Sunday, 23rd June 2024

ಮದುವೆ ಮಂಟಪದಲ್ಲಿ ಅಗ್ನಿ ದುರಂತ: 100 ಮಂದಿ ಸಾವು

ಬಾಗ್ದಾದ್ : ಉತ್ತರ ಇರಾಕ್ ನ ಮದುವೆ ಮಂಟಪವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 100 ಮಂದಿ ಮೃತಪಟ್ಟು, 150 ಮಂದಿ ಗಾಯಗೊಂಡಿದ್ದಾರೆ.

ಇರಾಕಿನ ಹಮ್ದಾನಿಯಾ ಪ್ರದೇಶದ ನಿನೆವೆ ಪ್ರಾಂತ್ಯದಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ರಾಜಧಾನಿ ಬಾಗ್ದಾದ್‌ನ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ ದೂರದಲ್ಲಿರುವ ಉತ್ತರ ನಗರ ಮೊಸುಲ್‌ನ ಹೊರಗೆ ಘಟನೆ ಸಂಭವಿಸಿದೆ.

ಬೆಂಕಿಯ ಕಾರಣದ ಬಗ್ಗೆ ತಕ್ಷಣದ ಮಾಹಿತಿ ತಿಳಿದು ಬಂದಿಲ್ಲ. ಟೆಲಿವಿಷನ್ ದೃಶ್ಯಾವಳಿ ಗಳು ಮದುವೆ ಮಂಟಪದ ಒಳಗೆ ಸುಟ್ಟು ಹೋದ ಅವಶೇಷಗಳನ್ನು ತೋರಿಸಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಆರೋಗ್ಯ ಅಧಿಕಾರಿಗಳು ಸರ್ಕಾರಿ ಸ್ವಾಮ್ಯದ ಇರಾಕಿ ಸುದ್ದಿ ಸಂಸ್ಥೆ ಮೂಲಕ ಸಾವಿನ ಅಂಕಿಅಂಶವನ್ನು ನೀಡಿದರು.

Leave a Reply

Your email address will not be published. Required fields are marked *

error: Content is protected !!