿ ಟ್ರೈ ಮಾಡಬೇಡಿ. ಮೊದಲು ನಿಮ್ಮ ಆಸೆಗೆ ಪೂರಕವಾಗುವಂತಹ ಉಡುಪುಗಳನ್ನು ಧರಿಸಿ. ಫ್ಯಾಷೆನಬಲ್ ಉಡುಪು ಧರಿಸಲೇ ಬೇಕಿದ್ದಲ್ಲಿ ಆದಷ್ಟೂ ದೇಹಕ್ಕೆ ನೋವಾಗದಂತಹ ಹಾಗೂ ಧಕ್ಕೆಯುಂಟು ಮಾಡದಂತಹ ಔಟ್‌ಫಿಟ್ ಧರಿಸಿ.
ವಿಶ್ವವಾಣಿ ನ್ಯೂಸ್: ಪ್ರೆಗ್ನೆನ್ಸಿಯಲ್ಲೂ ಫ್ಯಾಷೆನಬಲ್ ಆಗಿ ಕಾಣಿಸುವ ನಿಮ್ಮ ಬ್ಯೂಟಿ ಸೀಕ್ರೇಟ್ ಏನು?
ಸಂಜನಾ ಗರ್ಲಾನಿ: ಸದಾ ಹಸನ್ಮುಖಿಯಾಗಿರುವುದು. ಸಾವಧಾನದಿಂದ ಇರುವುದು. ಕುಟುಂಬದೊಂದಿಗೆ ಹೆಚ್ಚು ಕಾಲ ಕಳೆಯುವುದು. ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Stars Sankranti Celebration 2025: ಟ್ರೆಡಿಷನಲ್ ಲುಕ್‌ನಲ್ಲಿ ಸಂಕ್ರಾಂತಿ ಆಚರಿಸಿದ ಸೆಲೆಬ್ರಿಟಿಗಳು