Israel-Hamas: ಇಸ್ರೇಲ್ ನಡೆಸಿದ ದಾಳಿಯಲ್ಲಿ ಕಮಾಂಡರ್ ಮುಹಮ್ಮದ್ ಸಿನ್ವಾರ್ ಹತ್ಯೆ; ಮೃತದೇಹ ಪತ್ತೆ
ಕಳೆದ ವಾರ ಗಾಜಾದ ಮೇಲೆ ಇಸ್ರೇಲ್ ನಡೆಸಿದ ಸರಣಿ ದಾಳಿಯಲ್ಲಿ ಹಮಾಸ್‌ನ ಕಮಾಂಡರ್ ಮುಹಮ್ಮದ್ ಸಿನ್ವಾರ್ ಹತನಾಗಿದ್ದಾನೆ ಎಂದು ತಿಳಿದು ಬಂದಿದೆ. ಮುಹಮ್ಮದ್ ಸಿನ್ವಾರ್ , ಕಳೆದ ಅಕ್ಟೋಬರ್‌ನಲ್ಲಿ ದಕ್ಷಿಣ ಗಾಜಾದಲ್ಲಿ ಐಡಿಎಫ್‌ನಿಂದ ಕೊಲ್ಲಲ್ಪಟ್ಟ ಗಾಜಾದ ಮಾಜಿ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್‌ನ ಕಿರಿಯ ಸಹೋದರ.


ಟೆಲ್ ಅವಿವಾ: ಕಳೆದ ವಾರ ಗಾಜಾದ ಮೇಲೆ ಇಸ್ರೇಲ್ ನಡೆಸಿದ ಸರಣಿ (Israel-Hamas) ದಾಳಿಯಲ್ಲಿ ಹಮಾಸ್‌ನ ಕಮಾಂಡರ್ ಮುಹಮ್ಮದ್ ಸಿನ್ವಾರ್ ಹತನಾಗಿದ್ದಾನೆ ಎಂದು ತಿಳಿದು ಬಂದಿದೆ. ಮುಹಮ್ಮದ್ ಸಿನ್ವಾರ್ , ಕಳೆದ ಅಕ್ಟೋಬರ್‌ನಲ್ಲಿ ದಕ್ಷಿಣ ಗಾಜಾದಲ್ಲಿ ಐಡಿಎಫ್‌ನಿಂದ ಕೊಲ್ಲಲ್ಪಟ್ಟ ಗಾಜಾದ ಮಾಜಿ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್‌ನ ಕಿರಿಯ ಸಹೋದರ. ತನ್ನ ಸಹೋದರನ ಸಾವಿನ ನಂತರ ಮುಹಮ್ಮದ್ ಸಿನ್ವಾರ್ ನಾಯಕತ್ವವನ್ನು ವಹಿಸಿಕೊಂಡಿದ್ದ. ಕೆಲ ವರದಿಗಳ ಪ್ರಕಾರ ಆತನ ಮತ್ತೊಬ್ಬ ಸಹೋದರ ಜಕಾರಿಯಾ ಸಿನ್ವಾರ್ ಕೂಡ ಹತನಾಗಿದ್ದಾನೆ ಎನ್ನಲಾಗಿದೆ.
ಸಿನ್ವಾರ್ ಅಥವಾ ಶಬಾನಾ ಸಾವನ್ನು ಇಸ್ರೇಲ್ ಇನ್ನೂ ಧೃಡಪಡಿಸಿಲ್ಲ. ಮಂಗಳವಾರ ನಡೆದ ದಾಳಿಗಳು ಯುರೋಪಿಯನ್ ಆಸ್ಪತ್ರೆಯ ಕೆಳಗಿರುವ ಭೂಗತ ಕಮಾಂಡ್ ಕಾಂಪೌಂಡ್ ಅನ್ನು ಗುರಿಯಾಗಿಸಿಕೊಂಡು ನಡೆಸಿದ್ದಾಗಿತ್ತು. ಅಲ್ಲಿ ಸಿನ್ವಾರ್ ಆಶ್ರಯ ಪಡೆದಿದ್ದಾನೆಂದು ನಂಬಲಾಗಿದೆ. ನಂತರ ಐಡಿಎಫ್ ಆ ಪ್ರದೇಶದಲ್ಲಿ ಹಲವಾರು ಬಾರಿ ಬಾಂಬ್ ದಾಳಿ ಮಾಡಿತು.
