Friday, 18th October 2024

ಪ್ರೇಮಿಗಳ ದಿನ: ಪಾಕಿಸ್ತಾನದಲ್ಲಿ ಪ್ರೇಮಿಗಳಿಗೆ ಮಾರ್ಗಸೂಚಿ

ಇಸ್ಲಾಮಾಬಾದ್: ಪಾಕಿಸ್ತಾನದ ರಾಷ್ಟ್ರ ರಾಜಧಾನಿಯ ವೈದ್ಯಕೀಯ ಕಾಲೇಜು ತನ್ನ ಪ್ರೇಮಿಗಳ ದಿನದ ಮಾರ್ಗಸೂಚಿ ಗಳನ್ನು ಹೊರಡಿಸಿದೆ.

ಹುಡುಗಿಯರು ಹಿಜಾಬ್ ಧರಿಸುವಂತೆ ಮತ್ತು ಹುಡುಗರು ಬಿಳಿ ಪ್ರಾರ್ಥನಾ ಟೋಪಿಗಳನ್ನು ಧರಿಸಬೇಕು ಮತ್ತು ಯಾವಾಗಲೂ ಹುಡು ಗಿಯರು ಮತ್ತು ಹುಡುಗರು ಎರಡು ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು ಎಂಬ ಸೂಚನೆ ನೀಡಿದೆ.

ಇಸ್ಲಾಮಾಬಾದ್ ಇಂಟರ್ನ್ಯಾಷನಲ್ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಪ್ರೇಮಿಗಳ ದಿನಾಚರಣೆಯಲ್ಲಿ ಭಾಗವಹಿಸದಂತೆ ಸುತ್ತೋಲೆ ಹೊರಡಿಸಿದೆ. ”ಕಾಲೇಜ್ ವಿದ್ಯಾರ್ಥಿಗಳಿಗೆ ಅದು ಯುವಕರನ್ನು ತಪ್ಪು ದಾರಿಗೆ ಕೊಂಡೊಯ್ಯುವ ಚಟುವಟಿಕೆಗಳು ಎಂದಿದೆ” ಎಂದು ಪತ್ರಿಕೆ ವರದಿ ಮಾಡಿದೆ.

ವಿಶ್ವವಿದ್ಯಾನಿಲಯದ ಡ್ರೆಸ್ ಕೋಡ್ ಪ್ರಕಾರ ಎಲ್ಲಾ ವಿದ್ಯಾರ್ಥಿನಿಯರನ್ನು ಸರಿಯಾಗಿ ಹಿಜಾಬ್ ಧರಿಸಬೇಕು. ಕುತ್ತಿಗೆ ಮತ್ತು ಎದೆಯನ್ನು ಹಿಜಾಬ್‌ನೊಂದಿಗೆ ಮುಚ್ಚಿಕೊಳ್ಳ ಬೇಕು. ಎಲ್ಲಾ ಪುರುಷ ವಿದ್ಯಾರ್ಥಿಗಳಿಗೆ ಬಿಳಿ ಪ್ರಾರ್ಥನಾ ಕ್ಯಾಪ್‌ಗಳನ್ನು ಧರಿಸಲು ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮಾರ್ಗಸೂಚಿಗಳನ್ನು ಉಲ್ಲಂಘಿಸುವ ವಿದ್ಯಾರ್ಥಿಗಳನ್ನು ಹಿಡಿಯಲು ಕಾಲೇಜು ಸಿಬ್ಬಂದಿ ಸದಸ್ಯರು ಕ್ಯಾಂಪಸ್‌ನಲ್ಲಿ ಗಸ್ತು ತಿರುಗುತ್ತಾರೆ ಎಂದು ಅದು ಎಚ್ಚರಿಸಿದೆ.

ಈ ನಿಯಮಗಳನ್ನು ಉಲ್ಲಂಘಿಸುವವರಿಗೆ PKR 5,000 ದಂಡ ವಿಧಿಸಲಾಗುವುದು ಎಂದು ಕಾಲೇಜು ಸುತ್ತೋಲೆಯನ್ನು ಉಲ್ಲೇಖಿಸಿದ ವರದಿ ತಿಳಿಸಿದೆ.

ಇನ್ನೂ ಕರ್ನಾಟಕ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಸರ್ಕಾರ ಇಸ್ಲಾಮಾಬಾದಿನ ಭಾರತೀಯ ಹೈಕಮಿಷನ್ ಗೆ ಸಮನ್ಸ್ ವಿಧಿಸಿದೆ. ಹಿಜಾಬ್ ಧರಿಸಿದ ಕಾರಣಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿಕ್ಷಣ ನಿರಾಕರಿಸಿರುವುದಕ್ಕೆ ಪಾಕ್ ಆತಂಕ ವ್ಯಕ್ತಪಡಿಸಿದ್ದು, ಭಾರತ ಸರ್ಕಾರ ಈ ಕೂಡಲೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಸಚಿವರು,  ಹಿಜಾಬ್ ಧರಿಸುವುದು ಬಿಡುವುದು ಅವರವರ ವೈಯಕ್ತಿಕ ನಿರ್ಧಾರ. ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವುದು ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪಾಕ್ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಮುಕ್ತರ್ ಅಬ್ಬಾಸ್ ನಖ್ವಿ ಅಭಿಪ್ರಾಯಪಟ್ಟಿದ್ದಾರೆ.