ಕಳೆದ ಜುಲೈನಲ್ಲಿ ಹಮಾಸ್‌ನ ಉನ್ನತ ಮಿಲಿಟರಿ ಕಮಾಂಡರ್ ಮುಹಮ್ಮದ್ ಡೀಫ್ ಹತ್ಯೆಯ ನಂತರ , ಮುಹಮ್ಮದ್ ಸಿನ್ವಾರ್ ಭಯೋತ್ಪಾದಕ ಗುಂಪಿನ ಮಿಲಿಟರಿ ವಿಭಾಗದ ಉಸ್ತುವಾರಿ ವಹಿಸಿಕೊಂಡಿದ್ದ. ನಂತರ, ಸಿನ್ವಾರ್ ಅಣ್ಣನನ್ನು ಐಡಿಎಫ್ ಪಡೆಗಳು ಕೊಂದ ನಂತರ, ಗಾಜಾ ಪಟ್ಟಿಯಲ್ಲಿ ಭಯೋತ್ಪಾದಕ ಗುಂಪಿನ ವಾಸ್ತವಿಕ ನಾಯಕನಾಗಿದ್ದ. ಒತ್ತೆಯಾಳುಗಳ ಬಿಡುಗಡೆಗಾಗಿ ಹಮಾಸ್ ಜೊತೆಗಿನ ಮಾತುಕತೆಗಳಿಗೆ ಸಂಬಂಧಿಸಿದಂತೆ ಮುಹಮ್ಮದ್ ಸಿನ್ವಾರ್ ಹಲವು ಬಾರಿ ಇಸ್ರೇಲ್ ಜೊತೆ ಮಾತುಕತೆ ನಡೆಸಿದ್ದ. ಹಮಾಸ್ ಹಲವು ಬಾರಿ ಕದನ ವಿರಾಮವನ್ನು ಉಲ್ಲಂಘಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.
ಈ ಸುದ್ದಿಯನ್ನೂ ಓದಿ: Hamas Hostage: ಅಮೆರಿಕನ್ ಪ್ರಜೆಯ ಬಿಡುಗಡೆಗೆ ಹಮಾಸ್ ಒಪ್ಪಿಗೆ-ಕದನ ವಿರಾಮ ಮಾತುಕತೆಗೆ ಬರುವುದೇ ಹಮಾಸ್?
ಇಸ್ರೇಲ್‌ಗೆ ಬೇಕಿದ್ದ ಪ್ರಮುಖ ಉಗ್ರನಾಗಿದ್ದ ಈತ. 1990 ರ ದಶಕದಲ್ಲಿ ಈತನನ್ನು ಇಸ್ರೇಲ್ ಬಂಧಿಸಿ, 9 ತಿಂಗಳುಗಳ ಕಾಲ ಜೈಲಿನಲ್ಲಿಟ್ಟಿತ್ತು. 2000 ನೇ ಇಸವಿಯಲ್ಲಿ ಆತ ಅಲ್ಲಿಂದ ತಪ್ಪಿಸಿಕೊಂಡಿದ್ದ. ಸಿನ್ವಾರ್ ಐಡಿಎಫ್ ಸೈನಿಕ ಗಿಲಾಡ್ ಶಾಲಿತ್ ಅವರನ್ನು ಅಪಹರಿಸಿದ ಹಮಾಸ್ ಕೋಶದ ಭಾಗವಾಗಿದ್ದ. ಅಕ್ಟೋಬರ್ 7, 2023 ರಂದು ದಕ್ಷಿಣ ಇಸ್ರೇಲ್ ಮೇಲೆ ದಾಳಿ ಮಾಡಿದ ಭಯೋತ್ಪಾದಕ ಗುಂಪು ಸುಮಾರು 1,200 ಜನರನ್ನು ಕೊಂದು 251 ಒತ್ತೆಯಾಳುಗಳನ್ನು ತೆಗೆದುಕೊಂಡಾಗ ಆರಂಭವಾದ ಯುದ್ಧ ಇನ್ನೂ ನಿಂತಿಲ್ಲ.